ಟಾಟಾ ಮೋಟರ್ಸ್ ಜಾಗತಿಕ ಸಿಇಒ ರಾಜಿನಾಮೆ

ಕಂಪನಿಯ ಕೋರಿಕೆ ಮೇರೆಗೆ ಪೀಟರ್ ನಾನ್ ಎಕ್ಸ್ ಕ್ಯೂಟಿವ್ ಸದಸ್ಯರಾಗಿ ಮುಂದುವರೆಯಲಿದ್ದಾರೆ. ಸದ್ಯ ತೆರವಾದ ಸ್ಥಾನವನ್ನು ಭಾರತ ವಹಿವಾಟು ವಿಭಾಗದ ಎಂಡಿ ಪ್ರಕಾಶ್ ತೆಲಂಗ್ ಮತ್ತು ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಸಿಇಒ ರಾಫ್ ಸ್ಪೆತ್ ನೋಡಿಕೊಳ್ಳಲಿದ್ದಾರೆ.
"ವೈಯಕ್ತಿಕ ಕಾರಣಗಳಿಂದ ರಾಜಿನಾಮೆ ನೀಡುವ ಕಾರ್ಲ್ ಪೀಟರ್ ನಿರ್ಧಾರವನ್ನು ಕಂಪನಿ ಗೌರವಿಸುತ್ತದೆ. ಸಿಇಒ ಮತ್ತು ಎಂಡಿಯಾಗಿ ಕಂಪನಿಯ ಅಭಿವೃದ್ಧಿಗೆ ಸಹಕರಿಸಿದ ಅವರಿಗೆ ಧನ್ಯವಾದಗಳು" ಎಂದು ಟಾಟಾ ಮೋಟರ್ಸ್ ಆಡಳಿತ ಮಂಡಳಿಯ ಚೇರ್ಮನ್ ರತನ್ ಟಾಟಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ವೈಯಕ್ತಿಕ ಕಾರಣಗಳಿಂದ ಟಾಟಾ ಮೋಟರ್ಸ್ ಸಿಇಒ ಮತ್ತು ಎಂಡಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ಹುದ್ದೆಯಲ್ಲಿ ಇರದಿದ್ದರೂ ಟಾಟಾ ಮೋಟರ್ಸ್ ಗೆ ನನ್ನ ಸಹಕಾರವನ್ನು ಮುಂದುವರೆಸುತ್ತೇನೆ" ಎಂದು ಕಾರ್ಲ್ ಪೀಟರ್ ಹೇಳಿದ್ದಾರೆ.


Click it and Unblock the Notifications








