ಕ್ವಿಡ್ ಬಿರುಗಾಳಿಗೆ ಸಿಲುಕಿತೇ ಇಯಾನ್ ?

By Nagaraja

ಇತ್ತೀಚೆಗಷ್ಟೇ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ರೆನೊ ಕ್ವಿಡ್ ವಿಶ್ಲೇಷಕರ ಜೊತೆ ಜೊತೆಗೆ ವಾಹನ ಪ್ರೇಮಿಗಳಿಂದಲೂ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ದೆಹಲಿ ಎಕ್ಸ್ ಶೋ ರೂಂ 2.56 ಲಕ್ಷ ರು.ಗಳಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರೆನೊ ಕ್ವಿಡ್ ಬಿಡುಗಡೆಯಾದ ಎರಡು ವಾರದೊಳಗೆ 25,000 ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿದೆ.

Also Read: ರೆನೊ ಕ್ವಿಡ್ ಚಾಲನಾ ವಿಮರ್ಶೆ; ಪುಟ್ಟ ಕಾರಿನ ಹಿರಿಮೆ!

ಈ ಮುಖಾಂತರ ಎಂಟ್ರಿ ಲೆವೆಲ್ ವಿಭಾಗದಲ್ಲಿ ಅನೇಕ ಸೆಗ್ಮೆಂಟ್ ಫಸ್ಟ್ ವೈಶಿಷ್ಟ್ಯಗಳೊಂದಿಗೆ ಪ್ರವೇಶಿಸಿರುವ ರೆನೊ ಕ್ವಿಡ್ ಜನಪ್ರಿಯ ಆಲ್ಟೊ ಜೊತೆಗೆ ಹ್ಯುಂಡೈ ಇಯಾನ್ ಮಾದರಿಗೂ ಅಪಾಯ ಸೃಷ್ಟಿಸಿದೆ. ಈ ಮೊದಲೇ ಆಲ್ಟೊ ಜೊತೆಗೆ ಕ್ವಿಡ್ ಹೋಲಿಕೆ ಬಗೆಗಿನ ಲೇಖನವನ್ನು ನಾವು ಪ್ರಕಟಿಸಿರುತ್ತೇವೆ[ನಂ.1 ಸ್ಥಾನಕ್ಕೆ ರೇಸ್; ಆಲ್ಟೊ vs ಕ್ವಿಡ್ ವಿಜೇತರು ಯಾರು?]. ಈಗ ಇಯಾನ್ ಮೇಲೆಯೂ ಹೊಸ ಕ್ವಿಡ್ ಮೇಲುಗೈ ಸಾಧಿಸುವುದೇ ಎಂಬುದನ್ನು ಇಲ್ಲಿ ನೋಡೋಣ ಬನ್ನಿ...

ಬೆಲೆ ಹೋಲಿಕೆ

ಬೆಲೆ ಹೋಲಿಕೆ

ಭಾರತೀಯ ಗ್ರಾಹಕರ ದೃಷ್ಟಿಕೋನದಲ್ಲಿ ಪ್ರಮುಖವಾಗಿಯೂ ಎಂಟ್ರಿ ಲೆವೆಲ್ ಕಾರುಗಳಲ್ಲಿ ಬೆಲೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಲ್ಲಿ ಇಯಾನ್ ಸವಾಲನ್ನು ರೆನೊ ಕ್ವಿಡ್ ಸುಲಭವಾಗಿ ಎದುರಿಸಿದ್ದು, ಪರಿಣಾಮಕಾರಿ ಬೆಲೆ ಕಾಪಾಡಿಕೊಂಡಿದೆ.

(ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ)

  • ರೆನೊ ಕ್ವಿಡ್: 2.56 ಲಕ್ಷ ರು.
  • ಹ್ಯುಂಡೈ ಇಯಾನ್: 3.11 ಲಕ್ಷ ರು.
  • ವಿನ್ಯಾಸ - ರೆನೊ ಕ್ವಿಡ್

    ವಿನ್ಯಾಸ - ರೆನೊ ಕ್ವಿಡ್

    ರೆನೊ-ನಿಸ್ಸಾನ್ ಸಿಎಂಎಫ್-ಎ ತಳಹದಿಯಲ್ಲಿ ಅಭಿವೃದ್ಧಿಗೊಂಡಿರುವ ರೆನೊ ಕ್ವಿಡ್ ಡಸ್ಟರ್ ಎಸ್ ಯುವಿ ಶೈಲಿಯ ವಿನ್ಯಾಸವನ್ನು ರೆನೊ ಕ್ವಿಡ್ ಮೈಗೂಡಿಸಿ ಬಂದಿದೆ. ಇದು ಮುಂಭಾಗದಲ್ಲಿ ಸಂಕೋಲೆ ಹಾಕಿದಂತಹ ಫ್ರಂಟ್ ಗ್ರಿಲ್, ಸಿ ಆಕಾರದ ಹೆಡ್ ಲ್ಯಾಂಪ್ ಇತ್ಯಾದಿ ವೈಶಿಷ್ಟ್ಯಗಳು ಕಾರಿಗೆ ಮೆರಗು ತುಂಬುತ್ತದೆ.

    ವಿನ್ಯಾಸ - ಇಯಾನ್

    ವಿನ್ಯಾಸ - ಇಯಾನ್

    ಪರಿಣಾಮಕಾರಿ ವಿನ್ಯಾಸವನ್ನು ಕಾಪಾಡಿಕೊಂಡಿರುವ ಇಯಾನ್ ಸಹ ಒಂದು ಪುಟ್ಟ ಕಾರಿಗೆ ಬೇಕಾದ ಎಲ್ಲ ವಿನ್ಯಾಸ ತಂತ್ರಗಳನ್ನು ಪಡೆದುಕೊಂಡಿದೆ. ಮುಂದಕ್ಕೆ ಬಾಗಿದ ಹೆಡ್ ಲ್ಯಾಂಪ್, ಸ್ವಭಾವ ರೇಖೆ ಇಯಾನ್ ಆಕರ್ಷಣೆಗೆ ಕಾರಣವಾಗಿದೆ.

    ವೈಶಿಷ್ಟ್ಯಗಳು - ರೆನೊ ಕ್ವಿಡ್

    ವೈಶಿಷ್ಟ್ಯಗಳು - ರೆನೊ ಕ್ವಿಡ್

    ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಏಳು ಇಂಚುಗಳ ಟಚ್ ಸ್ಕ್ರೀನ್ ಡಿಸ್ ಪ್ಲೇ, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬೆಸ್ಟ್ ಇನ್ ಕ್ಲಾಸ್ ಮೈಲೇಜ್: 25 kmpl,ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ 300 ಲೀಟರ್, ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರನ್ಸ್ 180 ಎಂಎಂ, 2ಡಿನ್ ಮ್ಯೂಸಿಕ್ ಸಿಸ್ಟಂ, ಹೊಂದಾಣಿಸಬಹುದಾದ ಚಾಲಕ ಸೀಟು ಹಾಗೂ 13 ಇಂಚುಗಳ ಚಕ್ರದ ಸೌಲಭ್ಯಗಳು ಲಭ್ಯವಾಗಲಿದೆ.

    ವೈಶಿಷ್ಟ್ಯಗಳು - ಇಯಾನ್

    ವೈಶಿಷ್ಟ್ಯಗಳು - ಇಯಾನ್

    ಇನ್ನೊಂದೆಡೆ ಹ್ಯುಂಡೈ ಇಯಾನ್, ತ್ರಿ ಬ್ಯಾರೆಲ್ ಡಿಸೈನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪವರ್ ವಿಂಡೋ, ಕೀಲೆಸ್ ಎಂಟ್ರಿ, 2 ಡಿನ್ ಆಡಿಯೋ ಸಿಸ್ಟಂ, ಗೇರ್ ಶಿಫ್ಟ್ ಇಂಡಿಕೇಟರ್, ಟಿಲ್ಟ್ ಸ್ಟೀರಿಂಗ್ ಹಾಗೂ ಡ್ಯುಯಲ್ ಟ್ರಿಪ್ ಮೀಟರ್ ಗಳಂತಹ ಸೌಲಭ್ಯಗಳನ್ನು ಪಡೆಯಲಿದೆ.

    ಎಂಜಿನ್ ತಾಂತ್ರಿಕತೆ - ರೆನೊ ಕ್ವಿಡ್

    ಎಂಜಿನ್ ತಾಂತ್ರಿಕತೆ - ರೆನೊ ಕ್ವಿಡ್

    • 800 ಸಿಸಿ, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್
    • 54 ಅಶ್ವಶಕ್ತಿ, 72 ಎನ್‌ಎಂ ತಿರುಗುಬಲ
    • ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್.
    • ಎಂಜಿನ್ ತಾಂತ್ರಿಕತೆ - ಹ್ಯುಂಡೈ ಇಯಾನ್

      ಎಂಜಿನ್ ತಾಂತ್ರಿಕತೆ - ಹ್ಯುಂಡೈ ಇಯಾನ್

      • 814 ಸಿಸಿ, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್
      • 55 ಅಶ್ವಶಕ್ತಿ,
      • ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್.
      • ಇದರ ಜೊತೆಗೆ ಹೆಚ್ಚು ಶಕ್ತಿ 998 ಸಿಸಿ ತ್ರಿ ಸಿಲಿಂಡರ್ ಎಂಜಿನ್ (68 ಅಶ್ವಶಕ್ತಿ) ಆಯ್ಕೆಯೂ ಇರುತ್ತದೆ. ಇದೂ ಕೂಡಾ ಫೈವ್ ಸ್ಪೀಡ್ ಗೇರ್ ಬಾಕ್ಸ್ ಹೊಂದರಲಿದೆ. ಹಾಗೆಯೇ ಎಲ್‌ಪಿಜಿ ಆಯ್ಕೆಯಲ್ಲೂ ಮಾರಾಟಕ್ಕೆ ಲಭ್ಯವಿರುತ್ತದೆ.

        ಮೈಲೇಜ್

        ಮೈಲೇಜ್

        ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಈ ಕೆಳಕಂಡ ಮೈಲೇಜ್ ಪ್ರಮಾಣವನ್ನು ರೆನೆ ಕ್ವಿಡ್ ಹಾಗೂ ಹ್ಯುಂಡೈ ಇಯಾನ್ ಪಡೆದುಕೊಂಡಿದೆ.

        • ರೆನೊ ಕ್ವಿಡ್: 25.17 kpl
        • ಹ್ಯುಂಡೈ ಇಯಾನ್
        • 814 ಸಿಸಿ ಎಂಜಿನ್: 21.1 kpl
        • 998 ಸಿಸಿ ಎಂಜಿನ್: 20.3 kpl
        • ಸುರಕ್ಷತೆ

          ಸುರಕ್ಷತೆ

          ಸುರಕ್ಷತೆ - ರೆನೊ ಕ್ವಿಡ್

          ಸ್ಪರ್ಧಾತ್ಮಕ ಬೆಲೆ ಕಾಪಾಡುವ ನಿಟ್ಟಿನಲ್ಲಿ ಎಂಟ್ರಿ ಲೆವೆಲ್ ಕಾರಿನಲ್ಲಿ ಹೆಚ್ಚಿನ ಸುರಕ್ಷಾ ವೈಶಿಷ್ಟ್ಯಗಳನ್ನು ನಿರೀಕ್ಷಿಸುವಂತಿಲ್ಲ. ಹಾಗಿದ್ದರೂ ರೆನೊ ಕ್ವಿಡ್ ಟಾಪ್ ಎಂಡ್ ಆರ್‌ಎಕ್ಸ್‌ಟಿ ವೆರಿಯಂಟ್ ನಲ್ಲಿ ಐಚ್ಛಿಕ ಏರ್ ಬ್ಯಾಗ್ ಸೌಲಭ್ಯ ಲಭ್ಯವಿರುತ್ತದೆ. ಅಷ್ಟೇ ಅಲ್ಲದೆ ಭಾರತದ ಈಗಿನ ಹಾಗೂ ಭವಿಷ್ಯದ ಭದ್ರತಾ ಮಾನದಂಡಗಳನ್ನು ತೇರ್ಗಡೆ ಹೊಂದಿದೆ.

          ಸುರಕ್ಷತೆ - ಇಯಾನ್

          ಇನ್ನೊಂದೆಡೆ ಹ್ಯುಂಡೈ ಇಯಾನ್ ಸ್ಪೋರ್ಟ್ಸ್ ವೆರಿಯಂಟ್ ನಲ್ಲಿ ಚಾಲಕ ಬದಿಯ ಏರ್ ಬ್ಯಾಗ್ ಸೌಲಭ್ಯವೂ ಇರುತ್ತದೆ. ಅಲ್ಲದೆ ದೊಡ್ಡ ಪ್ರಹಾರವನ್ನು ಸಾಧ್ಯವಾದಷ್ಟು ತಡೆಯುವ ರೀತಿಯಲ್ಲಿ ದೇಹ ರಚನೆ ಮಾಡಲಾಗಿದೆ.

          ಅಂತಿಮ ತೀರ್ಪು

          ಅಂತಿಮ ತೀರ್ಪು

          ಇಲ್ಲಿ ಇಯಾನ್ ಹಾಗೂ ಕ್ವಿಡ್ ಕಾರುಗಳು ಒಂದಕ್ಕೊಂದು ಮೇಲುಗೈ ಸಾಧಿಸುತ್ತಿದೆ. ಇಯಾನ್ ಗಮನಿಸಿದಾಗ ಪವರ್ ಫುಲ್ ಎಂಜಿನ್, ಇದಕ್ಕೆ ತಕ್ಕುದಾದ ವೈಶಿಷ್ಟ್ಯಗಳನ್ನು ಪಡೆದುಕೊಂಡರೂ ಕ್ವಿಡ್ ಹೋಲಿಕೆ ಮಾಡಿದಾಗ ಬೆಲೆ ಸ್ವಲ್ಪ ದುಬಾರಿಯೆನಿಸುತ್ತದೆ. ಹಾಗಾಗಿ ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಅನೇಕ ಹೊಸ ವೈಶಿಷ್ಟ್ಯಗಳೊಂದಿಗೆ ಎಂಟ್ರಿ ಕೊಟ್ಟಿರುವ ರೆನೊ ಕ್ವಿಡ್ ತಾಜಾತನದ ವಿನ್ಯಾಸವನ್ನು ಮೈಗೂಡಿಸಿ ಬಂದಿದ್ದು, ಗ್ರಾಹಕರಿಗೆ ಪರಿಪೂರ್ಣ ಆಯ್ಕೆಯೆನಿಸಲಿದೆ.

          ಇವನ್ನೂ ಓದಿ

          ಆಲ್ಟೊ 800 vs ಇಯಾನ್; ಯಾವುದು ಫೇವರಿಟ್? ಮುಂದಕ್ಕೆ ಓದಿ


Most Read Articles

Kannada
English summary
Renault Kwid vs Hyundai Eon Comparo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X