ನಿಸ್ಸಾನ್ ಸನ್ನಿ ಬಿಡುಗಡೆ ಕಾರ್ಯಕ್ರಮ ಇಲ್ಲಿ ನೋಡಿ

ನಿಸ್ಸಾನ್ ಸನ್ನಿ ಎಂಟ್ರಿ ಲೆವೆಲ್ ಸೆಡಾನ್ ಕಾರಾಗಿದೆ. ಇದನ್ನು ಚೆನ್ನೈನಲ್ಲಿ ಕಂಪನಿ ನಿರ್ಮಿಸಲಿದೆ. ಇದು ಮೈಕ್ರಾ ಹ್ಯಾಚ್ ಬ್ಯಾಕ್ ಫ್ಲಾಟ್ ಫಾರ್ಮ್ ನಲ್ಲೇ ಹೊರಬರಲಿದೆ. ಅದೇ ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ಸೆಟ್ಟಿಂಗ್ ಇರಲಿದೆ. ಸನ್ನಿ ದರ ಸುಮಾರು 7 ಲಕ್ಷ ರು. ಮತ್ತು 9 ಲಕ್ಷ ರು. ಇರಲಿದೆ.
ಸನ್ನಿ ಎಕ್ಸ್ ಟೀರಿಯರ್ ನೋಡಲು ಮೈಕ್ರಾದಂತೆಯೇ ಇದೆ. ಇದರ ಇಂಟಿರಿಯರ್ ಕೂಡ ಅದೇ ಹ್ಯಾಚ್ ಬ್ಯಾಕಿನಂತೆಯೇ ಇದೆ. ಅದರೆ ಕೊಂಚ ಬದಲಾವಣೆ ಮಾಡಲಾಗಿದೆ. ಸನ್ನಿ 1.5 ಲೀಟರಿನ ಎಂಜಿನ್ ಹೊಂದಿದ್ದು 99 ಹಾರ್ಸ್ ಪವರ್ ನೀಡಲಿದೆ. ಈ ಕಾರು ಇಂದು ಅಂದರೆ ಮಂಗಳವಾರ ಅಪರಾಹ್ಹ 3.30 ಗಂಟೆಗೆ ರಸ್ತೆಗಿಳಿಯಲಿದೆ.


Click it and Unblock the Notifications








