ಈ ವಾರ ರಸ್ತೆಗೆ: ಟೊಯೊಟಾ ಎಟಿಯೋಸ್ ಡೀಸೆಲ್

Etios Diesel Launch Sep 9
ಈ ವಾರ ನೂತನ ಎಟಿಯೋಸ್ ಡೀಸೆಲ್ ಆವೃತ್ತಿ ರಸ್ತೆಗಿಳಿಯುವುದನ್ನು ಟೊಯೊಟಾ ಖಚಿತಪಡಿಸಿದೆ. ಇತ್ತೀಚೆಗೆ ಕಂಪನಿಯು ಎಟಿಯೋಸ್ ಲಿವಾ ಪೆಟ್ರೊಲ್ ಆವೃತ್ತಿಯನ್ನು ಹೊರತಂದಿತ್ತು.

ಈಗಾಗಲೇ ಕಂಪನಿಯು ಬೆಂಗಳೂರಿನಲ್ಲಿ ಎಟಿಯೋಸ್ ಮತ್ತು ಎಟಿಯೋಸ್ ಲಿವಾ ಕಾರುಗಳ ಡೀಸೆಲ್ ಆವೃತ್ತಿಗಳನ್ನು ಟೆಸ್ಟ್ ಮಾಡಿತ್ತು. ಇವೆರಡು ಆವೃತ್ತಿಗಳು 1.2 ಲೀಟರ್ ಎಂಜಿನ್ ಮತ್ತು 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ನಿರೀಕ್ಷೆಯಿದೆ. ಇದು ಜಪಾನಿನ ಟೊಯೊಟಾ ಭಾರತದಲ್ಲಿ ಹೊರತರುತ್ತಿರುವ ಮೊದಲ ಡೀಸೆಲ್ ಸಣ್ಣಕಾರುಗಳಾಗಿವೆ.

ಟೊಯೊಟಾ ಕಿರ್ಲೊಸ್ಕರ್ ಮೋಟರ್(ಟಿಕೆಎಂ) ವ್ಯವಸ್ಥಾಪಕ ನಿರ್ದೇಶಕರಾದ ಸಂದೀಪ್ ಸಿಂಗ್ ನೂತನ ಡೀಸೆಲ್ ಆವೃತ್ತಿಗಳು ರಸ್ತೆಗಿಳಿಯುವುದನ್ನು ಖಚಿತಪಡಿಸಿದ್ದಾರೆ.

"ಹೌದು ನಾವು ಸೆಪ್ಟಂಬರ್ 9ರಂದು ಎರಡು ಕಾರುಗಳ ಡೀಸೆಲ್ ಆವೃತ್ತಿಗಳನ್ನು ಹೊರತರಲಿದ್ದೇವೆ. ನಾವು ಆಗಸ್ಟ್ ನಲ್ಲಿಯೇ ಇವೆರಡು ಆವೃತ್ತಿಗಳನ್ನು ಪರಿಚಯಿಸಬೇಕಿತ್ತು. ಜಪಾನಿನಲ್ಲಿ ಸಂಭವಿಸಿದ ಸುನಾಮಿ, ಭೂಕಂಪದಿಂದ ಡೀಸೆಲ್ ಆವೃತ್ತಿಗಳು ಕೊಂಚ ತಡವಾಗಿ ರಸ್ತೆಗಿಳಿಯಬೇಕಾಯಿತು" ಎಂದರು.

More from DriveSpark

Article Published On: Wednesday, September 7, 2011, 11:08 [IST]
English summary
Toyota Kirloskar Motors has confirmed it would be launching the diesel variants the Etios sedan as well as the Etios Liva hatchback early this week. Toyota has already launched the petrol variants of its latest entry level models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+