ಆಸ್ಟನ್ ಮಾರ್ಟಿನ್ ಡಿಬಿಎಸ್ ಕಾರ್ಬನ್ ಅಡಿಶನ್ ರಸ್ತೆಗೆ

ಪ್ರತಿ ಡಿಬಿಎಸ್ ಕಾರುಗಳು ಆಸ್ಟನ್ ಮಾರ್ಟಿನ್ ಕಂಪನಿಯ ಏಕೀಕೃತ ಪೇಂಟಿಂಗ್ ಶ್ರೇಣಿಯನ್ನು ಹೊಂದಿವೆ ಎಂದು ಬ್ರಿಟನಿನ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ನೂತನ ಡಿಬಿಎಸ್ ಕಾರ್ಬನ್ ಅಡಿಶನ್ ಕಾರು 6 ಲೀಟರಿನ ವಿ12 ಎಂಜಿನ್ ಹೊಂದಿದ್ದು, 517 ಹಾರ್ಸ್ ಪವರ್ ನೀಡುತ್ತದೆ.
ಡಿಬಿಎಸ್ ಅನ್ನೋದು ಆಸ್ಟನ್ ಮಾರ್ಟಿನ್ ಕಂಪನಿಯ ಜನಪ್ರಿಯ, ಶಕ್ತಿಶಾಲಿ ಸ್ಪೋರ್ಟ್ಸ್ ಕಾರಾಗಿದೆ. ಆದರೆ ಕಾರ್ಬನ್ ಅಡಿಶನ್ ನಲ್ಲಿ ಒಂದಿಷ್ಟು ಪೇಂಟಿಂಗ್ ಬದಲಾವಣೆ ಹೊರತುಪಡಿಸಿದರೆ ಹೊಸತೇನು ನಿರೀಕ್ಷೆ ಮಾಡುವಂತ್ತಿಲ್ಲ.
ನೂತನ ಆಸ್ಟನ್ ಮಾರ್ಟಿನ್ ಕಾರ್ಬನ್ ಅಡಿಶನ್ ಕೂಪ್ ದರ ಸುಮಾರು 1.4 ಕೋಟಿ ರು. ಮತ್ತು ಕನ್ವರ್ಟಿಬಲ್ ದರ ಸುಮಾರು 1.46 ಕೋಟಿ ರು. ಆಗಿರಲಿದೆ.


Click it and Unblock the Notifications








