ಮೇಡ್ ಇನ್ ಇಂಡಿಯಾ- ರೆನಾಲ್ಟ್ ಡಸ್ಟರ್

"ಡಸ್ಟರಿಗೆ ಭಾರತ ಪ್ರಮುಖ ತಯಾರಿಕಾ ಹಬ್ ಆಗಲಿದೆ. ಇದರೊಂದಿಗೆ ಇಂಗ್ಲೆಂಡಿನಲ್ಲೂ ಕಂಪನಿ ಡಸ್ಟರ್ ಉತ್ಪಾದಿಸಲಿದೆ" ಎಂದು ಕಂಪನಿಯ ಪ್ರಮುಖ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾರತದಿಂದ ಯಾವುದೇ ಎಸ್ ಯುವಿ ವಿದೇಶಕ್ಕೆ ರಫ್ತಾಗುತ್ತಿಲ್ಲ. ನೂತನ ಡಸ್ಟರ್ ಭಾರತದಿಂದ ರಫ್ತಾಗುವ ಮೊದಲ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಆಗಲಿದೆ.
ದೇಶದಿಂದ ಕೆಲವು ಹ್ಯಾಚ್ ಬ್ಯಾಕ್ ಕಾರುಗಳು ರಫ್ತಾಗುತ್ತಿವೆ. ಅಂದರೆ ಹ್ಯುಂಡೈ ಐ10, ಐ20, ಮಾರುತಿ ಎ-ಸ್ಟಾರ್, ಫೋರ್ಡ್ ಫಿಗೊ ಮತ್ತು ನಿಸ್ಸಾನ್ ಮೈಕ್ರಾ ಭಾರತದಿಂದ ಹಲವು ರಾಷ್ಟ್ರಗಳಿಗೆ ರಫ್ತಾಗುತ್ತಿವೆ.
ನೂತನ ಡಸ್ಟರ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ದರ ಭಾರತದಲ್ಲಿ ಸುಮಾರು 8 ಲಕ್ಷ ರು.ನಿಂದ 10 ಲಕ್ಷ ರು.ವರೆಗಿರುವ ನಿರೀಕ್ಷೆಯಿದೆ. ಇದು ಮಹೀಂದ್ರ ಸ್ಕಾರ್ಪಿಯೊಗೆ ನೇರ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ. ಕಂಪನಿಯು ಸಂಪೂರ್ಣವಾಗಿ ಭಾರತದಲ್ಲೇ ಡಸ್ಟರ್ ಉತ್ಪಾದನೆ ಕೈಗೊಂಡರೆ ಕಾರಿನ ದರ ಇನ್ನಷ್ಟು ತಗ್ಗುವ ನಿರೀಕ್ಷೆಯನ್ನು ರೆನಾಲ್ಟ್ ವ್ಯಕ್ತಪಡಿಸಿದೆ.


Click it and Unblock the Notifications








