ಫ್ರಾಂಕ್ ಫರ್ಟ್: ಸುಜುಕಿಯಿಂದ ಸ್ವಿಫ್ಟ್ ಸ್ಪೋರ್ಟ್ಸ್ ಕಾರು

Suzuki Unveils Swift Sport
ಸುಜುಕಿ ಮೋಟರ್ಸ್, ಎರಡು ಡೋರಿನ ಸ್ವಿಫ್ಟ್ ಸ್ಪೋರ್ಟ್ ಕಾರನ್ನು ಫ್ರಾಂಕ್ ಫರ್ಟ್ ವಾಹನ ಪ್ರದರ್ಶನದಲ್ಲಿ ಅನಾವರಣಗೊಳಿಸಿದೆ. ಈ ಕಾರು ಮುಂದಿನ ವರ್ಷ ರಸ್ತೆಗಿಳಿಯುವ ನಿರೀಕ್ಷೆಯಿದೆ. ಆದರೆ ಈ ಸ್ಪೋರ್ಟ್ಸ್ ಸ್ವಿಫ್ಟ್ ಕಾರು ಯುರೋಪ್ ಮತ್ತು ಜಪಾನ್ ಮಾರುಕಟ್ಟೆಗೆ ಮಾತ್ರ ಸೀಮಿತವಾಗುವ ವದಂತಿಗಳಿವೆ.

ಹೊಸ ಸ್ಪೋರ್ಟ್ ಸ್ವಿಫ್ಟ್ ಕಾರಿನಲ್ಲು ಹಲವು ಆಕರ್ಷಕ ಫೀಚರುಗಳು ಅಡಕವಾಗಿವೆ. ಫಾಗ್ ಲ್ಯಾಂಪ್, ಮೆಟಾಲಿಕ್ ಗ್ರೇಕೋಟಿಂಗ್, 17 ಇಂಚಿನ ಹಗುರ ಚಕ್ರಗಳು ಹೀಗೆ ಹೊಸ ಸ್ವಿಫ್ಟ್ ನಲ್ಲಿ ಮೊದಲ ನೋಟಕ್ಕೆ ಹಲವು ವಿಶೇಷತೆಗಳು ಸೆಳೆಯುತ್ತವೆ.

ಈ ಸ್ವಿಫ್ಟ್ ಕಾರಿಗೆ ಸ್ಪೋರ್ಟ್ಸ್ ಸೀಟ್ ಅಳವಡಿಸಲಾಗಿದೆ. ಇದರ ಎಂಜಿನ್ ಸುಮಾರು 134 ಹಾರ್ಸ್ ಪವರ್ ನೀಡಲಿದೆ. ಇದು 6 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಇದು ಹಗುರ ಮತ್ತು ಆರಾಮದಾಯಕತೆಯ ಫೀಚರಿನ ಗೇರಾಗಿದೆ. ಈ ಕಾರಿನಲ್ಲಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಟ್ರಾಕ್ಷನ್ ಕಂಟ್ರೊಲ್ ಮತ್ತು ಇಬಿಡಿ ಇತ್ಯಾದಿ ಸುರಕ್ಷತೆಯ ಫೀಚರುಗಳಿವೆ.

ಸುಜುಕಿ ಮೋಟರ್ ಪ್ರಕಾರ ನೂತನ ಸ್ವಿಫ್ಟ್ ಅತ್ಯುತ್ತಮ ಇಂಧನ ದಕ್ಷತೆಯ ಸ್ಪೋರ್ಟ್ಸ್ ಕಾರು ಕೂಡ ಹೌದು. ಇದು ಪ್ರತಿಲೀಟರ್ ಪೆಟ್ರೊಲ್ ಗೆ ಸುಮಾರು 18.75 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಈ ಕಾರಿನ ಫೀಚರುಗಳು, ವಿಶೇಷತೆಗಳು, ಟೆಕ್ ಮಾಹಿತಿ, ದಕ್ಷತೆ, ಕಾರ್ಯಕ್ಷಮತೆ ಕುರಿತು ನಮ್ಮ ಯಾವುದೇ ತಕರಾರು ಇಲ್ಲ. ಯಾಕೆಂದರೆ ಎಲ್ಲವೂ ಇಷ್ಟವಾಗುವಂತೆ ಇದೆ. ಆದರೆ, ನಮ್ಮ ಒಂದೇ ದೂರು ಏನೆಂದರೆ ಈ ಕಾರು ಭಾರತಕ್ಕೆ ಬರುವ ಕುರಿತು ಯಾವುದೇ ಮಾಹಿತಿ ಕಂಪನಿ ನೀಡಿಲ್ಲ.

More from DriveSpark

Article Published On: Thursday, September 15, 2011, 11:15 [IST]
English summary
Suzuki Motors has unveiled the two door Swift Sport at the Frankfurt Motor Show. The new variant of the Swift is a sportier version of India's favourite hatchback. Further fuel economy has also improved to 44.1 mpg (18.75kmpl) from the previous 39.8mpg (16.9kmpl). Our complaint about the Swift Sport is only one – Suzuki has not yet revealed if it will be launched here in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+