ಹೇ ನ್ಯಾನೊ!! ಲಂಕೆಯಲ್ಲೂ ಹೊತ್ತಿ ಉರಿದೆಯಾ?

Tata Nano catches Fire in Srilanka
ನ್ಯಾನೊಗ್ನಿ ಮತ್ತೆ ಸುದ್ದಿಯಲ್ಲಿದೆ. ಏನು ಮತ್ತೆ ಯಾವುದಾದರೂ ನ್ಯಾನೊ ಉರಿಯಿತೇ ಎಂದು ಕೇಳುತ್ತಿದ್ದೀರಾ? ಹೌದು ಇದೀಗ ಈ ಸುದ್ದಿ ಕಡಲಾಚೆಯ ಶ್ರೀಲಂಕಾದಿಂದ ಬಂದಿದೆ. ಅಲ್ಲಿ ಕೂಡ ಒಂದು ನ್ಯಾನೊ ಕಾರಿನಲ್ಲಿ ತನ್ನಷ್ಟಕ್ಕೆ ಬೆಂಕಿ ಕಾಣಿಸಿಕೊಂಡು ಉರಿದು ಹೋಗಿದೆಯಂತೆ!

ಟಾಟಾ ಮೋಟರ್ಸ್ ಈ ವರ್ಷದ ಮೇ ತಿಂಗಳಿನಲ್ಲಿ ನ್ಯಾನೊ ಕಾರುಗಳನ್ನು ಶ್ರೀಲಂಕಾಕ್ಕೆ ರಫ್ತು ಮಾಡಿತ್ತು. ಅಲ್ಲಿ ಅದು ಬಜೆಟ್ ಟ್ಯಾಕ್ಸಿಯಾಗಿ ಜನಪ್ರಿಯತೆ ಗಳಿಸಿತ್ತು. ಅಲ್ಲಿನ ಕಂಪನಿಯೊಂದು ಇದನ್ನು ಅಗ್ಗದ ಟ್ಯಾಕ್ಸಿಯಾಗಿ ರಸ್ತೆಗಿಳಿಸಿತ್ತು.

ಬಜೆಟ್ ಟ್ಯಾಕ್ಸಿ ನಿರ್ದೇಶಕರಾದ ಜಯಸುಮನಾ ಪ್ರಕಾರ ಡ್ರೈವರ್ ಕಾರು ಸ್ಟಾರ್ಟ್ ಮಾಡಲು ನೋಡಿದಾಗ ಕಾರು ತನ್ನಷ್ಟಕ್ಕೆ ಆಫ್ ಆಯಿತಂತೆ. ಮತ್ತೆ ಸ್ಟಾರ್ಟ್ ಮಾಡಲು ನೋಡಿದಾಗ ಪ್ರಯೋಜನವಾಗಿಲ್ಲ. ಕಾರಿನಿಂದ ಇಳಿದು ನೋಡಿದಾಗ ಕಾರಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನುತ್ತಾರೆ.

ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಸ್ಪಷ್ಟವಾಗಿಲ್ಲ. ಈ ಕುರಿತು ಟಾಟಾ ಮೋಟರ್ಸ್ ತನಿಖೆ ಕೈಗೊಳ್ಳಲು ನಿರ್ಧರಿಸಿದೆ. ಈ ಕುರಿತು ಹೆಚ್ಚಿನ ತನಿಖೆಗಾಗಿ ಟಾಟಾ ಮೋಟರ್ಸ್ ಅಧಿಕಾರಿಗಳು ಶುಕ್ರವಾರ ಶ್ರೀಲಂಕೆಗೆ ಪ್ರಯಾಣ ಬೆಳೆಸಲಿದ್ದಾರೆ.

ಕೆಲವು ದಿನಗಳ ಹಿಂದೆ ಗುಜರಾತಿನಲ್ಲೂ ಒಂದು ನ್ಯಾನೊ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಶ್ರೀಲಂಕಾದ ಕಾರು ಸೇರಿದಂತೆ ಇಲ್ಲಿವರೆಗೆ ಒಟ್ಟು 9 ನ್ಯಾನೊ ಕಾರುಗಳು ಹೊತ್ತಿ ಉರಿದಿವೆ.

More from DriveSpark

Article Published On: Wednesday, September 7, 2011, 16:37 [IST]
English summary
A Tata Nano is reported to have caught fire in Colombo, Sri Lanka on 2th September. A Tata Nano that was being used as a taxi by a Colombo based company was involved in this accident. This incident is a huge blow to Tata Motors which recently began exporting the Nano to Sri Lanka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+