ಬೆಕ್ಕಸ ಬೆರಗಾಗಿಸುವ ವಿಶ್ವದ ಬೃಹತ್ ರಕ್ಕಸ ಬೈಕ್

World Biggest Motorcycle
ಪೂರ್ವ ಜರ್ಮನಿಯ ಯುವಕರ ಗುಂಪು ಹಾಗೆ ಸುಮ್ಮನೆ ಅಭಿವೃದ್ಧಿಪಡಿಸಿದ ಬೈಕೊಂದು ವಿಶ್ವದ ಬೃಹತ್ ಬೈಕಾಗಿ ಗಿನ್ನಿಸ್ ಬುಕ್ ದಾಖಲೆ ಮಾಡಿದೆ. ಟಿಲೊ ನೈಬಲ್ ನೇತೃತ್ವದಲ್ಲಿ ಅಭಿವೃದ್ಧಿಪಡಿಸಿರುವ ಈ ಬೈಕ್ ಲಾರಿಗಿಂತ ದೊಡ್ಡದಾಗಿದೆ ಅನ್ನೋದು ವಿಶೇಷ.

ಬೆಕ್ಕಸ ಬೆರಗಾಗಿಸುವ ಈ ರಕ್ಕಸ ಬೈಕಿನ ತೂಕ ಸುಮಾರು ಐದು ಟನ್ ನಷ್ಟಿದೆ. ಮಿಲಿಟರಿಯಲ್ಲಿ ಬಳಸುವ ಸೋವಿಯತ್ ಟ್ಯಾಂಕ್ ಟಿ55 ಎಂಜಿನ್ ಬಳಸಲಾಗಿದೆ. ಇದು 800ಕ್ಕೂ ಹೆಚ್ಚು ಹಾರ್ಸ್ ಪವರ್ ನೀಡುತ್ತದೆ. ಗಿನ್ನಿಸ್ ಬುಕ್ ದಾಖಲೆಯಲ್ಲಿ ಇದರ ತೂಕ 4,740 ಕೆ.ಜಿ. ಇದೆ. ಸೋವಿಯತ್ ಕಾರು ಮತ್ತು ರಷ್ಯನ್ ಟಿ ಟ್ಯಾಂಕ್ ಎಂಜಿನ್ ಬಳಸಿ ಟಿಲೊ ನೈಬೆಲ್ ಈ ಬೈಕ್ ಅಭಿವೃದ್ಧಿಪಡಿಸಿದ್ದಾನೆ.

ಮಿಲಿಟರಿಯಲ್ಲಿ ಬಳಸುವ ಯಂತ್ರಗಳು, ವಾಹನಗಳ ಸೆಕೆಂಡ್ ಹ್ಯಾಂಡ್ ಪಾರ್ಟ್ ಗಳನ್ನು ಬಳಸಿ ಈ ಬೈಕ್ ನಿರ್ಮಿಸಲಾಗಿದೆ. ಒಟ್ಟಾರೆ ಬೈಕಿನ ಚಿತ್ರ ನೋಡಿದರೆ ನಮ್ಮೂರ ರಸ್ತೆ ಸಾಲದು ಎಂದೆನಿಸುತ್ತದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Tilo Niebel of the East German village of Zillah has made a giant motorcycle using military scraps weighing 5 tons. This vehicle is the biggest bike in the world as described by Tilo Niebel.
Story first published: Tuesday, February 28, 2012, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X