ಮಹೀಂದ್ರ ಸಿಂಗ್ ಧೋನಿ ಕಾರುಬೈಕ್ ಲೋಕ

Mahendra Singh Dhoni Hummer
ದೇಶದ ಕ್ರಿಕೆಟಿಗರಿಗೂ ಸಾಕಷ್ಟು ಕಾರು ಬೈಕು ಕ್ರೇಝಿದೆ. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕಾರು ಬೈಕು ಇಷ್ಟ. ರಾಂಚಿಯಲ್ಲಿರುವ ಅವರ ಮನೆಯ ಗ್ಯಾರೇಜಿನಲ್ಲಿ ಹಲವು ಆಕರ್ಷಕ ಬೈಕು ಮತ್ತು ಕಾರುಗಳಿವೆ.

ಜನಪ್ರಿಯರಿಗೆ ಖಾಸಗಿ ಸ್ವಾತಂತ್ರ್ಯ ಕಡಿಮೆ. ಧೋನಿಗೂ ಇದರ ಅರಿವಿದೆ. ಅವರಿಗೆ ನಮ್ಮಂತೆ ರಸ್ತೆಯಲ್ಲಿ ವಾಹನ ಚಾಲನೆ ಮಾಡಲಾಗುವುದಿಲ್ಲ. ಅವರ ಕಾರು ಬೈಕುಗಳನ್ನು ಅಭಿಮಾನಿಗಳು ತಕ್ಷಣ ಗುರುತಿಸುತ್ತಾರೆ. ಆದರೂ ಇವರನ್ನೆಲ್ಲ ಮ್ಯಾನೆಜ್ ಮಾಡಿಕೊಂಡು ಹೇಗಾದರೂ ಕಾರು ಅಥವಾ ಬೈಕ್ ಸವಾರಿ ಮಾಡಿಯೇ ತೀರುತ್ತಾರೆ ಧೋನಿ.

ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿರುವಾಗ ಜಾಸ್ತಿ ಬಳಸೋದು ಹರ್ಲಿ ಡೇವಿಡ್ ಸನ್. ಅವರಲ್ಲಿ ಯಮಹಾ ಎಕ್ಸ್ ಎಸ್ 650 ಮತ್ತು ಕವಾಸಕಿ ನಿಂಜಾ ಬೈಕುಗಳಿವೆ.

ಧೋನಿಯಲ್ಲಿ ದುಬಾರಿ ಹಮ್ಮರ್ ಎಚ್ 2 ಕೂಡ ಇದೆ. ಎಚ್ 2 ಕಾರಿಗೆ ಸುಮಾರು ಒಂದು ಕೋಟಿ ರುಪಾಯಿ ನೀಡಿ ಧೋನಿ 2009ರಲ್ಲಿ ಖರೀದಿಸಿದ್ದರು. ಹಮ್ಮರ್ ಅಂದ್ರೆ ಟ್ರಕ್ ನಂತಹ ಕಾರು. ಆರಂಭದಲ್ಲಿ ಈ ಬ್ರಾಂಡ್ ಹೊಂದಿದ್ದದ್ದು ಎಎಂ ಜನರಲ್ ಮೋಟರ್ಸ್. ನಂತರ ಇದನ್ನು ಡೆಟ್ರೈಟ್ ಮೂಲದ ಜನರಲ್ ಮೋಟರ್ಸ್ ಸ್ವಾಧೀನಪಡಿಸಿಕೊಂಡಿತ್ತು.

ಜನರಲ್ ಮೋಟರ್ಸ್ ಹಮ್ಮರ್ ಬ್ರಾಂಡಿನಲ್ಲಿ ಮೂರು ಆವೃತ್ತಿಗಳನ್ನು ಹೊರತಂದಿದೆ. ಅದರ ಹೆಸರು ಹಮ್ಮರ್ ಎಚ್3, ಹಮ್ಮರ್ ಎಚ್2 ಮತ್ತು ಹಮ್ಮರ್ ಎಚ್1.

ಧೋನಿ ಬಳಿಯಿರುವ ಇತರ ಕಾರುಗಳೆಂದರೆ ಮಹೀಂದ್ರ ಸ್ಕಾರ್ಪಿಯೊ, ಟೊಯೊಟಾ ಕೊರೊಲಾ ಮತ್ತು ಮಿಟ್ಸುಬಿಸಿ ಪಜೆರೊ. ಮಹೀಂದ್ರ ಗ್ರೂಪ್ ಸ್ಕಾರ್ಪಿಯೊ ಕಾರನ್ನು ಧೋನಿಗೆ ಉಡುಗೊರೆಯಾಗಿ ನೀಡಿತ್ತು.

More from DriveSpark

Article Published On: Tuesday, September 20, 2011, 15:51 [IST]
English summary
Indian cricket captain Mahendra Singh Dhoni is an avid bike lover. He owns several motorcycles and cars at his home town of Ranchi. Dhoni owns Harley Davidson, Yamaha XS650, a Kawasaki Ninja Bike. One of Dhoni's most priced possessions is a Hummer H2. The other cars owned by Dhoni are a custom built Mahindra Scorpio, a Toyota Corolla and a Mitsubishi Pajero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+