ಫೋಕ್ಸ್ ವ್ಯಾಗನ್ ಸಿಂಗಲ್ ಸೀಟಿನ ನಿಲ್ಸ್ ಸಣ್ಣಕಾರು

ವಾಹನ ಲೋಕದ ವಿಶೇಷ ಅನ್ವೇಷಣೆಗಳಿಗೆ, ಬೆರಗುಗಳಿಗೆ ಸದ್ಯ ಫ್ರಾಂಕ್ ಫರ್ಟ್ ನಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನ ವೇದಿಕೆಯಾಗುತ್ತಿದೆ. ಅಲ್ಲೊಂದು ಕಂಡ ಆಕರ್ಷಕ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಕಂಡು ಇಷ್ಟೇಲ್ಲ ಪೀಠಿಕೆ ಬರೆಯಬೇಕಾಯಿತು. ವಾಹನ ಪ್ರದರ್ಶನದಲ್ಲಿ ಫೋಕ್ಸ್ ವ್ಯಾಗನ್ ಪರಿಚಯಿಸಿದ ಸಿಂಗಲ್ ಸೀಟಿನ ನಿಲ್ಸ್ ಅನ್ನೋ ಕಾರಿನಲ್ಲಿ ಸಾಕಷ್ಟು ಅಚ್ಚರಿಯ ವಿಷಯಗಳಿವೆ.
ಫಾರ್ಮುಲಾ ಒನ್ ಕಾನ್ಸೆಪ್ಟ್ ಇಟ್ಟುಕೊಂಡು ಫೋಕ್ಸ್ ವ್ಯಾಗನ್ ನಿಲ್ಸ್ ಎಲೆಕ್ಟ್ರಿಕ್ ಕಾರನ್ನು ರೂಪಿಸಲಾಗಿದೆ. ಇದು 5.3 ಕಿಲೋ ವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಈ ಪುಟ್ಟ ನಿಲ್ಸ್ ಕಾರು ಸುಮಾರು 65 ಕಿ.ಮೀ. ಫುಲ್ ಚಾರ್ಜ್ ನಲ್ಲಿ ಹೋಗಬಹುದು. ಇದರಲ್ಲಿ ಗರಿಷ್ಠ 130 ಕಿ.ಮೀ. ವೇಗದಲ್ಲಿ ಸಾಗಬಹುದು. ಥೇಟ್ ರಸ್ತೆಯನ್ನೇ ಆಕಾಶವೆಂದುಕೊಂಡು ಈ ನಿಲ್ಸ್ ಹಕ್ಕಿ ರಸ್ತೆಯಲ್ಲಿ ಸಾಗಲಿದೆ.
ಇದು ಒಂದು ಸೀಟಿನ ಕಾರಾಗಿದ್ದು ಇದರಲ್ಲಿ ಸಾಕಷ್ಟು ಸ್ಥಳಾವಕಾಶ ಹುಡುಕುವಂತ್ತಿಲ್ಲ. ಇದರಲ್ಲಿ ಹೆಚ್ಚೆಂದರೆ ಅಥವಾ ಕಡಿಮೆಯೆಂದರೆ ಕೇವಲ ಒಬ್ಬ ವ್ಯಕ್ತಿ ಮಾತ್ರ ಪ್ರಯಾಣಿಸಬಹುದಾಗಿದೆ. ಇದು ಸಿಟಿ ಸವಾರಿಗೆ ಸೂಕ್ತವಾದ ಕಾರು. ಮತ್ತೊಂದು ಖುಷಿಯ ವಿಷಯವೆಂದರೆ ಈ ಕಾರಿನ ಬ್ಯಾಟರಿ ಕೇವಲ 2 ಗಂಟೆಯಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತಂತೆ.
ಈ ಪುಟ್ಟ ಸಿಂಗಲ್ ಸೀಟಿನ ಕಾರಿನ ತೂಕ ಕಡಿಮೆ ಮಾಡಲು ಕಂಪನಿಯು ಅಲ್ಯುಮಿನಿಯಂ ಮತ್ತು ಇತರ ಹಗುರ ಸಾಮಾಗ್ರಿಗಳನ್ನು ಬಳಸಿದೆ. ಇಷ್ಟು ಪುಟ್ಟ ಕಾರಿನಲ್ಲಿ ಸಾಕಷ್ಟು ಸುರಕ್ಷತೆಯ ಫೀಚರುಗಳೂ ಇವೆ. ನೆನಪಿಡಿ ಇದರಲ್ಲಿ ನೀವು ಒಬ್ಬರು ಮಾತ್ರ ಸಾಗಬಹುದು. ಹಾಗಗಿ ಇದು ಸಿಂಗಲ್ ವ್ಯಕ್ತಿಗಳಿಗೆ ಸೂಕ್ತವಾದ ಕಾರು ಅಂದರೆ ತಪ್ಪಿಲ್ಲ. ನಮ್ಮೂರಿಗೆ ಈ ಕಾರು ಬರಲು ಕೆಲವು ವರ್ಷ ಬೇಕಾದಿತ್ತು. ಅಲ್ಲಿವರೆಗೆ ಕಾಯೋಣ.


Click it and Unblock the Notifications








