ಹೊಸ ಟಾಟಾ ಇಂಡಿಗೊ, ಮೈಲೇಜ್ 25 ಕಿ.ಮೀ.

ಟಾಟಾ ಮೋಟರ್ಸ್ ಪರಿಚಯಿಸಿದ ಇಂಡಿಗೊ ಇ-ಸಿಎಸ್ ದೇಶದ ಅತ್ಯುತ್ತಮ ಇಂಧನ ದಕ್ಷತೆಯ ಕಾರಾಗಿ ಹೊರಹೊಮ್ಮಲಿದೆ. ಕಂಪನಿಯ ಪ್ರಕಾರ ನೂತನ ಇಂಡಿಗೊ ಪ್ರತಿಲೀಟರ್ ಡೀಸೆಲ್ ಗೆ 25 ಕಿ.ಮೀ. ಮೈಲೇಜ್ ನೀಡಲಿದೆ.
ಇಂಡಿಗೊ e-CS VX ಸಿಆರ್4 ಡೀಸೆಲ್ ಆವೃತ್ತಿಯ ದೆಹಲಿ ಎಕ್ಸ್ ಶೋರೂಂ ದರ 5.80 ಲಕ್ಷ ರು. ಆಗಿದೆ. ಅದೇ ರೀತಿ ಇಂಡಿಗೊ ಇ-ಸಿಎಸ್ ವಿಎಕ್ಸ್ ಎಂಪಿಎಫ್ಐ ಎಂಜಿನ್ ಇರುವ ಪೆಟ್ರೊಲ್ ಆವೃತ್ತಿ ದರ 4.97 ಲಕ್ಷ ರುಪಾಯಿ ಆಗಿದೆ.
ಕಂಪನಿಯು ಹೆಚ್ಚು ಗ್ರಾಹಕರನ್ನು ಸೆಳೆಯುವ ಉದ್ದೇಶಗಳಿಂದ ನೂತನ ಕಾರಿಗೆ ಹಲವು ಆಫರ್ ಗಳನ್ನು ನೀಡಿದೆ. ನೂತನ ಇಂಡಿಗೊಗೆ 18 ತಿಂಗಳ ವಾರೆಂಟಿ ನೀಡಿದೆ.


Click it and Unblock the Notifications








