TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ರೆನಾಲ್ಟ್ ಕ್ವಿಡ್‍ಗೆ ಟಾಂಗ್ ನೀಡುಲು ಮಾರುತಿ ಸುಜುಕಿಯಿಂದ ಹೊಸ ಕಾರು?
ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಸಣ್ಣ ಕಾರುಗಳಾದ ಆಲ್ಟೊ, ಸೆಲೆರಿಯೊ ಮತ್ತು ವ್ಯಾಗನ್‍ಆರ್ ಹ್ಯಾಚ್‍ಬ್ಯಾಕ್ ಅನ್ನು ನೀಡಿದೆ. ಮಾಹಿತಿಗಳ ಪ್ರಕಾರ ಸಂಸ್ಥೆಯು ಇದೀಗ ಮತ್ತೊಂದು ಸಣ್ಣ ಕಾರನ್ನು ಉತ್ಪಾದಿಸುವ ಕಾರ್ಯದಲಿದ್ದು, 2020ರಲ್ಲಿ ಬಿಡುಗಡೆಗೊಳ್ಳಲ್ಲಿದೆ ಎನ್ನಲಾಗಿದೆ.
ಮಾರುತಿ ಸುಜುಕಿ ತಯಾರು ಮಾಡುತ್ತಿರುವ ಕಾರನ್ನು ಮಾರುತಿ ವೈ1ಕೆ ಎಂಬ ಕೋಡ್‍ನೇಮ್ ಇಂದ ಕರೆಯಲ್ಪಡುತ್ತಿದ್ದು, ಮಾರುತಿ ಆಲ್ಟೊ ಮತ್ತು ವ್ಯಾಗನ್‍ಆರ್ ಕಾರುಗಳ ನಡುವೆ ಸ್ಥಾನವನ್ನು ಪಡೆದುಕೊಂಡಿರಲಿದೆ. ಸಂಸ್ಥೆಯ ಹೊಸ ಸಣ್ಣ ಗಾತ್ರದ ಕಾರು ಮಾರುತಿ ಫ್ಯೂಚರ್-ಎಸ್ ಕಾರಿನ ವಿನ್ಯಾಸವನ್ನು ಆಧರಿಸಲಿದೆ.
ಮಾರುತಿ ಸಂಸ್ಥೆಯ ಹೊಸ ಸಣ್ಣ ಗಾತ್ರದ ಕಾರು 2018ರ ಆಟೊ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿದ್ದ ಫ್ಯೂಚರ್-ಎಸ್ ಕಾರಿನ ಪರಿಕಲ್ಪನೆಯಂತೆಯೆ ಇರಲಿದ್ದು ಅದೇ ಮಾದರಿಯ ಫ್ಲ್ಯಾಟ್ ಬಾನೆಟ್ ಅನ್ನು ಪಡೆದುಕೊಂಡಿರಲಿದೆ. ಹೊಸ ಕಾರು ಮಾರುತಿ ಆಲ್ಟೊ ಕಾರಿಗಿಂತ ಅಧಿಕವಾದ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದಿರಲಿದೆ.
ಸಜ್ಜುಗೊಳ್ಳುತ್ತಿರುವ ಸಣ್ಣ ಗಾತ್ರದ ಕಾರು ಮಾರುತಿ ಸಂಸ್ಥೆಯ ಎಂಟ್ರಿ ಲೆವೆಲ್ ಕ್ರಾಸ್‍ಓವರ್ ಇರಬಹುದಾಗಿದ್ದು, ಮಾರುತಿ ವೈ1ಕೆ ಆಲ್ಟೊ ಕಾರನ್ನು ಸ್ಥಳಾಂತರಿಸಲಿದೆ. ಮತ್ತು ಆಲ್ಟೋ ಕಾರಿನಲ್ಲಿದ್ದ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ. ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯನ್ನು ಕೂಡ ಇರಲಿದೆ.
ಮಾರುತಿ ಸುಜುಕಿಯ ಸಣ್ಣ ಕಾರು ಕ್ರಾಷ್ ಟೆಸ್ಟಿಂಗ್ ನಿಯಮಗಳನ್ನು ಅನುಸರಿಸುವುದಕ್ಕಾಗಿ ಡ್ಯುಯಲ್ ಏರ್‍ಬ್ಯಾಗ್ಸ್, ಎಬಿಎಸ್‍ನೊಂದಿಗೆ ಇಬಿಡಿ ಮತ್ತು ಇನ್ನಿತರೆ ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲ್ಲಿದೆ. ಮಾರುಕಟ್ಟೆಗೆ ಬರಲಿರುವ ಈ ಕಾರು ರೆನಾಲ್ಟ್ ಕ್ವಿಡ್ ಹಾಗು ಎಂಟ್ರಿ ಲೆವೆಲ್ ಹ್ಯಾಚ್‍ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಲಿದೆ.
ಮಾರುತಿ ಸುಜುಕಿ ಸಂಸ್ಥೆಯಲ್ಲಿನ ಎಂಜಿನಿಯರ್‍ಗಳು ವೈ1ಕೆ ಕಾರಿನ ಪ್ರೊಟೊಟೈಪ್ ಅನ್ನು 2020ರೊಳಗೆ ತಯಾರುಗೊಳಿಸುವ ಯೋಜನೆಯಲಿದ್ದು, ಅದೇ ವರ್ಷ ಕಾರನ್ನು ಬಿಡುಗಡೆಗೊಳಿಸಲು ಸಂಸ್ಥೆಯು ಯೋಜಿಸುತ್ತಿದೆ.
ಮಾರುತಿ ಸುಜುಕಿ ದಶಕಗಳಿಂದಲೂ ಗ್ರಾಹಕರಿಗೆ ಅನುಗುಣವಾಗಿ ತಮ್ಮ ಉತ್ಪನಗಳನ್ನು ತಯಾರು ಮಾಡುತ್ತಿದು, ಸಂಸ್ಥೆಯು ಬಿಡುಗಡೆಗೊಳಿಸಲಿರುವ ಹೊಸ ಸಣ್ಣ ಕಾರು ಕೂಡಾ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲಿದೆ ಎನ್ನಲಿದ್ದು, ಮಾರುಕಟ್ಟೆಯಲ್ಲಿ ರೆನಾಲ್ಟ್ ಕ್ವಿಡ್ ಕಾರಿಗೆ ಪೈಪೋಟಿ ನೀಡಲಿದೆ.