ಬಿಎಂಡಬ್ಲ್ಯು ಸೂಪರ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೈಕ್ ಮುಖ

ಫ್ರಾಂಕ್ ಫರ್ಟ್ ನಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಬಿಎಂಡಬ್ಲ್ಯು ಕಂಪನಿಯ ಸುಂದರವಾದ ಹೊಸ ಕಾನ್ಸೆಪ್ಟ್ ಸ್ಕೂಟರ್ ಎಲ್ಲರ ಗಮನಸೆಳೆಯಿತು. ಈ ಸ್ಕೂಟರ್ ಹೆಸರೇ "ಇಸ್ಕೂಟರ್" ಎಂದಾಗಿದೆ. ಈ ಇಸ್ಕೂಟರನ್ನು ವಿಶೇಷವಾಗಿ ರೂಪಿಸಲಾಗಿದೆ. ಇದರ ಮೂತಿ ಥೇಟ್ ಸೂಪರ್ ಬೈಕಿನಂತೆ ಇದೆ. ಇದು ಕಂಪನಿಯ ಪರಿಸರ ಸ್ನೇಹಿ ಸ್ಕೂಟರ್ ಆಗಲಿದೆ.
ಬಿಎಂಡಬ್ಲ್ಯು ಈಗಾಗಲೇ ಈ ಕಾನ್ಸೆಪ್ಟ್ ಸ್ಕೂಟರನ್ನು ಅಭಿವೃದ್ಧಿಪಡಿಸಲು ಆರಂಭಿಸಿದೆ. ಇಷ್ಟೇ ಅಲ್ಲ ಕಂಪನಿಯು 600ಸಿಸಿಯ ಪೆಟ್ರೊಲ್ ಚಾಲಿತ ಸ್ಕೂಟರ್ ಗಳನ್ನೂ ಕೂಡ ಅಭಿವೃದ್ಧಿಪಡಿಸುತ್ತಿದೆ. ಬಿಎಂಡಬ್ಲ್ಯು ಇಸ್ಕೂಟರ್ ಪ್ರತಿಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗುತ್ತದಂತೆ. ಜೊತೆಗೆ ಕೇವಲ ಮೂರು ಗಂಟೆಯಲ್ಲಿ ಪೂರ್ತಿ ಬ್ಯಾಟರಿ ಚಾರ್ಜ್ ಮಾಡಬಹುದೆಂದು ಕಂಪನಿ ಹೇಳಿದೆ.
ಈ ಇಸ್ಕೂಟರ್ ಇಷ್ಟವಾಯಿತೇ? ಮುಂದಿನ ಪುಟದಲ್ಲಿರುವ ಸಿಂಗಲ್ ಸೀಟಿನ ಅಚ್ಚರಿಯ ಕಾರನ್ನು ನೋಡಲು ಮರೆಯಬೇಡಿ.


Click it and Unblock the Notifications








