ಗಿನ್ನಿಸ್ ಬುಕ್ ಸೇರಿದ ವಿಶ್ವದ ವೇಗದ ಹುಡುಗಿ

ಈಕೆಯ ಹೆಸರು ಪೊರ್ಟರ್ ಫೀಲ್ಡ್. ನೋಡಲು ಆಕರ್ಷಕ ಹುಡುಗಿ. ಇದೀಗ ತನ್ನ ಹೋಂಡಾ ಫೈರ್ ಬ್ಲೇಡ್ ಬೈಕಿನಲ್ಲಿ ಗಂಟೆಗೆ 200.137 ಮೈಲು ಅಂದರೆ 322.089 ಕಿ.ಮೀ. ಸಾಗಿ ಗಿನ್ನಿಸ್ ದಾಖಲೆ ಮಾಡಿದ್ದಾಳೆ.
ಟೆಕ್ಸಾಸ್ ನ ಬೊಬಾವಿಲ್ಲೆ ಸಾಲ್ಟ್ ಫ್ಲಾಟ್ ಸ್ಥಳದಲ್ಲಿ ಈಕೆ ಈ ಗಿನ್ನಿಸ್ ರೈಡ್ ಮಾಡಿದ್ದಾಳೆ. ಈಕೆ ದಲ್ಲಾಸ್ ನಲ್ಲಿ ಪೋರ್ಟರ್ ಫೀಲ್ಡ್ ಮೋಟರ್ ಸೈಕಲ್ ಡೀಲರ್ಷಿಪ್ ಹೊಂದಿದ್ದಾಳೆ. ಈಕೆ ಪ್ರತಿವಾರ ಬೋನೆವಿಲ್ಲೆ ಸ್ಪೀಡಿ ವೀಕ್ ನಲ್ಲಿ ಪಾಲ್ಗೊಳ್ಳುತ್ತಿದ್ದಳು.
ಈಕೆಯ ಊರು ದಲ್ಲಾಸ್ ಟೆಕ್ಸಾಸ್. ಈಕೆ 16 ವರ್ಷವಿರುವಾಗಲೇ ಬೈಕ್ ರೈಡಿಂಗ್ ಹುಚ್ಚು ಹತ್ತಿಸಿಕೊಂಡಿದ್ದಳು. 200 ಡಾಲರ್ ನೀಡಿ ಪಕ್ಕದ ಮನೆಯಾತನಿಂದ ಬೈಕ್ ಖರೀದಿಸಿದ್ದಳು. ಓದಿದ್ದು ಅಕೌಂಟೆಂಟ್ ಡಿಗ್ರಿ. ಆದರೆ ಕೆಲಸ ಮಾಡುತ್ತಿದ್ದದ್ದು ಯಮಾಹ ವರ್ಕ್ ಶಾಪ್ ನಲ್ಲಿ. ಆಕೆಯೇ ವರ್ಕ್ ಶಾಪ್ ಓನರ್ ಆಗಿದ್ದಳು.
2007ರಲ್ಲಿ ಬೊನಾವಿಲ್ಲೆ ಸಾಲ್ಟ್ ಫ್ಯಾನ್ಸ್ ರೇಸ್ ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಪ್ರತಿಗಂಟೆಗೆ 110 ಮೈಲು ವೇಗದಲ್ಲಿರುವಾಗ ಬೈಕ್ ಅಪಘಾತವಾಗಿ ಹೆಲಿಕಾಪ್ಟರ್ ಮೂಲಕ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಇಲ್ಲಿಂದ ನಂತರ ಈಕೆ ಬೈಕ್ ಸ್ಪೀಡ್ ವಿಷಯದಲ್ಲಿ ಪಡೆದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.
ಈಕೆಯ ಪ್ರಮುಖ ದಾಖಲೆಗಳು
* ಎಎಂಎ ಫಿಮೆಲ್ ರೈಡರ್ ಆಫ್ ದಿ ಇಯರ್ 2008
* ಬೊನೆವಿಲ್ಲೆ ವುಮೆನ್ಸ್ ಸ್ಪಿರಿಟ್ ಅವಾರ್ಡ್ 2008
* ಸರಾಸರಿ 240.382 ಮೈಲಿನಲ್ಲಿ ಬಿಯುಬಿ ಸ್ಪೀಡ್ ಟ್ರೈಯಲ್ ಗೆಲುವು
ಈಕೆ ಮಕ್ಕಳ ಪರ ಸಂಘಟನೆಯೊಂದರ ರಾಷ್ಟ್ರೀಯ ವಕ್ತಾರೆಯೂ ಹೌದು.


Click it and Unblock the Notifications








