ಮಹೀಂದ್ರ ಹೊಸ ರೇವಾ ರಸ್ತೆಗಿಳಿಯೋದು ಯಾವಾಗ?

"ಹೊಸ ತಂತ್ರಜ್ಞಾನದ ನೂತನ ಎಲೆಕ್ಟ್ರಿಕ್ ರೇವಾ ಕಾರನ್ನು ಮುಂದಿನ 18 ತಿಂಗಳಲ್ಲಿ ಕಂಪನಿಯು ಪರಿಚಯಿಸಲಿದೆ" ಎಂದು ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ ನ ತಂತ್ರಜ್ಞಾನ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಚೇತನ ಮೈನಿ ಹೇಳಿದ್ದಾರೆ.
ನೂತನ ಕಾರು ಮಹೀಂದ್ರ ಕಾರುಗಳ ತಂತ್ರಜ್ಞಾನ ಬಳಸಿಕೊಂಡು ರಸ್ತೆಗಿಳಿಯುವ ನಿರೀಕ್ಷೆಯಿದೆ. ಮಹೀಂದ್ರ ಕಂಪನಿಯು ಈ ಹಿಂದೆ ಸ್ಕಾರ್ಪಿಯೊದ ಹೈಬ್ರಿಡ್ ಆವೃತ್ತಿ ಪರಿಚಯಿಸುವುದಾಗಿ ಹೇಳಿತ್ತು.
ಇದೀಗ ಹೊಸ ವಿನ್ಯಾಸದ ಆಕರ್ಷಕ ರೇವಾ ಕಾರೊಂದನ್ನು ಹೊರತರುವ ಸಿದ್ದತೆಯಲ್ಲಿದೆ. ಇದು ಯುವಕರನ್ನು ಪ್ರಮುಖವಾಗಿ ಟಾರ್ಗೆಟ್ ಮಾಡಿಕೊಂಡು ರಸ್ತೆಗಿಳಿಯಲಿದೆ ಎನ್ನಲಾಗಿದೆ.
ಮಹೀಂದ್ರ ಕಂಪನಿಯಿಂದ ದೇಶದ ರಸ್ತೆಗಿಳಿಯಲು ಸಾಲು ಸಾಲು ರೇವಾ ಕಾರುಗಳು ಸರದಿಯಲ್ಲಿವೆ. ಕಂಪನಿಯು ಈಗ ವರ್ಷಕ್ಕೆ ಮೂರು ಸಾವಿರ ರೇವಾ ಕಾರುಗಳನ್ನು ಉತ್ಪಾದಿಸುತ್ತಿದೆ. ಇದನ್ನು 30 ಸಾವಿರ ಯೂನಿಟ್ ಗೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ.
ನೂತನ ರೇವಾ ಎನ್ಎಕ್ಸ್ಆರ್ ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಇಂಧನ ದರಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಕಾರೊಂದರ ನಿರೀಕ್ಷೆಯಲ್ಲಿರುವ ಜನರಿಗೆ ಹೊಸ ರೇವಾ ಹೊಸ ಭಾಷ್ಯ ಬರೆಯಲಿ.


Click it and Unblock the Notifications








