ಎ6 ಬಿಡುಗಡೆ ಮಾಡಿದ ಆಡಿ, ದರ 37 ಲಕ್ಷ ಇದೆ ನೋಡಿ!!

"ನಮ್ಮ ಹಳೆಯ ಕಾರುಗಳಿಗೆ ಹೋಲಿಸಿದರೆ ನೂತನ ಎ6 ಕೊಂಚ ಹಗುರ ಕಾರು. ಇದಕ್ಕೆ ಹೈಬ್ರಿಡ್ ಬಿಡಿಭಾಗಗಳನ್ನು ಬಳಸಿದ್ದು ಹಗುರವಾಗಲು ಕಾರಣ. ಭಾರತದ ಮಾರುಕಟ್ಟೆಗೆ ವಿಶೇಷವಾಗಿ 2.0 ಟಿಡಿಐ ಎಂಜಿನ್ ಆಯ್ಕೆಯ ಕಾರನ್ನು ಹೊರತಂದಿದ್ದೇವೆ" ಎಂದು ಆಡಿ ಇಂಡಿಯಾದ ಮುಖ್ಯಸ್ಥ ಮೈಕೆಲ್ ಪಾರ್ಷ್ಕೆ ಹೇಳಿದ್ದಾರೆ.
ನೂತನ ೆ6 ಸೆಡಾನ್ ಕಾರು 4.92 ಮೀಟರ್ ಉದ್ದ ಮತ್ತು 1.87 ಮೀಟರ್ ಅಗಲವಿದೆ. ಇದರ ಎತ್ತರ ಕೇವಲ 1.46 ಮೀಟರ್ ಇದೆ. ಇದು 2.0 ಟಿಡಿಐ ಇನ್ ಲೈನ್ 4 ಸಿಲಿಂಡರ್ ಹೊಂದಿದೆ.
ದೇಶದ ರಸ್ತೆಯಲ್ಲಿ ಆಡಿ ಕಂಪನಿಯ ಹಲವು ಆವೃತ್ತಿಗಳು ಈಗಾಗಲೇ ಜನಪ್ರಿಯವಾಗಿವೆ. ಎ4, ಎ6, ಎ7 ಸ್ಪೋರ್ಟ್ ಬ್ಯಾಕ್, ಎ8 ಎಲ್, ಕ್ಯೂ5, ಕ್ಯೂ7, ಆರ್ಎಸ್5 ಕೂಪ್ ಮಾರಾಟ ಮಾಡುತ್ತಿದೆ. ಇಷ್ಟೇ ಅಲ್ಲದೇ ದೇಶದ ರಸ್ತೆಯಲ್ಲಿ ಆಡಿ ಕಂಪನಿಯ ಸೂಪರ್ ಸ್ಪೋರ್ಟ್ಸ್ ಕಾರು ಆರ್8 ಮತ್ತು ಆರ್8 ಸ್ಪೈಡರ್ ಕೂಡ ಇದೆ.


Click it and Unblock the Notifications








