ಫಿಯೆಟ್ ಸೆಡಿಸಿ: ಸ್ಪೋರ್ಟ್ಸ್ ಕಾರು ನಿರೀಕ್ಷಿಸಿ
ಇಟಲಿಯ ಕಾರು ತಯಾರಿಕ ಕಂಪನಿ ಫಿಯೆಟ್ ಭಾರತಕ್ಕೆ ಮೊದಲ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಹೊರತರಲು ಸಿದ್ಧತೆ ನಡೆಸುತ್ತಿದೆ. ಫಿಯೆಟ್ ಮತ್ತು ಸುಜುಕಿ ಜಂಟಿಯಾಗಿ ನಿರ್ಮಿಸಿದ "ಸೆಡಿಸಿ" ಅನ್ನೋ ಸ್ಪೋರ್ಟ್ಸ್ ಕಾರನ್ನು ಕಂಪನಿ ಹೊಂದಿದೆ. ಇದೇ ಕಾರು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಕಂಪನಿಯು ಸೆಡಿಸಿ ಕಾರನ್ನು ಹಂಗೇರಿ ಘಟಕದಲ್ಲಿ ಉತ್ಪಾದಿಸುತ್ತಿದೆ. ಭಾರತದ ರಸ್ತೆಗೆ ತಕ್ಕಂತೆ ಸೆಡಿಸಿ ಕಾರಿನಲ್ಲಿ ತುಸು ಬದಲಾವಣೆ ಮಾಡಿ ಹೊರತರುವ ನಿರೀಕ್ಷೆಯಿದೆ. ದೀಪಾವಳಿ ಸಮಯದಲ್ಲಿ ಈ ಕಾರು ರಸ್ತೆಗಿಳಿದರೆ ಪಟಾಕಿ ಸಿಡಿಸಿ ಫಿಯೆಟ್ ಪ್ರಿಯರು ಸಂಭ್ರಮಿಸಬಹುದು.
ಫಿಯೆಟ್ ಇಂಡಿಯಾದ ಎರಡು ಕಾರುಗಳು ಸದ್ಯ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ಫಿಯೆಟ್ ಪುಂಟೊ ಗ್ರಾಂಡೆ ಮತ್ತು ಲಿನಿಯಾ ಸೆಡಾನ್ ಕಾರಿಗೆ ಕಂಪನಿಯು ಇತ್ತೀಚೆಗೆ ಲಕ್ಷ ಲಕ್ಷ ರುಪಾಯಿ ಡಿಸ್ಕೌಂಟ್ ಕೂಡ ಪ್ರಕಟಿಸಿದೆ.
ಫಿಯೆಟ್ ಸೆಡಿಸಿ ಸ್ಪೋರ್ಟ್ಸ್ ಯುಟಿಲಿಟಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತಿದೆ. ಇದರ ದರ ಭಾರತದಲ್ಲಿ ಹತ್ತು ಲಕ್ಷ ರುಪಾಯಿಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಈ 5 ಸೀಟಿನ ಸೆಡಿಸಿ ಬಿಎಂಡಬ್ಲ್ಯು ಮತ್ತು ಆಡಿ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications









