ಬಳ್ಳಾರಿಯಲ್ಲಿ ರೋಲ್ಸ್ ರಾಯ್ಸ್ ಪ್ಯಾಂಟಮ್ ಯಾರಲ್ಲಿದೆ?

ಬಳ್ಳಾರಿಯ ಜನಾರ್ದನ ರೆಡ್ಡಿಯಲ್ಲಿ ಒಂದು ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರಿದೆ. ಇದು ಐಷಾರಾಮಿ, ದುಬಾರಿ ಕಾರು. ಇದನ್ನು ಸುಮಾರು 4.5 ಕೋಟಿ ರು. ನೀಡಿ ರೆಡ್ಡಿ ಖರೀದಿಸಿದ್ದಾರೆ. ಇದು ಅವರ ದುಬಾರಿ ಕಾರುಗಳಲ್ಲಿ ಒಂದು ದುಬಾರಿ ಕಾರು.
ಈ ಕಾರಿನ ಆರಂಭಿಕ ದರವೇ 3.5 ಕೋಟಿ. ಫೀಚರುಗಳನ್ನು ಅಳವಡಿಸಿದಕ್ಕೆ ಅನುಗುಣವಾಗಿ ದರ ಹೆಚ್ಚಾಗುತ್ತದೆ. ಜನಾರ್ದನ ರೆಡ್ಡಿ ಈ ಕಾರಿಗೆ ಒಂದಿಷ್ಟು ಲಕ್ಷುರಿ ಫೀಚರುಗಳನ್ನು ಅಳವಡಿಸಿ 4.5 ಕೋಟಿ ರು.ಗೆ ಖರೀದಿಸಿದ್ದಾರೆ.
ರೋಲ್ಸ್ ರಾಯ್ಸ್ ಪ್ಯಾಂಟಮ್ ಕೇವಲ ಕಾರಲ್ಲ. ಅದು ರಸ್ತೆಯಲ್ಲಿ ಸಾಗುವ ಲಕ್ಷುರಿ ಹಡಗು. ಇದು ಒಂದು ಲೀಟರ್ ಪೆಟ್ರೊಲ್ ಗೆ ಸರಾಸರಿ 4 ಕಿ.ಮೀ. ಮೈಲೇಜ್ ನೀಡುತ್ತದೆ.
ಪ್ಯಾಂಟಮ್ ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ರೋಲ್ಸ್ ರಾಯ್ಸ್ ಪಂಟೊಮ್ ಇಡಬ್ಲ್ಯುಬಿ ಮತ್ತು ರೋಲ್ಸ್ ರಾಯ್ಸ್ ಪ್ಯಾಂಟಮ್ ಸೆಡಾನ್ ಆವೃತ್ತಿಗಳು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಆಯ್ಕೆಯನ್ನು ಹೊಂದಿವೆ. ಇವೆರಡು ಆವೃತ್ತಿಗಳು ಟ್ಯೂಬ್ ಲೆಸ್ ಟೈರ್ ಹೊಂದಿವೆ.
ಪ್ಯಾಂಟಮ್ ನಲ್ಲಿ ಪ್ರಮುಖ ಸುರಕ್ಷತೆಯ ಫೀಚರುಗಳು ಕೂಡ ಇವೆ. ಅಂದ್ರೆ ಆಂಟಿ ಲಾಕ್ ಬ್ರೇಕ್ ಸಿಸ್ಟಮ್, ಚಾಲಕ ಮತ್ತು ಪ್ರಯಾಣಿಕರ ಏರ್ ಬ್ಯಾಗ್, ಇಮೊಬಿಲೈಜರ್, ಟ್ರಾಕ್ಷನ್ ಕಂಟ್ರೊಲ್, ಮಕ್ಕಳ ಸುರಕ್ಷತೆಯ ಲಾಕ್ ಹೊಂದಿದೆ.


Click it and Unblock the Notifications








