ವಿಮ್ಯಾಕ್ಸ್ ಬೈಕ್ ನನ್ನ ಮಗುವಿನಂತೆ: ಜಾನ್ ಅಬ್ರಹಾಂ

"ವಿಮ್ಯಾಕ್ಸ್ ನನ್ನ ಮಗುವಿನಂತೆ" ಹಾಗಂತ ಮೊನ್ನೆ ಜಾನ್ ಅಬ್ರಹಾಂ ಸಂಕೋಚವಿಲ್ಲದೇ ಹೇಳಿಬಿಟ್ಟರು. ವಿಮ್ಯಾಕ್ಸ್ ಇದ್ಯಾರು ಅಂತ ಕೇಳದಿರಿ. ವಿಮ್ಯಾಕ್ಸ್ ಅಂದ್ರೆ ವಿಮ್ಯಾಕ್ಸ್. ವಿಮ್ಯಾಕ್ಸ್ ಅಂದ್ರೆ ಯಮಹಾ ಕಂಪನಿಯ ಸೂಪರ್ ಬೈಕ್.
ಕೂಲ್ ಆಂಡ್ ಸೆಕ್ಸಿ ಖ್ಯಾತಿಯ ಜಾನ್ ಅಬ್ರಹಾಂಗೆ ಬೈಕೆಂದರೆ ಇಷ್ಟ. ಮೊನ್ನೆ ಉಭಯಕುಶೋಲಪರಿ ಎಂಬಂತೆ ತನ್ನ ಬೈಕ್ ಕ್ರೇಜ್ ಕುರಿತು ಒಂದಿಷ್ಟು ಸಂಗತಿಗಳನ್ನು ಬಿಚ್ಚಿಟ್ಟರು. ಅದರಲ್ಲಿ ಹೆಚ್ಚಿನ ವಿಷ್ಯ ಎಲ್ಲರಿಗೂ ಗೊತ್ತಿರವುದೇ.. ಆದರೆ ಕೆಲವು ವಿಷಯಗಳು ಗೊತ್ತಿರಲಿಲ್ಲ.
ಜಾನ್ ಅಬ್ರಹಾಂ ಹೆಚ್ಚು ಇಷ್ಟಪಡುವ ಎರಡು ಬೈಕ್ ಯಮಹಾ ಆರ್1 1000 ಸಿಸಿ ಮತ್ತು ವಿಮ್ಯಾಕ್ಸ್ 1700ಸಿಸಿ ಬೈಕ್. ಅದರ ಹೆಮ್ಮೆಯ ಮಾಲಿಕನಾದ ಆತನಿಗೆ ಅದರಲ್ಲಿ ರಾತ್ರಿ ಸವಾರಿ ಮಾಡುವ ಹುಚ್ಚು. ಈಗ ಮಾಜಿ ಪ್ರಿಯತಮೆ ಬಿಪಾಶಾ ಬೈಕ್ ಹಿಂದುಗಡೆ ಕೂರೋದಿಲ್ಲ ಅನ್ನೋ ತುಸು ಕೊರಗು ಅವನಿಗೆ ಇರುವುದಾಗಿ ಜಾನ್ ಆಪ್ತರು ಹೇಳುತ್ತಾರೆ.
ಜಾನ್ ಅಬ್ರಹಾಂ ಮುಂಬೈನ ಬಾಂದ್ರಾ ರಸ್ತೆಯಲ್ಲಿ ಮಧ್ಯರಾತ್ರಿ ವೇಗವಾಗಿ ಸವಾರಿ ಮಾಡುತ್ತಾರಂತೆ. ಆತನಿಂದ ಗೊತ್ತಾದ ಹೊಸ ಸಂಗತಿ ಏನಂದ್ರೆ ಆತ ಯಮಹಾ ಆರ್1 ಸದ್ದನ್ನು ರೆಕಾರ್ಡ್ ಮಾಡಿಕೊಂಡು ಮೊಬೈಲ್ ರಿಂಗ್ ಟೋನ್ ಆಗಿ ಸ್ಟೋರ್ ಮಾಡಿಕೊಂಡಿದ್ದಾರೆ.
ವಿಮ್ಯಾಕ್ ಕುರಿತು ಜಾನ್ ಅಬ್ರಹಾಂ ಮೊನ್ನೆ ಒಂದಿಷ್ಟು ವಿಷಯ ತಿಳಿಸಿದ್ದಾರೆ. ಮೆಕಾನಿಸಂ ತಿಳಿದಿರುವ ವೃತ್ತಿಪರ ಬೈಕರ್ ನಾನೆಂದು ಆತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. "ಯಾರಾದರೂ ಒಮ್ಮೆ ವಿಮ್ಯಾಕ್ಸ್ ಬೈಕ್ ರೈಡ್ ಮಾಡಿನೋಡಿ. ಖಂಡಿತಾ ಅವರಿಗೆ ಈ ಬೈಕ್ ಖರೀದಿಸಬೇಕೆಂದು ಅನಿಸದಿದ್ದರೆ ಹೇಳಿ" ಅನ್ನೋದು ಜಾನ್ ಮಾತು.
ನನಗೆ ಇದು ಕೇವಲ ಬೈಕಲ್ಲ. ನನಗಿದು ಮಗು ಅಂತ ಅವರು ಹೇಳುತ್ತಾರೆ. "ಇದು ದೇಶದಲ್ಲಿರುವ ಪವರ್ ಫುಲ್ ಬೈಕ್. ನಿಜ ಹೇಳಬೇಕೆಂದರೆ ಇದು ವಿಶ್ವದಲ್ಲಿಯೇ ಶಕ್ತಿಶಾಲಿ ಬೈಕ್. ಯಾಕೆಂದರೆ ಇದು ನನ್ನಲ್ಲಿದೆ" ಎಂದು ಹೇಳಿ ನಗುತ್ತಾರೆ. ಅದಕ್ಕೆ ಹೇಳೋದು ಜಾನ್ ಅಂದ್ರೆ ಭಾರತದ ಆಕರ್ಷಕ ಬ್ಯಾಚುಲರ್ ಅಂತ?!


Click it and Unblock the Notifications








