ಮಹೀಂದ್ರ XUV500 ಕಾರು: 2 ದಿನದಲ್ಲಿ ದಾಖಲೆ ಬುಕ್ಕಿಂಗ್!

XUV500 SUV 6,000 bookings in just two days
ಎಕ್ಸ್ ಯುವಿ500 ಅಲಿಯಾಸ್ ಡಬ್ಲ್ಯು201 ಮಹೀಂದ್ರ ಕಂಪನಿಯ ಬಹುನಿರೀಕ್ಷಿತ ಕಾರು. ಇದನ್ನು ಮಹೀಂದ್ರ ಪರಿಚಯಿಸಿ ಎರಡು ದಿನ ಕಳೆದಿದೆ ಅಷ್ಟೇ! ಆಗಲೇ ಗ್ರಾಹಕರು ಮುಗಿಬಿದ್ದಿದ್ದಾರೆ. ನೂತನ ಎಸ್ ಯುವಿ ಕೇವಲ ಎರಡು ದಿನದಲ್ಲಿ ದಾಖಲೆ ಅಂದರೆ 6 ಸಾವಿರ ಯುನಿಟ್ ಬುಕ್ಕಿಂಗ್ ಆಗಿದೆ.

ಮಹೀಂದ್ರ ಎಕ್ಸ್ ಯುವಿ500 ಕಾರಿನ ಬೇಸ್ ಆವೃತ್ತಿ ಎಕ್ಸ್ ಶೋರೂಂ ದರ 10.8 ಲಕ್ಷ ರುಪಾಯಿ. ಅನಧಿಕೃತ ವರದಿಯೊಂದರ ಪ್ರಕಾರ ನೂತನ ಕಾರಿಗೆ ಅತ್ಯಧಿಕ ಸಂಖ್ಯೆಯಲ್ಲಿ ಗ್ರಾಹಕರಿಂದ ಬೇಡಿಕೆ ವ್ಯಕ್ತವಾಗಿದೆಯಂತೆ. ಕೇವಲ 2 ದಿನದಲ್ಲಿ 6 ಸಾವಿರ XUV500 ಬುಕ್ಕಿಂಗ್ ಆಗಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಕಂಪನಿಯು ಗ್ರಾಹಕರನ್ನು ಆಕರ್ಷಿಸಲು ಕೈಗೆಟುಕುವ ದರದಲ್ಲಿ ಎಕ್ಸ್ ಯುವಿ 500 ಕಾರನ್ನು ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಇದರ ದರ ಏರಿಕೆ ಕಾಣುವ ನಿರೀಕ್ಷೆಯಿದೆ. ಈ ಕಾರಿನ ಇಂಟಿರಿಯರ್ ನಲ್ಲಿ ಆರು ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಲೆಗ್ ರೂಮ್ ಸ್ಥಳಾವಕಾಶವೂ ಹೆಚ್ಚಿದೆ.

ಈ ಎಕ್ಸ್ ಯುವಿ ಕಾರು 2.2 ಲೀಟರಿನ ಸಿಆರ್ ಡಿಐ ಡೀಸೆಲ್ ಎಂಜಿನ್ ಹೊಂದಿದೆ. 140 ಹಾರ್ಸ್ ಪವರ್ ಮತ್ತು 330 ಎನ್ ಎಂ ಟಾರ್ಕ್ ನೀಡುತ್ತದೆ. Mahindra XUV500 ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಲ್ಲೇ ಅತ್ಯುತ್ತಮವಾದ ಮೈಲೇಜ್ ನೀಡುತ್ತದೆ. ಇದರಲ್ಲಿ ಪ್ರತಿಲೀಟರ್ ಗೆ 15 ಕಿ.ಮೀ. ಮೈಲೇಜ್ ಪಡೆಯಬಹುದು ಎಂದು ಕಂಪನಿ ಪ್ರಕಟಿಸಿದೆ.

ಇದು ಅಗ್ಗದ ಕಾರ್ ಹೇಗೆ? ಹತ್ತು ಲಕ್ಷ ರು. ಅಗ್ಗ ಅಂದರೆ ನೀವು ದುರುಗಟ್ಟಿನೋಡಬಹುದು. ಆದರೆ ಖಂಡಿತಾ ಈ ಸೆಗ್ಮೆಂಟಿನಲ್ಲಿ ಇದು ಅಗ್ಗದ ಕಾರು. ಇತರ ಎಸ್ ಯುವಿ ಕಾರುಗಳಿಗೆ ಹೋಲಿಸಿದರೆ ನೂತನ ಮಹೀಂದ್ರ ಎಕ್ಸ್ ಯುವಿ ದರ ಹೆಚ್ಚಾಗಿಲ್ಲ. ಇದರಲ್ಲಿರುವ ಫೀಚರುಗಳಿಗೆ ಹೋಲಿಸಿದರೆ ದರ ಕೈಗೆಟುಗುವಂತ್ತಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಇದರ ದರ 10.8 ಲಕ್ಷ ರು.ನಿಂದ ಆರಂಭವಾಗುತ್ತದೆ.

ಮಹೀಂದ್ರ ಎಕ್ಸ್ ಯುವಿ500 ದರ
* ಎಕ್ಸ್ ಯುವಿ 500 ಡಬ್ಲ್ಯು6 ದರ: 10.80 ಲಕ್ಷ ರುಪಾಯಿ
* ಎಕ್ಸ್ ಯುವಿ 500 ಡಬ್ಲ್ಯು8 (2 ವೀಲ್ ಡ್ರೈವ್) ದರ: 11.95 ಲಕ್ಷ ರುಪಾಯಿ
* ಎಕ್ಸ್ ಯುವಿ500 ಡಬ್ಲ್ಯು8 (4 ವೀಲ್ ಡ್ರೈವ್) ದರ: 12.88 ಲಕ್ಷ ರುಪಾಯಿ

More from DriveSpark

Article Published On: Tuesday, October 4, 2011, 10:20 [IST]
English summary
The much anticipated Mahindra XUV500 makes its global debut recently. Mahindra XUV500 getting good response from market due its lower price and greater features. Unconfirmed reports said that, Mahindra XUV500 bagged 6,000 bookings in just two days of its launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+