ಮಹೀಂದ್ರ ನೂತನ ಸ್ಪೋರ್ಟಿ ಬ್ಯೂಟಿಗೆ ದಾರಿಬಿಡಿ

Mahindra To Launch New SUV India and S Africa
ಮಹೀಂದ್ರ ಆಂಡ್ ಮಹೀಂದ್ರ ಕಂಪನಿ ಕಳೆದ ವರ್ಷ ಹೊರತಂದ ಥಾರ್ ಜೀಪಿನ ನೆನಪು ಇನ್ನೂ ಹಸಿರಾಗಿದೆ. ಇದೀಗ ಬಂದ ಸುದ್ದಿಯ ಪ್ರಕಾರ ಮಹೀಂದ್ರ ಫ್ಯಾಕ್ಟರಿಯಿಂದ ಹೊಸದೊಂದು ಸ್ಪೋರ್ಟಿ ಬ್ಯೂಟಿ ರಸ್ತೆಗಿಳಿಯಲಿದೆ. ಕಂಪನಿಯ ನೂತನ ಜಾಗತಿಕ ಎಸ್ ಯುವಿ ಶೀಘ್ರದಲ್ಲಿ ಅಂದರೆ ಈ ವರ್ಷದ ಅಂತ್ಯದೊಳಗೆ ರಸ್ತೆಗಿಳಿಯಲಿದೆ.

ನೂತನ ಕಾರು ಈಗಷ್ಟೇ ಅಭಿವೃದ್ಧಿ ಹಂತದಲ್ಲಿದೆ. ಈ ಕಾರಿನ ಹೆಸರು ಎಕ್ಸ್ ಯುವಿ 500 ಎಂದು ಹೇಳಲಾಗಿದೆ. ಈ ಕಾರನ್ನು ಜಾಗತಿಕ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಫ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾಗುವುದು ಎಂದು ಕಂಪನಿ ಹೇಳಿದೆ.

"ಕಂಪನಿಯು ಶೀಘ್ರದಲ್ಲಿ ನೂತನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್ ಯುವಿ) ಹೊರತರಲಿದೆ" ಎಂದು ಕಂಪನಿಯ ವಾಹನ ವಿಭಾಗದ ಮುಖ್ಯಸ್ಥ ಪವನ್ ಗೋಯೆಂಕಾ ಹೇಳಿದ್ದಾರೆ. ಈ ಸ್ಪೋರ್ಟಿ ಬ್ಯೂಟಿಯನ್ನು ಕೇವಲ ಭಾರತ ಮಾತ್ರವಲ್ಲದೇ ದಕ್ಷಿಣ ಅಫ್ರಿಕಾ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಕಂಪನಿ ನಿರ್ಧರಿಸಿದೆ.

ನೂತನ SUV ಮಹೀಂದ್ರ ಸ್ಕಾರ್ಪಿಯೊದ ರೀತಿ ಇರಲಿದೆ. ಇದು ಈ ವರ್ಷದ ಅಂತ್ಯದ ವೇಳೆಗೆ ರಸ್ತೆಗಿಳಿಯಲಿದೆ ಎಂದು ಗೋಯೆಂಕಾ ಹೇಳಿದ್ದಾರೆ. ಇದನ್ನು ಪುಣೆ ಸಮೀಪದ ಚಕನ್ ಘಟಕದಲ್ಲಿ ಉತ್ಪಾದಿಸಲು ಕಂಪನಿ ನಿರ್ಧರಿಸಿದೆ. ಇದಕ್ಕೆ ಕೊರಿಯಾದ ಸನ್ಸೊಂಗ್ ಕಂಪನಿಯು ಎಂಜಿನ್ ಒದಗಿಸುವ ನಿರೀಕ್ಷೆಯಿದೆ.

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಸ್ಕಾರ್ಪಿಯೊ ಮತ್ತು ಸ್ಕಾರ್ಪಿಯೊ ಪಿಕಪ್ ಗಳನ್ನು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಆಫ್ರಿಕಾ ದೇಶಗಳಿಗೆ ರಫ್ತು ಮಾಡುತ್ತಿದೆ. ಕಂಪನಿಯು ಅಮೆರಿಕ ಮಾರುಕಟ್ಟೆಗೂ ಪ್ರವೇಶಿಸಲು ಉದ್ದೇಶಿಸಿದೆ. ನೂತನ ಜಾಗತಿಕ SUV ಮೂಲಕ ಕಂಪನಿ ಉತ್ತರ ಅಮೆರಿಕಕ್ಕೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. (ಚಿತ್ರದಲ್ಲಿರುವುದು ಸ್ಕಾರ್ಪಿಯೊ ಪಿಕಪ್)

More from DriveSpark

Article Published On: Friday, September 2, 2011, 15:11 [IST]
English summary
Mahindra and Mahindra's head of automotive division Pawan Goenka has revealed the SUV specialist will soon launch a new SUV. The new model will be launched in India as well as South Africa. The SUV will be positioned ahead of Mahindra's best selling Scorpio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+