ಹ್ಯುಂಡೈ ವಿಷನ್ ಕಾನ್ಸೆಪ್ಟ್ - ಭವಿಷ್ಯದತ್ತ ದಿಟ್ಟ ಹೆಜ್ಜೆ!

Written By:

ಈ ಬಾರಿಯ 2016 ಆಟೋ ಎಕ್ಸ್ ಪೋ ಹಲವಾರು ಕಾರಣಗಳಿಂದಾಗಿ ವಿಶಿಷ್ಟತೆಗೆ ಪಾತ್ರವಾಗಿತ್ತು. ವಿಶ್ವದ ಮುಂಚೂಣಿಯ ಸಂಸ್ಥೆಗಳು ತನ್ನದೇ ಆದ ಭವಿಷ್ಯದ ಪರಿಕಲ್ಪನೆಯೊಂದಿಗೆ ಭಾರತದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವನ್ನು ಬರಮಾಡಿಕೊಂಡಿದ್ದವು.

ಅವುಗಳಲ್ಲಿ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಪ್ರದರ್ಶಿಸಿರುವ ಅತಿ ನೂತನ ಎನ್ 2025 ವಿಷನ್ ಗ್ರ್ಯಾನ್ ಟರಿಸ್ಮೊ ಕಾನ್ಸೆಪ್ಟ್ ಕಾರು ಅತಿ ಹೆಚ್ಚಿನ ಕುತೂಹಲವನ್ನು ಕಾಪಾಡಿಕೊಂಡಿದೆ. ಈ ಹಿಂದೆ 2015 ಫ್ರಾಂಕ್ ಫರ್ಟ್ ಮೋಟಾರು ಶೋ ದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ಹ್ಯುಂಡೈ ಎನ್ 2025 ಹೈಪರ್ ಕಾರು ಹೆಚ್ಚಿನ ಭರವಸೆಗಳನ್ನು ಮೂಡಿಸಿದೆ.

ಹ್ಯುಂಡೈ ಎನ್ 2025 ವಿಷನ್ ಗ್ರ್ಯಾನ್ ಟರಿಸ್ಮೊ ಕಾನ್ಸೆಪ್ಟ್

ಪ್ರಸ್ತುತ ಅನಾವರಣಗೊಂಡಿರುವ ಮೊದಲ ಮಾದರಿಯು ಹ್ಯುಂಡೈನ ಭವಿಷ್ಯದ ಸುಸ್ಥಿರ ತಂತ್ರಜ್ಞಾನದ ಭಾಗವಾಗಿರಲಿದೆ. ಹ್ಯುಂಡೈ ಮೋಟಾರ್ ಸ್ಪೋರ್ಟ್ ರೇಸ್ ಕಾರು ನಿರ್ಮಾಣದಲ್ಲಿ 'ಎನ್' ಮಹತ್ವದ ಪಾತ್ರ ವಹಿಸುತ್ತಿದೆ.

ಇದು ವಿಶ್ವ ರಾಲಿ ಚಾಂಪಿಯನ್ ಶಿಪ್ (ಡಬ್ಲ್ಯುಆರ್ ಸಿ) ಸೇರಿದಂತೆ ಭವಿಷ್ಯದ ನಿರ್ವಹಣಾ ಕಾರುಗಳ ವಿಭಾಗದಲ್ಲಿ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ.

ಮುಖ್ಯಾಂಶಗಳು

ಕಾರ್ಬನ್ ಫೈಬರ್ ರೈನ್ ಫೋರ್ಸ್ಡ್ ಪ್ಲಾಸಿಸ್ಟ್ (ಸಿಎಫ್‌ಆರ್‌ಪಿ) ಮೊನೆಕಾಕ್ ಸಂರಚನೆ,

650 kW (884 PS/871 hp) ಹೈಡ್ರೋಜನ್ ಫ್ಯೂಯಲ್ ಸೆಲ್ ಸಿಸ್ಟಂ,

972 ಕೆ.ಜಿ. ತೂಕ,

ಬ್ರೇಕ್ ಎನರ್ಜಿ ಪತ್ಯುತ್ಪಾದನೆ

English summary
Hyundai N 2025 Vision Gran Turismo concept at Auto Expo 2016
Story first published: Wednesday, February 17, 2016, 12:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X