ಹಬ್ಬದ ಆಫರ್: ಪುಂಟೊ, ಲಿನಿಯಾ ಭಾರಿ ಡಿಸ್ಕೌಂಟ್

"ನಾವು ದೇಶದ ಗ್ರಾಹಕರಿಗೆ ಇಷ್ಟವಾಗುವಂತಹ ಡಿಸ್ಕೌಂಟ್ ಅಭಿಯಾನ ಆರಂಭಿಸಿದ್ದೇವೆ. ಮೌಲ್ಯ, ಭಾವನೆ ಇತ್ಯಾದಿ ಪ್ರಮುಖ ವಿಷಯಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಕಾಂಪೈನ್ ಹೊರತಂದಿದ್ದೇವೆ" ಎಂದು ಫಿಯೆಟ್ ಇಂಡಿಯಾ ಸಿಇಒ ರಾಜೀವ್ ಕಪೂರ್ ಹೇಳಿದ್ದಾರೆ.
ಹೊಸ ಆಫರಿನಲ್ಲಿ ಏನಿದೆ? ಗ್ರಾಹಕರು ಫಿಯೆಟ್ ಲಿನಿಯಾ ಕಾರಿಗೆ ಸುಮಾರು 1.3 ಲಕ್ಷ ರು. ವಿನಾಯಿತಿ ಪಡೆಯಲಿದ್ದಾರೆ. ಆದರೆ ಪುಂಟೊ ಕಾರಿಗೆ 70 ಸಾವಿರ ರು. ಡಿಸ್ಕೌಂಟ್ ಪಡೆಯಲಿದ್ದಾರೆ. ಈ ಆಫರ್ ಆಕ್ಟೋಬರ್ ಅಂತ್ಯದವರೆಗೆ ಇರಲಿದೆ ಎಂದು ಕಂಪನಿ ಹೇಳಿದೆ.
ಎಂಟ್ರಿ ಲೆವೆಲ್ ಲಿನಿಯಾ ಪೆಟ್ರೊಲ್ ಆವೃತ್ತಿ ದರ ಸುಮಾರು 6,51,684 ರು.ನಿಂದ ಆರಂಭವಾಗುತ್ತದೆ. ಫಿಯೆಟ್ ಪುಂಟೊ ಎಂಟ್ರಿ ಲೆವೆಲ್ ಕಾರು ದರ ಸುಮಾರು 4,31,558 ರು.ನಿಂದ ಆರಂಭವಾಗುತ್ತಿದೆ. ಇದರೊಂದಿಗೆ ಆಕರ್ಷಕ ದರಗಳಲ್ಲಿ ಹಳೆಯ ಫಿಯೆಟ್ ಕಾರುಗಳನ್ನು ವಿನಿಮಯ ಮಾಡಿಕೊಳ್ಳಬಹುದೆಂದು ಕಂಪನಿ ಹೇಳಿದೆ.


Click it and Unblock the Notifications