ಜನಾರ್ದನ ರೆಡ್ಡಿಯ ಕಾರು ಶೋಕಿಯ ವಿಸ್ಮಯ ಲೋಕ

ತೆಲುಗು ಸಿನಿಮಾಗಳಲ್ಲಿ ಕಾಣುತ್ತಿದ್ದ ರಾಜಕಾರಣಿಗಳಿಗೂ ಬಳ್ಳಾರಿಯ ಈ ರೆಡ್ಡಿ ಸಹೋದರಿಗೂ ವ್ಯತ್ಯಾಸವೇ ಇರಲಿಲ್ಲ. ಐಷಾರಾಮಿ ಜೀವನ, ಅಂಗರಕ್ಷಕ ಪಡೆ, ಹೆಲಿಕಾಪ್ಟರ್, ಅತ್ಯಾಧುನಿಕ ಬಸ್, ಕಾರುಗಳ ರಾಶಿ ಅವರಲ್ಲಿತ್ತು.
ಜನಾರ್ದನ ರೆಡ್ಡಿಯಲ್ಲಿ ಒಂದು ಬಸ್ ಇದೆ. ಅದರ ದರ ಸುಮಾರು 4 ಕೋಟಿ ಅಂತೆ. ಅದರಲ್ಲಿ ಒಂದು ಬೆಡ್ ರೋಮ್, ಅಡುಗೆ ಮನೆ, ಸ್ಯಾಟಲೈಟ್ ಫೋನ್ ಸೌಲಭ್ಯ, ಪ್ಲಾಸ್ಮಾ ಟೆಲಿವಿಷನ್ ಮತ್ತು ಇಂಟರ್ ನೆಟ್ ಕನೆಕ್ಷನ್ ಹೊಂದಿರುವ ಬಸ್ ಅದು. ಸಾಲದಕ್ಕೆ ರೆಡ್ಡಿ ಸಹೋದರರಲ್ಲಿ ಹೆಲಿಕಾಪ್ಟರ್ ಕೂಡ ಇದೆ.
ಇದನ್ನು ಕಾರು ಕ್ರೇಝ್ ಅನ್ನಿ, ಶೋಕಿ ಅನ್ನಿ, ಅಥವಾ ವಾಹನಗಳ ಹುಚ್ಚು ಅನ್ನಿ. ಜನಾರ್ದನ ರೆಡ್ಡಿಗೆ ಮಾರುಕಟ್ಟೆಗೆ ಬಂದ ಐಷಾರಾಮಿ ಕಾರುಗಳೆಲ್ಲ ಬೇಕು. ಅವರ ಗ್ಯಾರೇಜ್ ನಿಂದ ಸಿಬಿಐ ವಶಪಡಿಸಿಕೊಂಡಿರುವುದೆಲ್ಲ ಐಷಾರಾಮಿ ಕಾರುಗಳು. ಅದರ ದರ ಕೋಟಿ ಕೋಟಿ ರು.ಗಳು.
ಜನಾರ್ದನ ರೆಡ್ಡಿಯಲ್ಲಿ ಕೆಲವು ಆಮದು ಮಾಡಿದ ಕಾರುಗಳಿವೆ. ಮರ್ಸಿಡಿಸ್, ಫೋಕ್ಸ್ ವ್ಯಾಗನ್, ರೋಲ್ಸ್ ರಾಯ್ಸಿ, ಆಡಿ ಹೀಗೆ ಎಲ್ಲಾ ಬಗೆಯ ಕಾರುಗಳಿವೆ. ರೆಡ್ಡಿಗಾರು ಹೊಂದಿರುವ ಕಾರುಗಳು ಯಾವುದು? ಈಗ ಅದರ ದರಗಳೇನು? ಆ ಕಾರುಗಳ ವಿಶೇಷತೆಯೇನು? ಮುಂದಿನ ಪುಟದಲ್ಲಿದೆ ಜನಾರ್ದನ ರೆಡ್ಡಿಗಾರುವಿನ "ಗಾಲಿ" ಲೋಕ.


Click it and Unblock the Notifications








