ದರ ಗೆಸ್ ಮಾಡಿ, ಕಾರು ನಿಮ್ಮದಾಗಿಸಿಕೊಳ್ಳಿ

ಮಹೀಂದ್ರ ಶೀಘ್ರದಲ್ಲಿ ಜಾಗತಿಕ ಸ್ಪೋರ್ಟ್ಸ್ ಕಾರು(SUV) ಹೊರತರಲಿದೆ. ಅದರ ಹೆಸರು ಮಹೀಂದ್ರ ಎಕ್ಸ್ ಯುವಿ500. ಅದಕ್ಕಾಗಿ ವಿಶೇಷ ವೆಬ್ ಸೈಟ್ ಕೂಡ ಆರಂಭಿಸಿದೆ. ಮಹೀಂದ್ರ ಎಕ್ಸ್ ಯುವಿ5500 ಎಂಬ ವೆಬ್ ಸೈಟಿ ಪ್ರವೇಶಿಸಿದವರು ಅಲ್ಲಿ ಟಾರ್ಪಲ್ ಹಾಕಿ ಮುಚ್ಚಿಟ್ಟ ಕಾರಿನ ದರ ಹೇಳಬೇಕು. ಅವರು ಹೇಳಿದ ದರ ನಿಖರವಾಗಿದ್ದಲ್ಲಿ ಆ ಸ್ಪೋರ್ಟ್ಸ್ ಕಾರನ್ನು ಗೆಲ್ಲಬಹುದಂತೆ.
ಮಹೀಂದ್ರ ಎಸ್ ಯುವಿ ಸೆಪ್ಟಂಬರ್ 28ಕ್ಕೆ ರಸ್ತೆಗಿಳಿಯಲಿದೆ. ನೀವು ಆ ಕಾರಿನ ದರ ಹೇಳಲು ಪ್ರಯತ್ನಿಸುವಿರಾದರೆ ಇಲ್ಲೊಂದಿಷ್ಟು ಮಾಹಿತಿ ಇವೆ. ಇದು ನಿಮಗೆ ಎಕ್ಸ್ ಯುವಿ 500 ಕಾರನ್ನು ಮನೆಗೆ ಕೊಂಡೊಯ್ಯಲು ನೆರವಾಗಬಹುದು. ಮಹೀಂದ್ರ ಹೇಳೋ ಪ್ರಕಾರ ಇದರ ದರ ಸ್ಕಾರ್ಪಿಯೊಗಿಂತ ಹೆಚ್ಚಿರಲಿದೆ. ಸ್ಕಾರ್ಪಿಯೊ ದರ 8.77 ಲಕ್ಷ ರು.ನಿಂದ 13.42 ಲಕ್ಷ ರು. ಇರಲಿದೆ.
ಹೆಚ್ಚಿನ ಕ್ಲೂ ನೀಡುವುದು ಕಷ್ಟ. ಇದರ ದರ 10 ಲಕ್ಷ ರು.ಗಿಂತ ಮೇಲಿರಲಿದೆ ಅನ್ನೋದು ಕೂಡ ಸ್ಪಷ್ಟ. 20 ಲಕ್ಷಕ್ಕಿಂತ ಹೆಚ್ಚಿರಲಿಕ್ಕಿಲ್ಲ. ಬೇಕಾದರೆ ನೀವು 10-15 ಲಕ್ಷದೊಳಗೆಯೇ ಅಂದಾಜು ದರ ಸೂಚಿಸಬಹುದು. ಇದು ಕಂಪನಿಯ ಗಿಮಿಕ್ ಅಂದುಕೊಂಡು ನೀವು ವಾಪಸ್ಸಾಗಬಹುದು. ಅಥವಾ ಕಾರಿನ ಆಸೆಯಿಂದ ದರ ಸೂಚಿಸಬಹುದು. ನಿಮಿಷ್ಟ.


Click it and Unblock the Notifications








