ಹೊಸ ಸ್ವಿಫ್ಟ್: ಬುಕ್ಕಿಂಗ್ ದಾಖಲೆ ನೋಡಿರೋ..

ನೌಕರರ ಪ್ರತಿಭಟನೆಯ ನಡುವೆಯು ಹೊಸ ಸ್ವಿಫ್ಟ್ ಬುಕ್ಕಿಂಗ್ ನಲ್ಲಿ ದಾಖಲೆ ಬರೆಯುತ್ತಿದೆ. ಮಾರುತಿ ಸುಜುಕಿ ಹೊಸ ಸ್ವಿಫ್ಟ್ ಬುಕ್ಕಿಂಗ್ ಇತ್ತೀಚೆಗೆ 1.08 ಲಕ್ಷ ಯೂನಿಟ್ ಗೆ ತಲುಪಿದೆ. ಶೀಘ್ರದಲ್ಲಿ ಪೂರೈಕೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಕಂಪನಿ ಹೇಳಿದೆ.
"ಹೊಸ ಸ್ವಿಫ್ಟ್ ಗೆ ಅತ್ಯಧಿಕ ಬೇಡಿಕೆಯಿದೆ. ಈ ತಿಂಗಳ ಆರಂಭದಲ್ಲಿ ಪೂರೈಕೆ ಕೊಂಚ ತೊಂದರೆಗೆ ಒಳಗಾಗಿತ್ತು. ಆದರೆ ಇದೀಗ ಸಹಜ ಸ್ಥಿತಿಗೆ ಮರಳಿದೆ" ಎಂದು ಕಂಪನಿಯ ವ್ಯವಸ್ಥಾಪಕ ಕಾರ್ಯನಿರ್ವಹಕರಾದ ಮಾಯಂಕ್ ಪಾರೇಕ್ ಹೇಳುತ್ತಾರೆ.
ಈ ಹಿಂದೆ ಮಾರುತಿ ಡೀಲರುಗಳು ಸ್ವಿಫ್ಟ್ ಬುಕ್ಕಿಂಗ್ ಸ್ಥಗಿತಗೊಳಿಸಿದರು. ಈ ಕುರಿತು ಸ್ಥಳೀಯ ಡೀಲರುಗಳನ್ನು ವಿಚಾರಿಸಿದಾಗ ಹಳೆಯ ಸ್ವಿಫ್ಟ್ ಖರೀದಿಸುವಂತೆ ಗ್ರಾಹಕರಿಗೆ ಸೂಚಿಸುತ್ತಿರುವುದಾಗಿ ತಿಳಿಸಿದ್ದರು. ಯಾಕೆಂದರೆ ಹೊಸ ಸ್ವಿಫ್ಟ್ ವೇಟಿಂಗ್ ಅವಧಿ 6-8 ತಿಂಗಳಿತ್ತು. ಆದರೆ ಇದೀಗ ವೇಟಿಂಗ್ ಅವಧಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಈಗ ಡೀಲರುಗಳು ನೂತನ ಸ್ವಿಫ್ಟ್ ಬುಕ್ಕಿಂಗ್ ತೆಗೆದುಕೊಳ್ಳುತ್ತಿದ್ದಾರೆ. ಸ್ವಿಫ್ಟ್ ವೇಟಿಂಗ್ ಪಿರೇಡ್ ಕೂಡ ಈಗ ಸಹಜ ಸ್ಥಿತಿಗೆ ಮರಳಿದೆ. ಅಂದರೆ ಡೀಸೆಲ್ ಎಂಜಿನ್ ಸ್ವಿಫ್ಟ್ ಮತ್ತು ಪೆಟ್ರೋಲ್ ಸ್ವಿಫ್ಟ್ ವೇಟಿಂಗ್ ಅವಧಿ ಕ್ರಮವಾಗಿ 6 ತಿಂಗಳು ಮತ್ತು 5 ತಿಂಗಳಾಗಿದೆ ಎಂದು ಕೆಲವು ವರದಿಗಳು ಹೇಳಿವೆ.


Click it and Unblock the Notifications








