ಟ್ರಾಫಿಕ್ ಸಮಸ್ಯೆಗೆ ಸದ್ಯದಲ್ಲೇ ಪರಿಹಾರ; ಬರುತ್ತಿದೆ ಹಾರುವ ಕಾರು
ವಿಪರೀತ ವಾಹನ ದಟ್ಟಣೆಯಿಂದಾಗಿ ನೀವು ಬೆಸತ್ತು ಹೋಗಿದ್ದೀರಾ? ಟ್ರಾಫಿಕ್‌ನಿಂದಾಗಿ ಜೀವನದ ಒಂದು ಅಮೂಲ್ಯವಾದ ಭಾಗವನ್ನು ಕಳೆದುಕೊಳ್ಳುತ್ತೀರಾ? ಇನ್ನು ಭವಿಷ್ಯದಲ್ಲಿ ಅಂತಹ ಸಮಸ್ಯೆ ಬರಲಾರದು ಬಿಡಿ.
ಹಾರಾಡುವ ಕಾರು ಬಗ್ಗೆ ನೀವು ಈ 0ಹಿಂದೆಯೇ ವರದಿಗಳನ್ನು ಓದಿರುತ್ತೀರಾ. ಆದರೆ ಕೊನೆಗೂ ಹಾರುವ ಕಾರು ನನಸಾಗುವ ಕಾಲ ಇನ್ನು ಹತ್ತಿರ ಹತ್ತಿರಕ್ಕೆ ಬಂದಿದೆ. ಹೌದು, ಮುಂದಿನ ಎರಡು ವರ್ಷದೊಳಗೆ ಹಾರಾಡುವ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಅಂದರೆ 2015ರಲ್ಲಿ ಹಾರಾಡುವ ಕಾರು ನನಸಾಗಲಿದೆ.
ಪ್ರತಿಷ್ಠಿತ Terrafugia ಕಂಪನಿಯು TF-X ಹಾರಾಡುವ ಕಾರು ಅಭಿವೃದ್ಧಿಪಡಿಸಿದ್ದು, ಖಾಸಗಿ ಜೆಟ್ ಭಾಗವಾಗಿರುವ ಎರಡು ಸೀಟುಗಳ, ನಾಲ್ಕು ಚಕ್ರದ, ಕಾರು ತರಹನೇ ಡ್ರೈವ್ ಮಾಡಬಹುದಾದ ಎರಡು ರೆಕ್ಕೆಗಳ ವಾಹನ ಮುಂದಿನ ಎರಡು ವರ್ಷದೊಳಗೆ ಮಾರಾಟಕ್ಕೆ ಲಭ್ಯವಾಗಲಿದೆ.
ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಹಾರಾಡುವ ಕಾರು ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ...

ಟೆಕ್ ಆಫ್‌ಗಾಗಿ ಯಾವುದೇ ರನ್‌ವೇಗಳ ಅಗತ್ಯವಿಲ್ಲ ಎಂಬುದು ಈ ಕಾರಿನ ವಿಶೇಷತೆಯಾಗಿದೆ. ಅಂದರೆ ಒಂದು ಸಾಮಾನ್ಯ ಕಾರಿನಂತೆ ಸುಲಲಿತವಾಗಿ ಚಲಿಸಲಿದೆ.

ಈ TF-X ಮಾಡೆಲ್ ನೋಡಲು ವಿಮಾನ ರೂಪ ಹೊಂದಿದೆ. ಕಳೆದ ವರ್ಷ ಯಶಸ್ವಿ ಪರೀಕ್ಷೆ ನಡೆಸಿದ್ದ ಇದು ಎಂಟು ನಿಮಿಷಗಳಲ್ಲಿ 14000 ಅಡಿಗಳಷ್ಟು ಹಾರಾಟ ನಡೆಸಿತ್ತು.

ಆದರೆ ದರದ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಮೂಲಗಳ ಪ್ರಕಾರ ಒಂದು ಕೋಟಿಗಿಂತಲೂ ಹೆಚ್ಚು ದುಬಾರಿಯಾಗುವ ಸಾಧ್ಯತೆಯಿದೆ. ರಸ್ತೆಯಲ್ಲಿ ಪ್ರತಿ ಗಂಟೆಗೆ 70 ಮೈಲ್ ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ಕಾರು ಗಾಳಿಯಲ್ಲಿ 115 ವೇಗತೆಯಲ್ಲಿ ಚಲಿಸಲಿದೆ.

23 ಗ್ಯಾಲನ್ ಟ್ಯಾಂಕ್ ಆಟೋಮೋಟಿವ್ ಇಂಧನ ಶಕ್ತಿ ನೆರವಿನಿಂದ ಇದು ಹಾರಾಟ ನಡೆಸಲಿದೆ. ರಸ್ತೆ ಪ್ರವೇಶಿಸಿದಾಗ ರಿಯರ್ ವೀಲ್ ಡ್ರೈವ್ ವ್ಯವಸ್ಥೆಯಿರಲಿದೆ.

ಸುರಕ್ಷತೆಗೂ ಹೆಚ್ಚು ಆದ್ಯತೆ ಕೊಡಲಾಗಿದ್ದು, ಎರಡು ಪ್ರಯಾಣಿಕರಿಗೆ ಏರ್ ಬ್ಯಾಗ್ ಹಾಗೂ ಸಂಪೂರ್ಣ ಕಾರಿಗೆ ಜೀವ ರಕ್ಷಕ ಪ್ಯಾರಾಚೂಟ್ ವ್ಯವಸ್ಥೆಯಿದೆ.

ಇಷ್ಟೆಲ್ಲ ಆದರೂ ಇದನ್ನು ರೈಡ್ ಮಾಡಲು ಪೈಲಟ್ ಲೈಸನ್ಸ್ ಪಡೆಯುವ ಅಗತ್ಯವಿದೆ. ವಿಮಾನ ತರಹನೇ ಲ್ಯಾಂಡ್ ಆಗುವ ಈ ಕಾರಿನ ರೆಕ್ಕೆಗಳು ಲ್ಯಾಂಡ್ ಆದ ಬಳಿಕ ಮಡಚಿಕೊಳ್ಳುತ್ತದೆ.

ಟಿಎಫ್-ಎಫ್ ಹಾರುವ ಕಾರು 600 ಹಾರ್ಸ್ ಪವರ್ ಉತ್ಪಾದಿಸುವುದರಿಂದ ಟೇಕ್ ಆಫ್ ಆಗಲು ದೊಡ್ಡ ರನ್ ವೇಗಳ ಅಗತ್ಯ ಬೀಳುವುದಿಲ್ಲ. ಹೈಬ್ರಿಡ್ ತಳಿಯ ಈ ಕಾರನ್ನು ಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಸೆಡಾನ್ ವಿನ್ಯಾಸ ಪಡೆದುಕೊಂಡಿರುವ ಫ್ಲೈಯಿಂಗ್ ಕಾರಿನಲ್ಲಿ ಡ್ರೈವಿಂಗ್ ಹಾಗೂ ಫ್ಲೈಯಿಂಗ್ ಮೋಡ್‌ಗಳಿವೆ. ಇದು ಚಾಲಕನ ಅಗತ್ಯಕ್ಕಾನುಸಾರವಾಗಿ ಕಾರ್ಯ ನಿರ್ವಹಿಸುತ್ತದೆ. ಅಂದರೆ ನೆಲಕ್ಕೆ ಲ್ಯಾಂಡ್ ಆದ ಬಳಿಕ ಇದರ ರೆಕ್ಕೆಗಳು ಮಡಚಿಕೊಳ್ಳುತ್ತದೆ.

500 ಮೈಲ್ ದೂರ ತನಕ ಯಾವುದೇ ಅಡಚಣೆಯಿಲ್ಲದೆ ಹಾರಾಡುವ ಶಕ್ತಿಯನ್ನು ಹೊಂದಿದ್ದು, ಕಂಪನಿಯ ಪ್ರಕಾರ ನಾಲ್ಕು ಜನ ಪ್ರಯಾಣಿಕರಿಗೆ ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ಹಾರಾಡುವ ಕಾರು

ಹಾರಾಡುವ ಕಾರು

ಹಾರಾಡುವ ಕಾರು

ಹಾರಾಡುವ ಕಾರು

ಹಾರಾಡುವ ಕಾರು



Click it and Unblock the Notifications








