ನ್ಯಾನೊ, ಫೋರ್ಡ್ ನಂತರ ಗುಜರಾತಿಗೆ ಪ್ಯೂಜೊ

Peugeot Citroen Enters Gujarat
ಗುಜರಾತ್ ವಾಹನ ಕಂಪನಿಗಳ ಹಬ್ ಆಗುತ್ತಿದೆ. ಜಾಗತಿಕ ಕಂಪನಿಗಳನ್ನು ಕೂಡ ತನ್ನತ್ತ ಸೆಳೆಯಲು ಮೋದಿ ಶಕ್ತರಾಗುತ್ತಿದ್ದಾರೆ. ಇದೀಗ ಫ್ರಾನ್ಸ್ ನ ಕಾರು ತಯಾರಿಕಾ ಕಂಪನಿ ಪಿಎಸ್ಎ ಪ್ಯೂಜೊ ಸಿಟ್ರೊನ್ ಗುಜರಾತಿನ ಸನಂದ್ ನಲ್ಲಿ ಘಟಕ ಸ್ಥಾಪಿಸುವ ಕುರಿತು ಔಪಚಾರಿಕ ಒಪ್ಪಂದಕ್ಕೆ ನರೇಂದ್ರ ಮೋದಿ ಸರಕಾರದೊಂದಿಗೆ ಸಹಿಹಾಕಿದೆ.

ನೂತನ ಘಟಕಕ್ಕಾಗಿ ಸುಮಾರು 4 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಲು ಕಂಪನಿ ನಿರ್ಧರಿಸಿದೆ. ಈ ಹೂಡಿಕೆಯಿಂದ ಗುರ್ ಗಾಂವ್, ಪುಣೆ ಮತ್ತು ಚೆನ್ನೈ ರಾಜ್ಯಗಳನ್ನು ಹಿಂದಿಕ್ಕಿ ಗುಜರಾತ್ ರಾಜ್ಯವು ಬೃಹತ್ ಆಟೋಮೊಬೈಲ್ ಹಬ್ ಆಗುವ ನಿರೀಕ್ಷೆಯಿದೆ.

ಪ್ಯೂಜೊ ಅಧಿಕಾರಿಗಳು ಈ ಹಿಂದೆಯೇ ಹಲವಾರು ರಾಜ್ಯ ಸರಕಾರಗಳೊಂದಿಗೆ ಮಾತುಕತೆ ನಡೆಸಿದ್ದರು. ಕಂಪನಿಯು ತಮಿಳುನಾಡು ಮತ್ತು ಆಂಧ್ರ ಸರಕಾರಗಳೊಂದಿಗೂ ಮಾತುಕತೆ ನಡೆಸಿತ್ತು. ಪ್ಯೂಜೊ ಕಂಪನಿಯನ್ನು ಸೆಳೆಯಲು ಕರ್ನಾಟಕ ಯಾವುದೇ ಪ್ರಯತ್ನ ಮಾಡಿಲ್ಲವೆಂದು ಫೇಸ್ ಬುಕ್ ಸ್ನೇಹಿತರೊಬ್ಬರು ಫೇಸ್ ಬುಕ್ ನಲ್ಲಿ ಆಪಾದಿಸಿದ್ದಾರೆ.

ಅಂತಿಮವಾಗಿ ಗುಜರಾತಿನ ವಿದೇಶಿ ಹೂಡಿಕೆ ಸ್ನೇಹಿ ನೀತಿಯಿಂದ ಪ್ಯೂಜೊ ಆಕರ್ಷಿತವಾಗಿದೆ. ಫ್ರಾನ್ಸಿನ ಕಾರು ತಯಾರಿಕಾ ಕಂಪನಿ ಗುಜರಾತಿನಲ್ಲಿ ಘಟಕ ಸ್ಥಾಪಿಸಿ ಬೃಹತ್ ಪ್ರಮಾಣದ ಹೂಡಿಕೆ ಮಾಡುವುದನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

ತನ್ನ ಟ್ವಿಟ್ಟರ್ ಖಾತೆಯಲ್ಲಿ ಮೋದಿ ಈಗಾಗಲೇ "ಗುಜ್ ಮತ್ತೊಂದು ವಾಹನ ಕಂಪನಿ ಪ್ಯೂಜೊವನ್ನು ಸ್ವಾಗತಿಸುತ್ತಿದೆ. ಗುಜರಾತ್ ಜಾಗತಿಕ ವಾಹನ ಹಬ್ ಅನ್ನೋದನ್ನು ಇದು ಸತ್ಯವಾಗಿಸಿದೆ" ಎಂದು ಟ್ವಿಟ್ಟಿಸಿದ್ದಾರೆ.

ಪಿಎಸ್ಎಗೆ ಫೋರ್ಡ್ ಇಂಡಿಯಾ ಘಟಕದ ಹತ್ತಿರವೇ ಭೂವಿತರಣೆ ಮಾಡುವ ನಿರೀಕ್ಷೆಯಿದೆ. ಸನಂದ್ ಪ್ರದೇಶದಲ್ಲಿ ಈಗಾಗಲೇ ಟಾಟಾ ಮೋಟರ್ಸ್ ನ ನ್ಯಾನೊ ಘಟಕ ಕೂಡ ಇದೆ.

ಪ್ಯೂಜೊ ಇಲ್ಲಿ ನೂತನ ಸೆಡಾನ್ ಕಾರನ್ನು ತಯಾರಿಸಲು ಯೋಜಿಸಿದೆ. ಇಲ್ಲಿ ವರ್ಷಕ್ಕೆ ಸುಮಾರು 3 ಲಕ್ಷ ಕಾರು ಉತ್ಪಾದಿಸುವ ಯೋಜನೆ ಕಂಪನಿಗಿದೆ.

ಪ್ಯೂಜೊ ಆಗಮಿಸುವ ನಿರ್ಧಾರದಿಂದ ಸನಂದ್ ಪ್ರದೇಶವು ಆಟೋ ಹಬ್ ಆಗಿ ಪರಿಣಮಿಸಿದೆ. ಅಲ್ಲಿ ಈಗಾಗಲೇ ಟಾಟಾ ನ್ಯಾನೊ ಘಟಕವಿದೆ. ಫೋರ್ಡ್ ತನ್ನ ಭಾರತದ ಎರಡನೇ ಘಟಕಕ್ಕಾಗಿ 5 ಸಾವಿರ ಎಕರೆ ಪ್ರದೇಶ ಸ್ವಾಧೀನ ಪಡಿಸಿಕೊಂಡಿದೆ. ಇಲ್ಲಿ ಘಟಕ ಸ್ಥಾಪಿಸುವ ಇಂಗಿತವನ್ನು ಮಾರುತಿ ಸುಜುಕಿ ಇತ್ತೀಚೆಗೆ ವ್ಯಕ್ತಪಡಿಸಿದೆ.

More from DriveSpark

Article Published On: Friday, September 2, 2011, 16:12 [IST]
English summary
French carmaker PSA Peugeot Citroen has decided to set up its first Indian car manufacturing plant in Sanand, Gujarat. The company will be investing up to Rs.4,000 for the plant. In this regard Gujarath CM Narendra modi tweeted "Guj welcomes yet another auto giant Peugeot to share growth! Guj has emerged as global automobile hub in true sense"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+