ಟಾಟಾ ಮಾರಾಟ ತುಸು ಇಳಿಕೆ, ನ್ಯಾನೊ ಭಾರಿ ಇಳಿಕೆ

Tata Nano
ಮುಂಬೈ, ಸೆ 02: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್, ಕಳೆದ ತಿಂಗಳ ಒಟ್ಟಾರೆ ವಾಹನ ಮಾರಾಟದಲ್ಲಿ ಶೇಕಡ 3ರಷ್ಟು ಇಳಿಕೆ ಕಂಡಿದೆ. ಕಂಪನಿಯು ಆಗಸ್ಟ್ ತಿಂಗಳಲ್ಲಿ 64,078 ಕಾರು ಮಾರಾಟ ಮಾಡಿದ್ದು ಇದಕ್ಕೂ ಹಿಂದಿನ ವರ್ಷದ ಇದೇ ತಿಂಗಳ 59,874 ಯೂನಿಟ್ ವಾಹನ ಮಾರಾಟಕ್ಕೆ ಹೋಲಿಸಿದರೆ ತುಸು ಇಳಿಕೆ ದಾಖಲಿಸಿದೆ.

ಕಂಪನಿಯು ಇದೇ ತಿಂಗಳಲ್ಲಿ ದೇಶದ ಮಾರುಕಟ್ಟೆಯಲ್ಲಿ ಸುಮಾರು 59,874 ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ಮಾರಾಟ ಮಾಡಿದ್ದು ಕಳೆದ ವರ್ಷದ 60,797 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 2ರಷ್ಟು ಇಳಿಕೆ ದಾಖಲಿಸಿದೆ.

ಇದೇ ಸಮಯದಲ್ಲಿ ಕಂಪನಿಯ ವಾಹನ ರಫ್ತು 4,204 ಯೂನಿಟ್ ಗೆ ತಲುಪಿದ್ದು, ಕಳೆದ ವರ್ಷದ ಇದೇ ತಿಂಗಳ 5,157 ಯೂನಿಟ್ ಗೆ ಹೋಲಿಸಿದರೆ ಶೇಕಡ 18ರಷ್ಟು ಇಳಿಕೆ ಕಂಡಿದೆ.

ಆದರೆ ಕಂಪನಿಯ ವಾಣಿಜ್ಯ ವಾಹನ ಮಾರಾಟ 43,045 ಯೂನಿಟ್ ಗೆ ತಲುಪಿ ಶೇಕಡ 21ರಷ್ಟು ಹೆಚ್ಚಾಗಿದೆ. ಹಗುರವಾಣಿಜ್ಯ ವಾಹನ ಮಾರಾಟ ಶೇಕಡ 27ರಷ್ಟು ಏರಿಕೆ ಕಂಡಿದೆ. ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನ ಮಾರಾಟ ಶೇಕಡ 12ರಷ್ಟು ಏರಿಕೆ ಕಂಡಿದೆ ಎಂದು ಟಾಟಾ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಆಗಸ್ಟ್ ತಿಂಗಳಿನಲ್ಲಿ ಕಂಪನಿ ವಿತರಣೆ ಮಾಡುವ ಫಿಯೆಟ್ ಕಾರುಗಳ ಮಾರಾಟ 17,898 ಯೂನಿಟ್ ಗೆ ತಲುಪಿದ್ದು ಶೇಕಡ 34ರಷ್ಟು ಇಳಿಕೆ ಕಂಡಿದೆ. ಟಾಟಾ ಪ್ಲಸ್ ಮಾರಾಟ 16,829 ಯೂನಿಟ್ ಮತ್ತು 1,029 ಫಿಯೆಟ್ ಕಾರು ಮಾರಾಟವಾಗಿವೆ.

ನ್ಯಾನೊ ಮಾರಾಟ: ಇದೇ ತಿಂಗಳಿನಲ್ಲಿ ಸಣ್ಣಕಾರು ಟಾಟಾ ನ್ಯಾನೊ ಮಾರಾಟ 1,202 ಯೂನಿಟ್ ಗೆ ತಲುಪಿದ್ದು ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇಕಡ 85ರಷ್ಟು ಇಳಿಕೆ ಕಂಡಿದೆ.

More from DriveSpark

Article Published On: Friday, September 2, 2011, 12:40 [IST]
English summary
Tata Motors August sales fall 3 percent and Tata Nano sales dip 85 percent. Tata Motors overall sales for August, which stood at 64,078 units. Nano's sales stood at 1,202 units during the month, down 85 per cent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+