ಕೈದಿ ನಂಬರ್ 697: ತೆಲುಗು ಸಿನಿಮಾ ನೆನಪಾಯಿತೇ?

ಆಮದು ಮಾಡಿಕೊಂಡ ತನ್ನ ಪ್ರೀತಿಯ ಕಾರಿನಲ್ಲಿ ಬಳ್ಳಾರಿ ರಸ್ತೆಯಲ್ಲಿ ರೆಡ್ಡಿ ಪ್ರಯಾಣಿಸುವುದನ್ನು ನೋಡಬೇಕು. ಭಾರತದ ಅರ್ಧ ಡಜನ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಗಳಲ್ಲಿ ಅವರ ಭದ್ರತಾ ಸಿಬ್ಬಂದಿಗಳು ಮತ್ತು ಸಹಾಯಕರು ನಡುವೆ ರೆಡ್ಡಿಗಾರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಜನಾರ್ದನ ರೆಡ್ಡಿಯಲ್ಲಿ ಯಾವೆಲ್ಲ ಕಾರುಗಳಿವೆ? ನಮ್ಮ ದೇಶದಲ್ಲಿರುವ ಹೆಚ್ಚಿನ ಲಕ್ಷುರಿ ಕಾರುಗಳು ಅವರ ಗ್ಯಾರೇಜಿನಲ್ಲಿವೆ ಅಂದರೆ ನಂಬಲೇಬೇಕು. ಅಷ್ಟೇ ಅಲ್ಲದೇ ಕೋಟಿ ಕೋಟಿ ದರದ ಕಾರುಗಳನ್ನು ಆಮದು ಮಾಡಿಕೊಂಡಿದ್ದಾರೆ.
ಫೋಕ್ಸ್ ವ್ಯಾಗನ್ (ಕೆಎ-01-ಎಂಇ 3690), ಮರ್ಸಿಡಿಸ್ ಬೆಂಝ್(ಕೆಎ-34-ಎಂಸಿ 6336) ಮತ್ತು ಮಿಟ್ಸುಬಿಸಿ ಪಜೆರೊ ಜನಾರ್ದನ ರೆಡ್ಡಿ ಆಮದು ಮಾಡಿಕೊಂಡ ಕಾರುಗಳಾಗಿವೆ. ಜನಾರ್ದನ ರೆಡ್ಡಿಯವರಲ್ಲಿ ಮಿಟ್ಸುಬಿಸಿ ಪಜೆರೊ, ಮರ್ಸಿಡಿಸ್ ಬೆಂಝ್, ಆಡಿ, ಫೋಕ್ಸ್ ವ್ಯಾಗನ್ ಸೇರಿದಂತೆ ಡಜನ್ ಗಟ್ಟಲೆ ಸ್ಪೋರ್ಟಿ ಯುಟಿಲಿಟಿ ವೆಹಿಕಲ್ ಗಳಿವೆ.
ಇವರ ಇಷ್ಟು ಕಾರುಗಳ ಒಟ್ಟು ದರವೆಷ್ಟಿರಬಹುದು? ಎಲ್ಲದಕ್ಕೂ ತೆರಿಗೆ ಕಟ್ಟುತ್ತಾರಾ? ಎಲ್ಲವೂ ಕಾನೂನಿನ ಪ್ರಕಾರ ಖರೀದಿಸಲಾಗಿದೆಯೇ? ಇಷ್ಟು ಕಾರು ಖರೀದಿಸಲು ದುಡ್ಡು ಎಲ್ಲಿಂದ ಬಂತು? ಕೈದಿ ನಂಬರ್ 697 ಸಿಬಿಐಗೆ ಯಾವ ಉತ್ತರ ನೀಡುತ್ತಾರೋ ಗೊತ್ತಿಲ್ಲ.


Click it and Unblock the Notifications








