ಜನರಲ್ ಮೋಟರ್ಸ್ ಪೆಟ್ರೊಲ್ ಕಾರು ಸ್ಥಗಿತ! ಮುಂದೇನು?

General Motors Stops Petrol Car Production
ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಜನರಲ್ ಮೋಟರ್ಸ್ ಪೆಟ್ರೋಲ್ ಕಾರು ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಕಂಪನಿಯು ಈಗ ಕೇವಲ ಡೀಸೆಲ್ ಕಾರುಗಳ ಉತ್ಪಾದನೆಗೆ ಒತ್ತು ನೀಡಲು ನಿರ್ಧರಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ಇಂಧನ ದರದಲ್ಲಿ ಬೃಹತ್ ವ್ಯತ್ಯಾಸವಿರುವುದರಿಂದ ಹೆಚ್ಚಿನ ಜನರು ಡೀಸೆಲ್ ಕಾರುಗಳನ್ನು ಖರೀದಿಸುತ್ತಿದ್ದಾರೆ. ಜನರಲ್ ಮೋಟರ್ಸ್ ಈಗಾಗಲೇ ಪೆಟ್ರೋಲ್ ಕಾರುಗಳ ಭಾರಿ ಸಂಗ್ರಹ ಹೊಂದಿದೆ. ಹೀಗಾಗಿ ಪೆಟ್ರೋಲ್ ಕಾರುಗಳ ಉತ್ಪಾದನೆಗೆ ಚುಕ್ಕಿ ಇಟ್ಟಿದೆ. ಕಂಪನಿಯ ಈ ಕಾರ್ಯತಂತ್ರವನ್ನು ಜಿಎಂ ಇಂಡಿಯಾದ ಪಿ ಬಾಲೆಂದ್ರನ್ ಖಚಿತಗೊಳಿಸಿದ್ದಾರೆ.

ದೇಶದಲ್ಲಿ ಜಿಎಂನ ಡೀಸೆಲ್ ಬೀಟ್ ಕಾರು ಅತ್ಯಧಿಕವಾಗಿ ಮಾರಾಟವಾಗುತ್ತಿವೆ. ಆದರೆ ಇತ್ತೀಚೆಗೆ ಪೆಟ್ರೋಲ್ ಬೀಟಿಗೆ ಗಮನಾರ್ಹವಾಗಿ ಬೇಡಿಕೆ ಇಳಿಕೆ ಕಾಣುತ್ತಿದೆ. ಷೆವರ್ಲೆ ಡೀಲರುಗಳು ಪೆಟ್ರೋಲ್ ಕಾರಿಗೆ ಈಗ ಆಕರ್ಷಕ ಡಿಸ್ಕೌಂಟ್ ಆಫರುಗಳನ್ನು ಪ್ರಕಟಿಸುತ್ತಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಡೀಸೆಲ್ ಕಾರುಗಳಿಗೆ ಅತ್ಯಧಿಕವಾಗಿ ಬೇಡಿಕೆ ಕಾಣುತ್ತಿದೆ. ಇತ್ತೀಚೆಗೆ ರಸ್ತೆಗಿಳಿದ ಸ್ವಿಫ್ಟ್ ಮತ್ತು ಟೊಯೊಟಾ ಎಟಿಯೋಸ್ ಲಿವಾದ ಶೇಕಡ 80ರಷ್ಟು ಗ್ರಾಹಕರು ಡೀಸೆಲ್ ಆವೃತ್ತಿಗಳಿಗೆ ಬುಕ್ಕಿಂಗ್ ಮಾಡಿದ್ದಾರೆ. ಫೋಕ್ಸ್ ವ್ಯಾಗನ್ ಇತ್ತೀಚೆಗೆ ಜೆಟ್ಟಾ ಮತ್ತು ಪಸ್ಸಾಟ್ ಡೀಸೆಲ್ ಕಾರನ್ನು ಮಾತ್ರ ಹೊರತಂದಿದೆ.

More from DriveSpark

Article Published On: Wednesday, September 28, 2011, 13:14 [IST]
English summary
General Motors has sid it had completely stopped production of petrol cars in its plants after demand for its diesel cars increased. GM is using its production lines to build diesel cars only. The fuel price difference between petrol and diesel has become so huge that people have virtually stopped buying them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+