ಸನ್ನಿ ಉತ್ಪಾದನೆ ಆರಂಭಿಸಿದ ನಿಸ್ಸಾನ್ ಇಂಡಿಯಾ

SUNNY Production Start India
ಮೇಡ್ ಇನ್ ಇಂಡಿಯಾ ಟ್ಯಾಗ್ ನೊಂದಿಗೆ ಮಧ್ಯಮ ಗಾತ್ರದ ಸೆಡಾನ್ ಕಾರು ಸನ್ನಿ ಉತ್ಪಾದನೆಯನ್ನು ಚೆನ್ನೈನಲ್ಲಿ ಇಂದು ನಿಸ್ಸಾನ್ ಮೋಟರ್ ಇಂಡಿಯಾ ಉದ್ಘಾಟಿಸಿದೆ. ಇದು ಕಂಪನಿಯು ದೇಶದಲ್ಲಿ ಪೂರ್ಣಪ್ರಮಾಣದಲ್ಲಿ ಉತ್ಪಾದಿಸುತ್ತಿರುವ ಎರಡನೇ ಕಾರಾಗಿದೆ.

ಕಂಪನಿಯು ನೂತನ ಸನ್ನಿ ಕಾರನ್ನು ಈ ತಿಂಗಳ ಆರಂಭದಲ್ಲಿ ಅನಾವರಣ ಮಾಡಿತ್ತು. ಮುಂದಿನ ಹಬ್ಬದ ಸೀಸನ್ ಗೆ ರಸ್ತೆಗಿಳಿಯುವ ಈ ಕಾರಿನ ಉತ್ಪಾದನೆಯನ್ನು ತರಾತುರಿಯಲ್ಲಿ ಕಂಪನಿ ಆರಂಭಿಸಿದೆ.

ನಿಸ್ಸಾನ್ ಸನ್ನಿ ಯುವ ಕುಟುಂಬಗಳು ಬಯಸುವ ಮಧ್ಯಮಗಾತ್ರದ ಕಾರಾಗಿದ್ದು ಗುಣಮಟ್ಟ, ಫೀಚರ್ಸ್, ಸ್ಥಳಾವಕಾಶಗಳಲ್ಲಿ ರಾಜಿಯಿಲ್ಲದಂತೆ ನಿರ್ಮಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಕಂಪನಿ ತಿಳಿಸಿದೆ.

"ಸನ್ನಿ ಉತ್ಪಾದನೆ ಆರಂಭಿಸಿರುವುದು ನಿಸ್ಸಾನ್ ಕಂಪನಿಯ ಇನ್ನೊಂದು ಮೈಲುಗಲ್ಲಾಗಿದೆ. ಈ ಕಾರು ದೀಪಾವಳಿ ವೇಳೆಗೆ ಗ್ರಾಹಕರ ಕೈಸೇರಲಿದೆ. ಭಾರತದ ಮಾರುಕಟ್ಟೆಯಲ್ಲಿ ಸನ್ನಿ ಕಾರುಗಳಿಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕುವ ನಿರೀಕ್ಷೆ ನಮ್ಮದು" ಎಂದು ಕಂಪನಿಯ ಎಂಡಿ ಕಿಮಿನೊಡು ತೊಕುಯಮಾ ಹೇಳಿದ್ದಾರೆ.

More from DriveSpark

Article Published On: Tuesday, August 30, 2011, 15:27 [IST]
English summary
Nissan Motor India Announces the start of production of Nissan SUNNY. This car is second made-in-India model produced by Nissan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+