ನೂತನ ಹೋಂಡಾ ಬ್ರಿಯೊ ಬುಕ್ಕಿಂಗ್ ಜೋರು!!

ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಫೋರ್ಡ್ ಫಿಗೊ ಪ್ರತಿಸ್ಪರ್ಧೆಯ ನಡುವೆಯೂ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಹೋಂಡಾ ಬ್ರಿಯೊ ದರ 3.95 ಲಕ್ಷ ರು.ನಿಂದ 5.10 ಲಕ್ಷ ರು.ವರೆಗಿದೆ. ಈ ದರದ ಸೆಗ್ಮೆಂಟಿನಲ್ಲಿ ದೇಶದಲ್ಲಿ ಹಲವು ಕಾರುಗಳು ದೊರಕುತ್ತಿವೆ.
ಈ ಸೆಗ್ಮೆಂಟಿನಲ್ಲಿ ಮಾರುತಿ ಸ್ವಿಫ್ಟ್, ಫೋರ್ಡ್ ಫಿಗೊ, ಫೋಕ್ಸ್ ವ್ಯಾಗನ್ ಪೊಲೊ, ನಿಸ್ಸಾನ್ ಮೈಕ್ರಾ, ಷೆವರ್ಲೆ ಬೀಟ್ ಮತ್ತು ಟೊಯೊಟಾ ಎಟಿಯೋಸ್ ಲಿವಾ ಕಾರುಗಳಿವೆ. ಆದರೆ ನೂತನ ಬ್ರಿಯೊ ಕಾರು ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತಿದೆ.


Click it and Unblock the Notifications








