ಹ್ಯುಂಡೈ ಐ10, ಇಯಾನ್: ಎಲ್ ಪಿಜಿ ಕಾರು ಬೇಕೆ?

Hyundai Planning To Launch LPG Powered Eon, i10
ಹ್ಯುಂಡೈ ಮೋಟರ್ಸ್ ಎಲ್ ಪಿಜಿ ಅಥವಾ ಅನಿಲ ಚಾಲಿತ ಇಯಾನ್ ಮತ್ತು ಐ10 ಕಾರುಗಳನ್ನು ಪರಿಚಯಿಸಲಿದೆ ಎಂದು ವರದಿಗಳು ಹೇಳಿವೆ. ಹ್ಯುಂಡೈ ಕಂಪನಿಯು ದೇಶದಲ್ಲಿ ಡೀಸೆಲ್ ಘಟಕ ನಿರ್ಮಾಣವನ್ನು ಮುಂದೂಡಿದೆ. ಈ ಸಮಯದಲ್ಲಿ ಕಂಪನಿಯು ಅಗ್ಗದ ಪರ್ಯಾಯ ಇಂಧನ ಆಯ್ಕೆಯತ್ತ ಮುಖ ಮಾಡುತ್ತಿದೆ ಎನ್ನಲಾಗಿದೆ.

ಇಂತಹ ಸಮಯದಲ್ಲಿ ಡೀಸೆಲ್ ನಂತರದ ಅತ್ಯುತ್ತಮ ಇಂಧನವಾಗಿ ಎಲ್ ಪಿಜಿ ಇದೆ. ಎಲ್ ಪಿಜಿ ಸಿಲಿಂಡರನ್ನು ಪೆಟ್ರೋಲ್ ಮತ್ತು ಡೀಸೆಲ್ ಕಾರಿಗೆ ಅಳವಡಿಸಬಹುದಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ಕಂಪನಿಯು ಇಯಾನ್ ಮತ್ತು ಐ10 ಕಾರುಗಳ ಎಲ್ ಪಿಜಿ ಆವೃತ್ತಿ ತರಲಿದೆ ಎಂದು ವರದಿಗಳು ಹೇಳುತ್ತಿವೆ.

ವರದಿಗಳ ಪ್ರಕಾರ ಇಯಾನ್ ಮತ್ತು ಐ10 ಕಾರುಗಳು ಡ್ಯೂಯಲ್ ಫ್ಯೂಯಲ್ ಎಂಜಿನ್ ಹೊಂದಿರಲಿವೆಯಂತೆ. ಅಂದರೆ ಪೆಟ್ರೋಲ್ ಮತ್ತು ಎಲ್ ಪಿಜಿ ಆಯ್ಕೆ ಮಾಡುತ್ತ ಕಾರು ಚಲಾಯಿಸಬಹುದು. ಕಂಪನಿಯು ಮುಂದಿನ 5 ವರ್ಷಗಳಲ್ಲಿ ಹದಿನೈದು ಕಾರುಗಳನ್ನು ಹೊರತರುವುದಾಗಿ ಹೇಳಿತ್ತು. ಈ ಎರಡು ಎಲ್ ಪಿಜಿ ಆವೃತ್ತಿಗಳು ಕೂಡ ಈ ಲೆಕ್ಕದಲ್ಲಿ ಸೇರಿರಬಹುದು.

ಪೆಟ್ರೋಲಿಗೆ ಹೋಲಿಸಿದರೆ ಎಲ್ ಪಿಜಿ ಶೇಕಡ 20ರಿಂದ ಶೇಕಡ 40ರಷ್ಟು ಅಗ್ಗದ ಇಂಧನವಾಗಿದೆ. ಆದರೆ ಇದು ಬಿಡುಗಡೆ ಮಾಡುವ ಪವರ್ ಪೆಟ್ರೋಲಿಗಿಂತ ಕಡಿಮೆ. ಆದರೆ ಪರ್ಯಾಯ ಇಂಧನಗಳಲ್ಲಿ ಎಲ್ ಪಿಜಿ ಆಯ್ಕೆ ಕೂಡ ಹೆಚ್ಚು ಕಾರು ಗ್ರಾಹಕರನ್ನು ಸೆಳೆಯುತ್ತಿದೆ.

More from DriveSpark

Article Published On: Friday, November 18, 2011, 15:00 [IST]
English summary
Hyundai Motors is planning to launch LPG powered Eon and i10 in the coming months according to some media reports. With an indefinite postponement of Hyundai's diesel engine plant in India, the Korean carmaker had to offer a cheaper fuel alternative to petrol for its small cars or it face the risk of dwindling sales even for its low priced cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+