ಫ್ರಾಂಕ್ ಫರ್ಟ್: ಮಸೆರಿಟಿ ಹೊಸ ಕಾರು "ದಿ ಕುಬಾಂಗ್"

ಮಾಮೂಲಿ ಕಾರು ತಯಾರಿಕಾ ಕಂಪನಿಗಳು ಕೊಂಚ ಹೆಚ್ಚು ಪರಿಶ್ರಮ ಪಟ್ಟು ಸ್ಪೋರ್ಟ್ ಕಾರನ್ನು ಹೊರತರುತ್ತಿವೆ. ಆದರೆ ಸ್ಪೋರ್ಟ್ಸ್ ಕಾರು ಲೋಕದ ರಾಕ್ಷಸ ಕಂಪನಿ ಮಸೆರೆಟಿಯ ಈ ಕಾರು ಸಾದಾಸೀದಾ ಎನ್ನಲಾಗಿದೆ. ಇದು ವಿಶೇಷ ಎಸ್ ಯುವಿ ಕಾರು ಎಂದು ಕಂಪನಿ ಪ್ರಕಟಿಸಿದೆ. ದುರಾದೃಷ್ಟವಶಾತ್ ಕಂಪನಿ ಈ ಕಾರಿನ ಫೀಚರ್ಸ್, ವಿಶೇಷತೆಗಳನ್ನು ನೀಡಿಲ್ಲ.
ಸೌಂದರ್ಯ, ಸಸ್ಪೆನ್ಷನ್, ಬ್ರೇಕ್, ಸ್ಟೇರಿಂಗ್, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎಲ್ಲವನ್ನೂ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಹೀಗಾಗಿ ಇದು ಸ್ಪೋರ್ಟ್ಸ್ ಯುಟಿಲಿಟಿ ವಾಹನವಾದರೂ ಮಾಮೂಲಿ ಎಸ್ ಯುವಿಗಿಂತ ಸಾಕಷ್ಟು ಭಿನ್ನವಾಗಿದೆ ಎಂದು ಕಂಪನಿ ಪ್ರತಿಪಾದಿಸಿದೆ.


Click it and Unblock the Notifications








