ಮಾರುತಿ ಘಟಕದಲ್ಲಿ ದಾಂಧಲೆ, 11 ಜನರಿಗೆ ಗಾಯ

ಬುಧವಾರ ಮಾನೆಸರ್ ಘಟಕದಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಐದು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿದ ಕ್ರಮ ವಿರೋಧಿಸಿ ಸುಮಾರು 2 ಸಾವಿರಕ್ಕೂ ಹೆಚ್ಚು ನೌಕರರು ಘಟಕದ ಹೊರಗಡೆ ಪ್ರತಿಭಟನೆ ನಿರತರಾಗಿದ್ದರು.
ಇಲ್ಲಿವರೆಗೆ ಖಾಯಂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿ ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ವಿರುದ್ಧ ಮಾರುತಿ ನೌಕರರು ಗಲಭೆ ಆರಂಭಿಸಿದ್ದಾರೆ.
ವರದಿಯೊಂದರ ಪ್ರಕಾರ ಈ ಗಲಭೆಯಲ್ಲಿ 11 ಸುಪರ್ ವೈಸರ್ ಗಳಿಗೆ ಪ್ರತಿಭಟನೆ ನಿರತ ಸಿಬ್ಬಂದಿಗಳು ಹೊಡೆದಿದ್ದಾರೆ. ಇವರಲ್ಲಿ 3 ಸುಪರ್ ವೈಸರ್ ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಟೆಕ್ನಿಷಿಯನ್ ನ್ನು ಗುರ್ ಗಾಂವ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ಹತ್ತು ದಿನಗಳಲ್ಲಿ ಮಾನೆಸರ್ ಘಟಕದಲ್ಲಿ ಕಾರ್ಮಿಕರ ಸಮಸ್ಯೆಗಳಿಂದ ಕೇವಲ 1,515 ಸ್ವಿಫ್ಟ್ ಕಾರುಗಳನ್ನು ಉತ್ಪಾದಿಸಲಾಗಿದೆ. ಇಷ್ಟು ದಿನದಲ್ಲಿ ಸುಮಾರು 7,192 ಕಾರುಗಳನ್ನು ಉತ್ಪಾದಿಸಬೇಕಿತ್ತು. ಒಂದು ವರದಿಯ ಪ್ರಕಾರ ನೂತನ ಸ್ವಿಫ್ಟ್ ವೇಟಿಂಗ್ ಅವಧಿ ಈಗಾಗಲೇ 8 ತಿಂಗಳು ದಾಟಿದೆ ಎಂದು ಹೇಳಲಾಗುತ್ತಿದೆ.
ಮಾನೆಸರ್ ಘಟಕದಲ್ಲಿ ಮಾರುತಿ ಸುಜುಕಿ ಹೊಸ ಖಾಯಂ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ಕಂಪನಿಯು ಮಾನೆಸರ್ ಘಟಕಕ್ಕೆ ಐಟಿಐ ತರಬೇತಿ ಪಡೆದ 50 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದೆ.
ಕಂಪನಿಯು ಇತ್ತೀಚೆಗೆ ನೌಕರರಿಗೆ ಉತ್ತಮ ನಡತೆ ಬಂಧ ಅಗ್ರಿಮೆಂಟಿಗೆ ಸಹಿಹಾಕುವಂತೆ ನೌಕರರಿಗೆ ಸೂಚಿಸಿತ್ತು. ಇದಕ್ಕೆ ಸಹಿ ಹಾಕದವರನ್ನು ಕಂಪನಿಯು ಘಟಕ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಸಹಿಹಾಕದ ಸಿಬ್ಬಂದಿ ಸ್ಥಾನಕ್ಕೆ ಹೊಸ ಪರಿಣಿತರನ್ನು ಕಂಪನಿ ನೇಮಕ ಮಾಡಿಕೊಳ್ಳುತ್ತಿದೆ.
ಉತ್ತಮ ನಡತೆ ಬಂಧಕ್ಕೆ 1,800ಸಿಬ್ಬಂದಿಗಳಲ್ಲಿ ಕೇವಲ 95 ನೌಕರರು ಮಾತ್ರ ಸಹಿಹಾಕಿದ್ದರು. ಇದರಲ್ಲಿ ಕೆಲವು ಉದ್ಯೋಗಿಗಳನ್ನು ಈಗಾಗಲೇ ಕೆಲಸದಿಂದ ವಜಾ ಮಾಡಲಾಗಿದೆ. ಕಂಪನಿಯ ಈ ನಿರ್ಧಾರ ವಿರುದ್ಧ ಮಾರುತಿ ನೌಕರರು ಗಲಭೆ ಆರಂಭಿಸಿದ್ದಾರೆ.
ಮಾನೆಸರ್ ಘಟಕದಲ್ಲಿ ನಡೆಯುತ್ತಿರುವ ಮಾರುತಿ ನೌಕರರ ಮತ್ತು ಆಡಳಿತ ಮಂಡಳಿಯ ಕಲಹ ಕಂಡು ಈಗಾಗಲೇ ನೂತನ ಸ್ವಿಫ್ಟ್ ಬುಕ್ಕಿಂಗ್ ಮಾಡಿಕುಳಿತವರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.


Click it and Unblock the Notifications








