ವಾಹನ ಪ್ರೇಮಿಗಳನ್ನು ನಿರಾಶೆಗೊಳಿಸಿದ Auto Expo

ಈ ವಾಹನ ಪ್ರದರ್ಶನದಲ್ಲಿ ಭಾಗವಹಿಸಿದ ಹೆಚ್ಚಿನವರು ಸ್ಥಳೀಯ ಕಾರು ಡೀಲರುಗಳು. ಇಲ್ಲಿ ಕೆಲವು ಹೊಸ ಕಾರುಗಳಿತ್ತು ನಿಜ. ಆದರೆ ಪ್ರಮುಖ ಬ್ರಾಂಡುಗಳ ಗೈರು ಹಾಜರಿ ಈ ವಾಹನ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು.
ಪ್ರದರ್ಶನದಲ್ಲಿ ಟಾಟಾ ಮೋಟರ್ಸ್ ವಾಹನಗಳೇ ಎಲ್ಲೂ ಕಂಡುಬರಲಿಲ್ಲ. ಇತ್ತೀಚೆಗೆ ರಸ್ತೆಗಿಳಿದ ನೂತನ ಟಾಟಾ ವಿಸ್ಟಾ ಕಾರನ್ನು ನೋಡುವ ಬಯಕೆ ಎಲ್ಲರಿಗಿತ್ತು. ಹೋಂಡಾ, ಬಿಎಂಡಬ್ಲ್ಯು ಮತ್ತು ಯಮಾಹ ವಾಹನಗಳಿದ್ದವು. ಆದರೆ ಹೀರೋ, ಟಿವಿಎಸ್ ಮತ್ತು ಬಜಾಜ್ ಬೈಕುಗಳೂ ಇರಲಿಲ್ಲ. ದೇಶದ ಬೃಹತ್ ಮೂರು ಬೈಕ್ ಕಂಪನಿಗಳೇ ಇಲ್ಲದ ಇದು ಎಂಥ ವಾಹನ ಪ್ರದರ್ಶನವಪ್ಪ ಅಂತ ಅನಿಸಿದ್ದು ಸುಳ್ಳಲ್ಲ.
ಬೃಹತ್ ವಾಹನ ಪ್ರದರ್ಶನವಾಗಬೇಕಿದ್ದ ಈ ಕಾರ್ಯಕ್ರಮ ಸ್ಥಳೀಯ ಕಾರ್ಯಕ್ರಮವಾಗಿತ್ತು. ಇಲ್ಲಿ ಬಹಳಷ್ಟು ಹೊಸ ವಾಹನಗಳನ್ನು ನಾವೇನು ನಿರೀಕ್ಷೆ ಮಾಡಿರಲಿಲ್ಲ. ಆದರೆ ನೂರು ರು. ಶುಲ್ಕ ನೀಡಿದ್ದೇವೆ ತಾನೇ ಅದಕ್ಕೆ ತಕ್ಕಷ್ಟು ಆದರೂ...
ಬೆಂಗಳೂರಿನ ವಾರ್ಷಿಕ ವಾಹನ ಪ್ರದರ್ಶನದ ಕುರಿತು ನಮ್ಮ ನಿರೀಕ್ಷೆ ಬಹಳಷ್ಟಿತ್ತು.


Click it and Unblock the Notifications








