ವಿಶ್ವಕಪ್ ಕ್ರಿಕೆಟ್ ಗೆ ಹ್ಯುಂಡೈ ಕಾರ್ ಒಪ್ಪಂದ

ಫೆಬ್ರವರಿ 19ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಗೆ ಇದು ಅಫೀಸಿಯಲ್ ಪಾಲುದಾರಿಕೆ ಒಪ್ಪಂದಕ್ಕೆ ಕಂಪನಿ ಸಹಿ ಹಾಕಿದೆ. 2011ರಿಂದ 2015ರವರೆಗಿನ ಜಾಗತಿಕ ಕ್ರಿಕೆಟ್ ಗೆ ಹ್ಯುಂಡೈ ಮೋಟಾರ್ ಕಂಪನಿ "ಎಕ್ಸ್ ಕ್ಲೂಸಿವ್ ಕಾರ್ ಪಾರ್ಟರ್" ಆಗಿದೆ.
6 ಹೊಸ ಕಾರ್: ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಟ 6 ಹೊಸ ಮಾಡೆಲ್ ಗಳನ್ನು ಹೊರತರುವುದಾಗಿ ಹ್ಯುಂಡೈ ಮೋಟಾರ್ ಇಂಡಿಯಾ ಹೇಳಿದೆ. ದೇಶದ ಕಾರ್ ಮಾರುಕಟ್ಟೆಯಲ್ಲಿ ಪ್ರಬಲವಾಗಲು ಕಂಪನಿ ವರ್ಷಕ್ಕೆ ಕನಿಷ್ಠ 2 ಹೊಸ ಕಾರ್ ಹೊರತರುವುದಾಗಿ ಹೇಳಿದೆ.
"ಕಂಪನಿಯು ಪ್ರತಿವರ್ಷ ಎರಡು ಹೊಸ ಮಾಡೆಲ್ ಗಳನ್ನು ಹೊರತರಲು ನಿರ್ಧರಿಸಿದೆ" ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಮಾರುಕಟ್ಟೆ ವಿಭಾಗದ ನಿರ್ದೇಶಕರು ಹೇಳಿದ್ದಾರೆ. ಈ ವರ್ಷ ಕೂಡ ಹೊಸ ಎರಡು ಕಾರ್ ಹೊರತರುವುದಾಗಿ ಹೇಳಿದ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಹ್ಯುಂಡೈ, ಮಾರುತಿ ಸುಜುಕಿ ನಂತರದ ದೇಶದ ಎರಡನೆಯ ಬೃಹತ್ ಕಾರ್ ತಯಾರಿಕಾ ಕಂಪನಿಯಾಗಿದೆ.


Click it and Unblock the Notifications








