ಭವಿಷ್ಯತ್ತಿನ ನಾವೀನ್ಯ ಕಾನ್ಸೆಪ್ಟ್ ನೊಂದಿಗೆ ರಿನ್ ಸ್ಪೀಡ್
ಭವಿಷ್ಯತ್ತಿನ ಕಾನ್ಸೆಪ್ಟ್ ಕಾರನ್ನು ರಿನ್ ಸ್ಪೀಡ್ ಪ್ರದರ್ಶಿಸಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಕೆರಳಿಸಿದೆ.
ಭವಿಷ್ಯತ್ತಿನ ಸಂಚಾರ ವ್ಯವಸ್ಥೆಯು ಹೇಗೆ ಎಂಬುದನ್ನು ಯಾವತ್ತಾದರೂ ಊಹಿಸಿದ್ದೀರಾ? ಸದಾ ನಾವೀನ್ಯ ತಂತ್ರಜ್ಞಾನ ಪರಿಚಯಿಸುವುದರಲ್ಲಿ ಮುಂಚೂಣಿಯಲ್ಲಿರುವ ಸ್ವಿಜರ್ಲೆಂಡ್ ನ ವಾಹನ ಸಂಸ್ಥೆ ರಿನ್ ಸ್ಪೀಡ್ ಅತಿ ನೂತನ ಆಟೋನೋಮಸ್ ಓಯಸೀಸ್ ಕಾನ್ಸೆಪ್ಟ್ ಪ್ರದರ್ಶಿಸಿದೆ.

2017 ಜನವರಿಯಲ್ಲಿ ನಡೆಯಲಿರುವ ಕನ್ಯ್ಸೂಮರ್ ಎಲೆಕ್ಟ್ರಾನಿಕ್ಸ್ ಶೋದಲ್ಲಿ ಸಾರ್ವಜನಿಕ ಪ್ರದರ್ಶನ ಕಾಣಲಿರುವ ಈ ಸ್ವಯಂಚಾಲಿತ ಸಿದ್ಧಾಂತದ ವಾಹನವು ವಾಹನ ಸ್ನೇಹಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ.

ಎರಡು ಸೀಟುಗಳ ಆಸನ ವ್ಯವಸ್ಥೆಯ ಈ ಕಾನ್ಸೆಪ್ಟ್ ಕಾರನ್ನು ಪ್ರಮುಖವಾಗಿಯೂ ನಗರದ ಪ್ರದೇಶದ ಭವಿಷ್ಯದ ವಾಹನ ಸಂಚಾರಕ್ಕೆ ಪೂರಕವಾಗಿ ರಚಿಸಲಾಗಿದೆ.

ಮುಂಭಾಗದ ಚಕ್ರಗಳು ತನ್ನದೇ ಅಶ್ವದಲ್ಲಿ ತಿರುಗಲಿದ್ದು, ಇಕ್ಕಟ್ಟಾದ ತಿರುಗುಗಳಲ್ಲೂ ಪಾರ್ಕಿಂಗ್ ತೊಂದರೆ ಇಲ್ಲದೆ ಚಲಿಸಬಹುದಾಗಿದೆ.

ಕಾರಿನೊಳಗೆ ಆಧುನಿಕತೆಗೆ ತಕ್ಕಂತೆ ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇದು ಆರ್ಮ್ ಚೇರ್ ಜೊತೆಗೆ ಸೈಡ್ ಬೋರ್ಡ್, 5ಕೆ ಪರದೆ, ವಾಯ್ಸ್, ಗಸ್ಟರ್ ಕಂಟ್ರೋಲ್ ವ್ಯವಸ್ಥೆಗಳನ್ನು ಪಡೆದಿದೆ.

ಡ್ಯಾಶ್ ಬೋರ್ಡ್ ನಲ್ಲಿ ಮಡಚಬಹುದಾದ ಸ್ಟೀರಿಂಗ್ ವೀಲ್ ಸೇವೆಯನ್ನು ಕೊಡಲಾಗಿದೆ. ಇನ್ನು ಮೊಬೈಲ್ ಆಪ್ ಸಂಪರ್ಕ ಕಲ್ಪಿಸಿಕೊಡಲಾಗಿದೆ.

ವಿದ್ಯುತ್ ಚಾಲಿತ ಈ ವಾಹನದಲ್ಲಿ ವಿಶೇಷ ವಿಂಡ್ ಸ್ಕ್ರೀನ್ ಇದರಲ್ಲಿದ್ದು, ಹೊರಗಿನ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ.

ಇವೆಲ್ಲದಕ್ಕೂ ಮಿಗಿಲಾಗಿ ಪರಿಸರ ಸ್ನೇಹಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ವಿಂಡ್ ಸ್ಕ್ರೀನ್ ಕೆಳಗಡೆ ಸಣ್ಣದಾದ ಗಾರ್ಡನ್ ನಿರ್ಮಿಸಲಾಗಿದೆ.

ರಿನ್ ಸ್ಪೀಡ್ ಬಾಸ್ ಫ್ರಾಂಕ್ ರಿಂಡರ್ನೆಚ್ ಎಂಬವರೇ ಇಂತಹದೊಂದು ನಾವೀನ್ಯ ವಿನ್ಯಾಸವನ್ನು ಕಲ್ಪಿಸಿಕೊಟ್ಟಿದ್ದಾರೆ.

ಇದು ದೈನಂದಿನ ಸವಾರಿಯ ಜೊತೆಗೆ ಸರಕು ಸಾಗಣೆಗೂ ನೆರವಾಗಲಿದೆ. ಅಂತೆಯೇ ವಿಶೇಷ ಕೋಡ್ ನಿಂದ ಕಾರ್ಯಾಚರಿಸಲಿದೆ.


Click it and Unblock the Notifications








