ಇಟಿಯೋಸ್ ಮತ್ತು ಲಿವಾ ಹೊಸ ಡೀಸೆಲ್ ಹವಾ

ಎಕ್ಸ್ ಟೀರಿಯರ್: ನೂತನ ಡೀಸೆಲ್ ಆವೃತ್ತಿಗಳನ್ನು ಬೋಲ್ಡ್ ಸಿಂಪ್ಲಿಸಿಟಿ ಅಂದ್ರೆ ಸೆಳೆಯುವ ಸರಳತೆಯಿಂದ ವಿನ್ಯಾಸ ಮಾಡಲಾಗಿದೆ. ಏರೋಡೈನಾಮಿಕ್ ಫೀಚರುಗಳು, ರೂಫ್, ಗ್ರಿಲ್ ಗಳು ಮತ್ತು ಕಾರಿನ ಹೊರಗೆ ಎಳೆದಿರುವ ಗೆರೆಗಳು ಕಾರಿಗೆ ಹೊಸ ಲುಕ್ ನೀಡಿವೆ.
ಇಂಟಿರಿಯರ್: ಇಂಟಿರಿಯರ್ ಗೆ ಇಣುಕಿದಾಗ ಒಂದಿಷ್ಟು ಇಷ್ಟವಾಗುವ ವಿಷ್ಯಗಳು ಗಮನ ಸೆಳೆಯುತ್ತವೆ. ಸ್ಪೋರ್ಟಿ ಮತ್ತು ಆರಾಮದಾಯಕತೆ ನೀಡುವ ಡ್ಯೂಯಲ್ ಟೋನ್ ವಿನ್ಯಾಸ ಇಷ್ಟವಾಗುತ್ತದೆ. ಇಟಿಯೋಸ್ ಮತ್ತು ಇಟಿಯೋಸ್ ಲಿವಾ ಡೀಸೆಲ್ ಆವೃತ್ತಿಗಳು ಸಾಕಷ್ಟು ಕ್ಯಾಬಿನ್ ಸ್ಥಳಾವಕಾಶ, ವಿಸ್ತಾರವಾದ ಬೂಟ್ ಸ್ಥಳಾವಕಾಶ ಹೊಂದಿದೆ. ಬಾಟಲ್ ಹೋಲ್ಡರ್, ಮೊಬೈಲ್ ಹೋಲ್ಡರ್ ಇತ್ಯಾದಿ ಸಾಕಷ್ಟು ಸಾಮಾನ್ಯ ಅಗತ್ಯದ ಫೀಚರುಗಳಿವೆ.
ಸುರಕ್ಷತೆ: ನೂತನ ಡೀಸೆಲ್ ಆವೃತ್ತಿಗಳಲ್ಲಿ ಸಾಕಷ್ಟು ಸುರಕ್ಷತೆಯ ಫೀಚರುಗಳಿವೆ. ಅಂದ್ರೆ ಚಾಲಕ ಮತ್ತು ಪ್ರಯಾಣಿಕನಿಗೆ ಏರ್ ಬ್ಯಾಗ್, ಸೀಟ್ ಬೆಲ್ಟ್, ಎಬಿಎಸ್ ಮತ್ತು ಇಬಿಡಿ ಇವೆ. ಒಟ್ಟಾರೆ ನೂತನ ಎಟಿಯೋಸ್ ಮತ್ತು ಲಿವಾದ ಡೀಸೆಲ್ ಆವೃತ್ತಿಗಳು ಗ್ರಾಹಕರ ನಿರೀಕ್ಷೆಗೆ ಮೋಸ ಮಾಡುವುದಿಲ್ಲ.


Click it and Unblock the Notifications