ಬೆಂಗಳೂರು ಮಹಿಳೆಯರಿಗೆ ನ್ಯಾನೊ ಅಚ್ಚುಮೆಚ್ಚು

ಇತ್ತೀಚೆಗೆ ಟಾಟಾ ಮೋಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ಈ ವಿಷ್ಯ ಬಹಿರಂಗಗೊಂಡಿದೆ. ನ್ಯಾನೊ ಕಾರು ಅತ್ಯಧಿಕ ಹೆಂಗಳೆಯರ ಪ್ರೀತಿಯ ಆಯ್ಕೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಭಾರತದಲ್ಲಿ ಟಾಟಾ ನ್ಯಾನೊ ಕಾರಿನ ಶೇಕಡ 10ರಷ್ಟು ಖರೀದಿದಾರರು ಮಹಿಳೆಯರಂತೆ. ಒಟ್ಟಾರೆ ಕಾರು ಖರೀದಿಯಲ್ಲಿ ದೇಶದಲ್ಲಿ ಮಹಿಳೆಯರ ಪಾಲಿರುವುದು ಕೇವಲ ಶೇಕಡ 2. ನ್ಯಾನೊ ಚಾಲನೆ ಸುಲಭವಾಗಿರುವುದರಿಂದ ಹೆಚ್ಚಿನ ಮಹಿಳೆಯರು ಪುಟ್ಟ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು ಮಹಿಳೆಯರಿಗೂ ಖುಷಿಯ ವಿಷಯವಿದೆ. ಬೆಂಗಳೂರಿನಲ್ಲಿ ಶೇಕಡ 20ರಷ್ಟು ನ್ಯಾನೊ ಖರೀದಿದಾರರು ಮಹಿಳೆಯರಂತೆ. ಅಂದ್ರೆ ಉದ್ಯಾನನಗರಿಯಲ್ಲಿ 5 ನ್ಯಾನೊ ಕಾರು ಚಾಲಕರಲ್ಲಿ ಒಬ್ಬರು ಮಹಿಳೆಯರಾಗಿರುತ್ತಾರೆ. ಇಲ್ಲಿನ ಸಂಚಾರ ದಟ್ಟಣೆ, ಇಲ್ಲಿ ಮಹಿಳೆಯರು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿರುವುದು ಪುಟ್ಟ ನ್ಯಾನೊ ಖರೀದಿ ಹೆಚ್ಚಳಕ್ಕೆ ಕಾರಣವಾಗಿದೆ.
ನ್ಯಾನೊ ದರ ಅಗ್ಗವಾಗಿರುವುದು ಕೂಡ ಹೆಚ್ಚಿನ ಮಹಿಳೆಯರನ್ನು ಆಕರ್ಷಿಸಿದೆ. ಹೆಚ್ಚಿನ ಮಹಿಳೆಯರು ಸ್ಕೂಟಿಯಿಂದ ನ್ಯಾನೊ ಕಾರಿಗೆ ಪ್ರಮೋಷನ್ ಹೊಂದಿದ್ದಾರೆ. ಇದು ನಗರದ ರಸ್ತೆಗೆ ಹೆಚ್ಚು ಸೂಕ್ತವೂ ಆಗಿದೆ. ಹೀಗಾಗಿ ಹೆಚ್ಚಿನ ಮಹಿಳೆಯರು ಪುಟ್ಟ ನ್ಯಾನೊ ಕಾರಿಗೆ ಹಾಯ್ ಎಂದಿದ್ದಾರೆ ಎಂದು ಟಾಟಾ ಅಧ್ಯಯನ ತಿಳಿಸಿದೆ.


Click it and Unblock the Notifications








