210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

ಮಹೀಂದ್ರಾ ಒಡೆತನದ ಪ್ಯೂಜೊ ಮೋಟರ್ ಸೈಕಲ್ಸ್ ಕಂಪನಿಯು ಜಾಂಗೊ 125 ಸ್ಕೂಟರಿನ 210 ಆನಿವರ್ಸರಿ ಎಡಿಶನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಸ್ಕೂಟರ್ ಅನ್ನು ಪ್ಯೂಜೊದ ಮೋಟಾರ್ ಸೈಕಲ್ ವಿಭಾಗದ ಸ್ಮರಣೆಗೆಗಾಗಿ ಬಿಡುಗಡೆಗೊಳಿಸಿಲ್ಲ.

210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

ಬದಲಿಗೆ ಕಂಪನಿಯ ಮುಂಚಿನ ವ್ಯವಹಾರದ ಆಚರಣೆಗಾಗಿ ಬಿಡುಗಡೆಗೊಳಿಸಲಾಗಿದೆ. ಪ್ಯೂಜೊ ಕುಟುಂಬವು 1810ರಲ್ಲಿ ಫ್ರಾನ್ಸ್‌ನಲ್ಲಿ ಕಾಫಿ ಗಿರಣಿ ಹಾಗೂ ಸೈಕಲ್ ತಯಾರಕ ವ್ಯವಹಾರವನ್ನು ಆರಂಭಿಸಿತು. ಪ್ಯೂಜೊ ಕಂಪನಿಯನ್ನು 1896ರಲ್ಲಿ ಆರ್ಮಾಂಡ್ ಪ್ಯೂಜೊ ಸ್ಥಾಪಿಸಿದರು. 2015ರಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಪ್ಯೂಜೊ ಕಂಪನಿಯ 51% ಷೇರುಗಳನ್ನು ಖರೀದಿಸಿತು.

210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

2019ರಲ್ಲಿ ಪ್ಯೂಜೊ ಮೋಟಾರ್‌ಸೈಕಲ್ಸ್ ಮಹೀಂದ್ರಾ ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ಮಾರ್ಪಟ್ಟಿತು. ಸದ್ಯಕ್ಕೆ ಮಾಲೀಕತ್ವವನ್ನು ಲೆಕ್ಕಿಸದೆ, ಫ್ರೆಂಚ್ ಬೈಕು ತಯಾರಕ ಕಂಪನಿಯು ತನ್ನ ಇತಿಹಾಸ ಹಾಗೂ ಪರಂಪರೆಯನ್ನು ಹೊಸ ಸೀಮಿತ ಆವೃತ್ತಿಯ ಸ್ಕೂಟರ್‌ನೊಂದಿಗೆ ಸಂಭ್ರಮಿಸಲು ನಿರ್ಧರಿಸಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

210 ಆನಿವರ್ಸರಿ ಎಡಿಶನ್ ಸ್ಕೂಟರಿನ ಕೇವಲ 21 ಯುನಿಟ್ ಗಳನ್ನು ಮಾತ್ರ ಉತ್ಪಾದಿಸಲಾಗುವುದು. ಈ ಸ್ಕೂಟರ್ ಫ್ರೆಂಚ್ ರಾಷ್ಟ್ರೀಯ ಧ್ವಜದ ಬಣ್ಣದಂತೆ ಬ್ಲೂ, ಬ್ಲಾಂಕ್ ಹಾಗೂ ರೂಜ್ (ನೀಲಿ, ಬಿಳಿ ಹಾಗೂ ಕೆಂಪು) ತ್ರಿವರ್ಣ ಬಣ್ಣವನ್ನು ಹೊಂದಿದೆ.

210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

ಈ ಸ್ಕೂಟರಿನ ಮುಂಭಾಗವು ಬಿಳಿ ಬಾಡಿ ಪ್ಯಾನೆಲ್ ಗಳನ್ನು ಹೊಂದಿದ್ದರೆ, ಕೆಂಪು, ನೀಲಿ ಸ್ಟ್ರೈಪ್ ಗಳು ಲಂಬವಾಗಿವೆ. ಈ ಸ್ಕೂಟರಿನ ಸೈಡ್ ಪ್ರೊಫೈಲ್ ನೀಲಿ ಬಣ್ಣ ಹಾಗೂ ಅದರ ಮೇಲ್ಭಾಗವು ಕ್ರೋಮ್ ಸ್ಟ್ರಿಪ್ ಅನ್ನು ಹೊಂದಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

ಸ್ಕೂಟರಿನ ಮೇಲ್ಭಾಗವು ಬಿಳಿ ಬಣ್ಣವನ್ನು ಹೊಂದಿದೆ. ಈ ಸ್ಕೂಟರಿನಲ್ಲಿ ಕೆಂಪು ಬಣ್ಣದಲ್ಲಿ ಬಿಳಿ ಸ್ಟಿಚಿಂಗ್ ಹೊಂದಿರುವ ಆಕರ್ಷಕವಾದ ಕ್ವಿಲ್ಟೆಡ್ ಲೆದರ್ ಸ್ಪ್ಲಿಟ್ ಸೀಟುಗಳನ್ನು ನೀಡಲಾಗಿದೆ.

210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

ಈ ಸ್ಕೂಟರಿನ ಬಾಡಿಯಲ್ಲಿ 210 ಎಂಬ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿದೆ. ಒಟ್ಟಾರೆಯಾಗಿ ಈ ಸೀಮಿತ ಆವೃತ್ತಿಯ ಮಾದರಿಯು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

ಈ ಸ್ಕೂಟರಿನಲ್ಲಿ 125 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 9.99 ಬಿಹೆಚ್ ಪಿ ಪವರ್ ಹಾಗೂ 8.9 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಗಳನ್ನು ಅಳವಡಿಸಲಾಗಿದೆ.

210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

ಈ ಸ್ಕೂಟರ್ ಎರಡೂ ತುದಿಗಳಲ್ಲಿ ಎಬಿಎಸ್ ಜೊತೆಗೆ ಡಿಸ್ಕ್ ಬ್ರೇಕ್ ಹೊಂದಿರುವ 12 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಜಾಂಗೊ 210 ಆನಿವರ್ಸರಿ ಎಡಿಶನ್ ಸ್ಕೂಟರಿನ ಬೆಲೆ 437,800 ಜೆಪಿವೈ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.3.1 ಲಕ್ಷಗಳಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

210ನೇ ವರ್ಷದ ಸಂಭ್ರಮಕ್ಕಾಗಿ ವಿಶೇಷ ಸ್ಕೂಟರ್ ಬಿಡುಗಡೆಗೊಳಿಸಿದ ಮಹೀಂದ್ರಾ ಒಡೆತನದ ಕಂಪನಿ

ಸಣ್ಣ ಸ್ಕೂಟರ್‌ ಭಾರೀ ಬೆಲೆಯನ್ನು ಹೊಂದಿದೆ. ಎರಡು ಶತಮಾನಗಳಷ್ಟು ಹಳೆಯದಾದ ಕುಟುಂಬ ವ್ಯವಹಾರವನ್ನು ಸಂಭ್ರಮಿಸಲು ಈ ಸ್ಕೂಟರಿನ ಉತ್ಪಾದನೆಯನ್ನು ಕೇವಲ 21 ಯುನಿಟ್ ಗಳಿಗೆ ಸೀಮಿತಗೊಳಿಸಲಾಗಿದೆ.

Most Read Articles

Kannada
English summary
Peugeot launches 210th anniversary edition of Django 125 scooter. Read in Kannada.
Story first published: Monday, October 5, 2020, 19:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X