ರೆಕ್ಕೆ ಬಿಚ್ಚಿ ಬಾನೆತ್ತರಕ್ಕೆ ಹಾರಿದ ಬೆಳ್ಳಕ್ಕಿ

ಕೆಲವು ತಿಂಗಳುಗಳ ಹಿಂದೆಯಷ್ಟೇ ಹಾರುವ ಕಾರು ಕುರಿತು ವರದಿ ಮಾಡಿದ್ದೆವು. ಅಂದ ಹಾಗೆ ಜಗತ್ತಿನ ಮೊದಲ ಹಾರುವ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟೆರ್ರಾಫುಜಿಯಾ ಟ್ರಾನ್ಸಿಷನ್ (Terrafugia Transition) ಮೊದಲ ಯಶಸ್ವಿ ಸಾರ್ವಜನಿಕ ಹಾರಾಟ ನಡೆಸಿದೆ.

ಈ ರೋಚಕ ಕ್ಷಣಕ್ಕೆ ಅಮೆರಿಕಾ ವಾಹನ ಪ್ರಿಯರು ಸಾಕ್ಷಿಯಾಗಿದ್ದರು. ಅಮೆರಿಕದ ಓಶ್‌ಕೋಶ್‌ನಲ್ಲಿ ಸಾಗಿದ ಇಎಎ ಏರ್ ವೆಂಚ್ವುರ್ ಏರ್ ಶೋದಲ್ಲಿ ಯಶಸ್ವಿ ಹಾರಾಟ ಹಮ್ಮಿಕೊಳ್ಳಲಾಗಿತ್ತು. ರೆಕ್ಕೆ ಬಿಚ್ಚಿ ಹಾರಲಿರುವ ಈ ಕಾರು ರಸ್ತೆಯಲ್ಲಿ ಸಾಮಾನ್ಯ ಕಾರಿನಂತೆ ಚಲಿಸುವ ಸಾಮರ್ಥ್ಯ ಹೊಂದಿದೆ. ಅಂದ ಹಾಗೆ ಮುಂದಿನ ಒಂದೆರಡು ವರ್ಷಗಳಲ್ಲಿ ಹಾರುವ ಕಾರು ರಸ್ತೆ ಪ್ರವೇಶಿಸುವ ನಿರೀಕ್ಷೆಯಿದೆ.

ವಿಸ್ತಾರವಾದ ರನ್ ವೇಗಳ ಅಗತ್ಯವಿಲ್ಲ

ವಿಸ್ತಾರವಾದ ರನ್ ವೇಗಳ ಅಗತ್ಯವಿಲ್ಲ

ವಿಮಾನಗಳಿಗೆ ಹೋಲಿಸಿದರೆ ಹಾರುವ ಕಾರು ಟೇಕ್ ಆಫ್ ಆಗಲು ಹೆಚ್ಚಿನ ರನ್ ವೇ ಅಗತ್ಯ ಬರುವುದಿಲ್ಲ. ಅಂದರೆ ರಸ್ತೆಯಲ್ಲಿ ಚಲಿಸುತ್ತಿರುವಾಗ ಕೇವಲ 30 ಸೆಕೆಂಡುಗಳಲ್ಲಿ ರೆಕ್ಕಿ ಬಿಚ್ಚಿ ಆಕಾಶಕ್ಕೆ ಹಾರಲಿದೆ.

ಮೊದಲ ಮಾದರಿ

ಮೊದಲ ಮಾದರಿ

ಪ್ರಸ್ತುತ ಹಾರುವ ಕಾರಿನ ಮೊದಲ ಮಾದರಿಯಷ್ಟೇ ಅನಾವರಣಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು, ಆ ಬಳಿಕ ಉತ್ಪಾದನಾ ವರ್ಷನ್ ಪಡೆದುಕೊಳ್ಳಲಿದೆ.

100 ಮಂದಿ ಬುಕ್ಕಿಂಗ್

100 ಮಂದಿ ಬುಕ್ಕಿಂಗ್

ಇದುವರೆಗೆ 100 ಮಂದಿ ಹಾರುವ ಕಾರಿಗಾಗಿ ಬುಕ್ಕಿಂಗ್ ನಡೆಸಿದ್ದಾರೆ. ಇದು ಒಂದು ಕೋಟಿಗಳಷ್ಟು ದುಬಾರಿಯಾಗಿದೆ.

ಕೋಟಿಗಿಂತಲೂ ದುಬಾರಿ

ಕೋಟಿಗಿಂತಲೂ ದುಬಾರಿ

ಟ್ರಾನ್ಸಿಷನ್ ಹಾರುವ ಕಾರು ಎಲ್ಲರ ಕೈಗೆ ಸಿಗದು. ಭಾರತಕ್ಕೆ ಬಂದರೆ ಇದರ ದರ ಹಲವು ಕೋಟಿ ರುಪಾಯಿಗಳಲ್ಲಿ ಇರಲಿದೆ.

ಪೈಲಟ್ ಪರವಾನಗಿ ಬೇಕು

ಪೈಲಟ್ ಪರವಾನಗಿ ಬೇಕು

ಇಷ್ಟೆಲ್ಲ ಆದರು ಹಾರುವ ಕಾರನ್ನು ಚಲಾಯಿಸುವುದಕ್ಕೆ ಪೈಲಟ್ ಪರವಾನಿಗೆ ಬೇಕು ಎಂಬುದು ಕೂಡಾ ಸ್ವಲ್ಪ ನಿರಾಸೆಗೆ ಎಡೆಮಾಡಿಕೊಟ್ಟಿದೆ.

4 ಜನರ ಪಯಣ

4 ಜನರ ಪಯಣ

ಇನ್ನು ನಾಲ್ಕು ಜನರಿಗೆ ಆರಾಮದಾಯಕವಾಗಿ ಚಲಿಸುವ ಸಾಮರ್ಥ್ಯವನ್ನು ಟೆರ್ರಾಫುಜಿಯಾ ಟ್ರಾನ್ಸಿಷನ್ ಹಾರುವ ಕಾರು ಹೊಂದಿದೆ.

'ಟೆರ್ರಾಫುಜಿಯಾ ಟ್ರಾನ್ಸಿಷನ್' ಹಾರುವ ಕಾರು

ವೀಡಿಯೋ ವೀಕ್ಷಿಸಿ

'ಟೆರ್ರಾಫುಜಿಯಾ ಟ್ರಾನ್ಸಿಷನ್' ಹಾರುವ ಕಾರು

ವೀಡಿಯೋ ವೀಕ್ಷಿಸಿ

Most Read Articles

Kannada
English summary
Earlier this week visitors to the EAA AirVenture airshow in Oshkosh, Wisconsin, USA witnessed an event which will go down in history as the first successful public flight of a modern day, fully functional flying car. That car is the Terrafugia Transition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X