ಮೂರು ಚಕ್ರದ ಸ್ಕೂಟರ್ ಬಿಡುಗಡೆಗೊಳಿಸಿದ ಪ್ಯೂಜೊ ಮೋಟಾರ್‌ಸೈಕಲ್

ಪ್ಯೂಜೊ ಮೋಟಾರ್‌ಸೈಕಲ್ ತನ್ನ ಮೂರು ಚಕ್ರಗಳ ಪ್ಯೂಜೊ ಮೆಟ್ರೊಪೊಲಿಸ್ ಸ್ಕೂಟರ್ ಅನ್ನು ಫ್ರಾನ್ಸ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಕೂಟರ್ 400 ಸಿಸಿಯ ಶಕ್ತಿಶಾಲಿ ಎಂಜಿನ್ ಹೊಂದಿದೆ. ಇತ್ತೀಚೆಗೆ ಈ ಸ್ಕೂಟರ್ ಅನ್ನು ಗುವಾಂಗ್‌ಡಾಂಗ್ ಸಿಟಿ ಪೊಲೀಸರು ತಮ್ಮ ಪಡೆಗೆ ಸೇರ್ಪಡೆಗೊಳಿಸಿದ್ದಾರೆ.

ಮೂರು ಚಕ್ರದ ಸ್ಕೂಟರ್ ಬಿಡುಗಡೆಗೊಳಿಸಿದ ಪ್ಯೂಜೊ ಮೋಟಾರ್‌ಸೈಕಲ್

ಇನ್ನು ಪ್ಯೂಜೊ ಮೋಟಾರ್‌ಸೈಕಲ್ ಬಗ್ಗೆ ಹೇಳುವುದಾದರೆ, ಮಹೀಂದ್ರಾ ಕಂಪನಿಯ ಪ್ಯೂಜೊ ದ್ವಿಚಕ್ರ ವಾಹನ ವಿಭಾಗವನ್ನು 2019ರಲ್ಲಿ ಖರೀದಿಸಿತು. ಈ ಮೂರು ಚಕ್ರಗಳ ಸ್ಕೂಟರ್ ಅನ್ನು ಫ್ರಾನ್ಸ್‌ನಲ್ಲಿ ಮಾತ್ರ ಬಿಡುಗಡೆಗೊಳಿಸಲಾಗಿದೆ. ಈ ಸ್ಕೂಟರ್ ಭಾರತದಲ್ಲಿಯೂ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಪ್ಯೂಜೊ ಮೆಟ್ರೊಪೊಲಿಸ್ ಸ್ಕೂಟರಿನಲ್ಲಿ 400 ಸಿಸಿಯ ಪವರ್ ಮೋಷನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 35 ಬಿಹೆಚ್‌ಪಿ ಪವರ್ ಹಾಗೂ 38 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಮೂರು ಚಕ್ರದ ಸ್ಕೂಟರ್ ಬಿಡುಗಡೆಗೊಳಿಸಿದ ಪ್ಯೂಜೊ ಮೋಟಾರ್‌ಸೈಕಲ್

ಈ ಸ್ಕೂಟರ್ ಯಾಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಅನ್ನು ಸಹ ಹೊಂದಿದೆ. ಈ ಸ್ಕೂಟರ್‌ ಅಗ್ರೇಸಿವ್ ಡಿಸೈನ್ ಹಾಗೂ ಲುಕ್ ಅನ್ನು ಹೊಂದಿದೆ. ಮುಂಭಾಗದಲ್ಲಿರುವ ಎರಡು ವ್ಹೀಲ್ ಗಳ ಕಾರಣಕ್ಕೆ ಈ ಸ್ಕೂಟರ್ ಹೆಚ್ಚು ನೇರವಾದ ಆಂಗಲ್ ಅನ್ನು ನೀಡುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮೂರು ಚಕ್ರದ ಸ್ಕೂಟರ್ ಬಿಡುಗಡೆಗೊಳಿಸಿದ ಪ್ಯೂಜೊ ಮೋಟಾರ್‌ಸೈಕಲ್

ಸಾಕಷ್ಟು ಅಗಲವಿರುವ ಸ್ಕೂಟರಿನ ಮುಂಭಾಗವು ಎರಡು ಹೆಡ್‌ಲೈಟ್‌ಗಳನ್ನು ಹೊಂದಿದೆ. ಸ್ಕೂಟರ್‌ನಲ್ಲಿರುವ ಎಲ್ಲಾ ಲೈಟಿಂಗ್ ಗಳು ಎಲ್ಇಡಿಯಾಗಿವೆ. ಈ ಸ್ಕೂಟರ್ ತನ್ನ ಪವರ್ ಹಾಗೂ ಪರ್ಫಾಮೆನ್ಸ್ ನಿಂದ ಇತರ ಮ್ಯಾಕ್ಸಿ ಸ್ಕೂಟರ್‌ಗಳನ್ನು ಹಿಂದಿಕ್ಕಬಲ್ಲದು.

ಮೂರು ಚಕ್ರದ ಸ್ಕೂಟರ್ ಬಿಡುಗಡೆಗೊಳಿಸಿದ ಪ್ಯೂಜೊ ಮೋಟಾರ್‌ಸೈಕಲ್

ಪ್ಯೂಜೊ ಮೆಟ್ರೊಪೊಲಿಸ್ ಬಿಡುಗಡೆಯಾದ ನಂತರ ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ತೀರಾ ಕಡಿಮೆಯಾದರೂ ಬಿಡುಗಡೆಯಾದರೆ, ಕಡಿಮೆ ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಲಾಗುವುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮೂರು ಚಕ್ರದ ಸ್ಕೂಟರ್ ಬಿಡುಗಡೆಗೊಳಿಸಿದ ಪ್ಯೂಜೊ ಮೋಟಾರ್‌ಸೈಕಲ್

ಭಾರತದಲ್ಲಿ ಮಾರಾಟವಾಗುವ ಮ್ಯಾಕ್ಸಿ ಸ್ಕೂಟರ್‌ಗಳು ಗರಿಷ್ಠ 125 ಸಿಸಿ -150 ಸಿಸಿಯಲ್ಲಿ ಮಾರಾಟವಾಗುತ್ತವೆ. ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಹಾಗೂ ಹೋಂಡಾ ಫೋರ್ಜಾ 300 ಸ್ಕೂಟರ್ ಗಳು ಹೆಚ್ಚಿನ ಪವರ್ ನೊಂದಿಗೆ ಮಾರಾಟವಾಗಲಿವೆ.

ಮೂರು ಚಕ್ರದ ಸ್ಕೂಟರ್ ಬಿಡುಗಡೆಗೊಳಿಸಿದ ಪ್ಯೂಜೊ ಮೋಟಾರ್‌ಸೈಕಲ್

ಪ್ಯೂಜೊ ಮೋಟಾರ್‌ಸೈಕಲ್ ಜಾಗತಿಕ ಮಟ್ಟದ ಕಂಪನಿಯಾಗಿದೆ. ಭಾರತವು ದ್ವಿಚಕ್ರ ವಾಹನಗಳ ಅತಿದೊಡ್ಡ ಮಾರುಕಟ್ಟೆಯಾಗಿದೆ. ಈ ಕಾರಣಕ್ಕೆ ದೊಡ್ಡ ದೊಡ್ಡ ಆಟೋಮೊಬೈಲ್ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುತ್ತವೆ.

Article Published On: Friday, September 11, 2020, 17:08 [IST]
English summary
Peugeot motorcycle launches three wheeled maxi scooter in France. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+