ಟಾಟಾ ಮೋಟರ್ಸ್ ಕಾರು ಉತ್ಪಾದನೆಗೆ ಗ್ರಹಣ

Tata Motors Cuts Production By 33% As Demand Drops
ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್, ಪ್ರಯಾಣಿಕ ಕಾರುಗಳ ಉತ್ಪಾದನೆ ಕಡಿಮೆ ಮಾಡಿದೆ. ಕಂಪನಿಯು ಪ್ರಸಕ್ತ ಸೆಪ್ಟಂಬರ್ ತಿಂಗಳಿನಿಂದಲೇ ಶೇಕಡ 33ರಷ್ಟು ಉತ್ಪಾದನೆ ತಗ್ಗಿಸಿದೆ. ಇದು ಹಬ್ಬದ ಸೀಸನ್ ಆಗಿದ್ದು, ಕಾರು ಮಾರಾಟ ಏರಿಕೆ ಕಾಣಬೇಕಿತ್ತು. ಆದರೆ ಪ್ರಸಕ್ತ ವರ್ಷ ಎಲ್ಲವೂ ಉಲ್ಟಾಪಲ್ಟಾ ಆಗಿದೆ.

ಕಂಪನಿಯು ಪೂರೈಕೆದಾರರಲ್ಲಿ ಕಡಿಮೆ ಬಿಡಿಭಾಗ ಪೂರೈಕೆ ಮಾಡುವಂತೆ ತಿಳಿಸಿದೆ. ಒಂದು ವರದಿಯ ಪ್ರಕಾರ ಟಾಟಾ ಮೋಟರ್ಸ್ ಸಣ್ಣ ಕಾರು ನ್ಯಾನೊ ಸೇರಿದಂತೆ ಹೆಚ್ಚಿನ ಪ್ರಯಾಣಿಕ ಕಾರುಗಳ ಉತ್ಪಾದನೆ ಕಡಿತಗೊಳಿಸಿದೆ. ಈ ತಿಂಗಳು ಕಂಪನಿ ಕೇವಲ 12 ಸಾವಿರ ಕಾರು ಉತ್ಪಾದಿಸಿದೆ ಎನ್ನಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ಸುಮಾರು 18 ಸಾವಿರ ಕಾರು ಉತ್ಪಾದಿಸಿತ್ತು.

ಕಾರು ಮಾರಾಟದಲ್ಲಿ ಗಮನಾರ್ಹ ಇಳಿಕೆ ಕಾಣುತ್ತಿದೆ ಎಂಬುದನ್ನು ಈ ಉತ್ಪಾದನೆ ಕಡಿತದಿಂದ ತಿಳಿದುಕೊಳ್ಳಬಹುದು. ಅತ್ಯಧಿಕ ಬಡ್ಡಿದರ ಮತ್ತು ಹೆಚ್ಚಿದ ಪೆಟ್ರೋಲ್ ದರ ಗ್ರಾಹಕರ ಭಾವನೆ ಮೇಲೆ ಪರಿಣಾಮ ಬೀರಿದ್ದು, ಕಾರು ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ. ಡಿಸ್ಕೌಂಟ್ ಮತ್ತು ವಿಶೇಷ ಆಫರುಗಳು ಈ ಸಂದರ್ಭದಲ್ಲಿ ಕೆಲಸ ಮಾಡುತ್ತಿಲ್ಲ. ಈ ಹಬ್ಬದ ಸೀಸನ್ ಕಾರು ಕಂಪನಿಗಳು ಮತ್ತು ಡೀಲರುಗಳಿಗೆ ಅತ್ಯಂತ ಕೆಟ್ಟದಿನಗಳು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

More from DriveSpark

Article Published On: Saturday, September 24, 2011, 12:23 [IST]
English summary
Tata Motors, India's leading vehicle manufacturer has decided to cut passenger car production by a massive 33 per cent in September. This is a shocking development considering this decision has been made bang in the middle of the festive season, one of the most lucrative periods for car sales in recent years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+