ಸ್ವಿಫ್ಟ್ ವೇಟಿಂಗ್ ಅವಧಿ: ಫೇಸ್ ಬುಕ್ ಗೆಳೆಯರ ಗೋಳು

ಮಾರುತಿ ಸುಜುಕಿ ಮಾನೆಸರ್ ಘಟಕದಲ್ಲಿ ನಡೆದ ನೌಕರರ ಪ್ರತಿಭಟನೆ ಸ್ವಿಫ್ಟ್ ಗ್ರಾಹಕರಿಗೆ ಭಯ ಹುಟ್ಟಿಸಿದೆ. ಯಾಕೆಂದರೆ ಈಗಾಗಲೇ ಬುಕ್ಕಿಂಗ್ ಮಾಡಿರುವ ಗ್ರಾಹಕರು ಹೊಸ ಸ್ವಿಫ್ಟ್ ಕೈ ಸೇರುವುದು ಇನ್ನಷ್ಟು ತಡವಾಗಲಿದೆಯೇ ಎಂಬ ಆತಂಕದಲ್ಲಿದ್ದಾರೆ.
ಇದೇ ಆತಂಕವನ್ನು ನಮ್ಮ ಆಟೋಮೊಬೈಲ್ಸ್ ಫೇಸ್ ಬುಕ್ ಸ್ನೇಹಿತರು ನಮ್ಮಲ್ಲಿ ತೋಡಿಕೊಂಡಿದ್ದಾರೆ. ಮಾನೆಸರ್ ನಲ್ಲಿ ನಡೆಯುವ ಸ್ಟ್ರೈಕ್ ಸ್ವಿಫ್ಟ್ ಉತ್ಪಾದನೆಗೆ ಹಿನ್ನಡೆಯಾಗಲಿದೆಯೇ ಎಂಬ ಭಯ ಅವರಿಗಿದೆ.
ಕಂಪನಿ ತಿಳಿಸುವ ಪ್ರಕಾರ ನೂತನ ಸ್ವಿಫ್ಟ್ ಡೀಸೆಲ್ ಆವೃತ್ತಿ ವೇಟಿಂಗ್ ಪಿರೇಡ್ ನಾಲ್ಕು ತಿಂಗಳು ಮತ್ತು ಪೆಟ್ರೊಲ್ ಆವೃತ್ತಿ ವೇಟಿಂಗ್ ಪಿರೇಡ್ ಮೂರು ತಿಂಗಳು ಆಗಿದೆ.
ನಮ್ಮ ಫೇಸ್ ಬುಕ್ಕಿನಲ್ಲಿ ನಡೆಯುವ ಚರ್ಚೆ ಆಸಕ್ತಿದಾಯಕವಾಗಿದೆ. ರವಿ ಎಂಬಾತ "ಹೊಸ ಸ್ವಿಫ್ಟ್ ಡೆಲಿವರಿ ಆಗಲು ಎಷ್ಟು ದಿನ ಕಾಯಬೇಕು? ನೌಕರರ ಸ್ಟ್ರೈಕ್ ನಿಂದ ಡೆಲಿವರಿ ಡಿಲೇ ಆದೀತಾ?" ಎಂದು ಪ್ರಶ್ನಿಸಿದ್ದಾನೆ.
ಅದಕ್ಕೆ ಮತ್ತೊಬ್ಬ ಫೇಸ್ ಬುಕ್ ಗೆಳೆಯ "ಮಾರುತಿ ಸುಜುಕಿ ಸಾಕಷ್ಟು ರೊಬಾಟ್ ಗಳನ್ನು ಬಳಸಿ ನೌಕರರ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು" ಎಂದು ಸಲಹೆ ನೀಡುತ್ತಾನೆ. ಮತ್ತೊಬ್ಬ ಅದಕ್ಕೆ ಉತ್ತರ ನೀಡುತ್ತಾನೆ. ಮತ್ತೆ ಪ್ರಶ್ನೆ ಮತ್ತು ಉತ್ತರದ ಅಂಕ ಮುಂದುವರೆಯುತ್ತದೆ... ಹೊಸ ಸ್ವಿಫ್ಟ್ ಕೈ ಸೇರುವರೆಗೂ!
ನೌಕರರ ಈ ಸ್ಟ್ರೈಕ್ ನಿಂದ ಮಾರುತಿ ಸುಜುಕಿಯ ಬ್ರಾಂಡ್ ಇಮೇಜಿಗೆ ಹಾನಿಯಾದೀತೇ ಎಂದು ಮತ್ತೊಬ್ಬ ಫೇಸ್ ಬುಕ್ ಗೆಳೆಯ ವರಿ ಮಾಡುತ್ತಾನೆ.


Click it and Unblock the Notifications








