ಸ್ವಿಫ್ಟ್ ಗೆ ಪೈಪೋಟಿ ನೀಡಲಿದೆಯೇ ರೆನಾಲ್ಟ್ ಕಾರು

ರೆನಾಲ್ಟ್ ಕಾಂಪ್ಯಾಕ್ಟ್ ಕಾರನ್ನು ಮುಂದಿನ ವರ್ಷದ ಆರಂಭದಲ್ಲಿ ಕಂಪನಿ ಪರಿಚಯಿಸುವ ನಿರೀಕ್ಷೆಯಿದೆ. ಇದಕ್ಕೆ ಪೂರ್ವಭಾವಿಯಾಗಿ ಕಳೆದ ತಿಂಗಳು ಕಂಪನಿಯ ಮಿತ್ರಕಂಪನಿಗಳಾದ ರೆನಾಲ್ಟ್ ಮತ್ತು ನಿಸ್ಸಾನ್ ಚೇರ್ಮನ್, ಸಿಇಒ ಕಾರ್ಲೊಸ್ ಘೋಷ್ ಭಾರತಕ್ಕೆ ಭೇಟಿ ನೀಡಲಿದ್ದಾರಂತೆ.
ಭಾರತದಲ್ಲಿ ನಡೆಯುವ ಫಾರ್ಮುಲಾ ಒನ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಈ ಕಾನ್ಸೆಪ್ಟ್ ವರ್ಷನ್ ಕಾರನ್ನು ಘೋಷ್ ಅನಾವರಣ ಮಾಡುವ ನಿರೀಕ್ಷೆಯಿದೆ. ಫಾರ್ಮುಲಾ ಒನ್ ಗ್ರಾಂಡ್ ಪ್ರಿಕ್ಸ್ ದೇಶದಲ್ಲಿ ಅಕ್ಟೋಬರ್ 28-30ರಂದು ನಡೆಯಲಿದೆ. ಕಂಪನಿಯು ನೂತನ ಕಾಂಪ್ಯಾಕ್ಟ್ ಕಾರು ಮಾರುತಿ ಸುಜುಕಿ ಸ್ವಿಫ್ಟ್ ನೊಂದಿಗೆ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
ಒಂದು ಮೂಲದ ಪ್ರಕಾರ ನೂತನ ಕಾಂಪ್ಯಾಕ್ಟ್ ಕಾರಿನ ಬುಕ್ಕಿಂಗ್ ಕೂಡ ಶೀಘ್ರದಲ್ಲಿ ಆರಂಭವಾಗಲಿದೆ. ಫಾರ್ಮುಲಾ ಒನ್ ಪ್ರಮುಖ ಪ್ಲಾಟ್ ಫಾರ್ಮ್ ಆಗಿರುವುದರಿಂದ ಅಲ್ಲಿ ಕಾನ್ಸೆಪ್ಟ್ ಕಾರನ್ನು ದೇಶಕ್ಕೆ ಪರಿಚಯಿಸಲು ಕಂಪನಿ ನಿರ್ಧರಿಸಿದೆ. ನೂತನ ಕಾರಿನ ದರದ ಕುರಿತು ಮಾಹಿತಿ ದೊರಕಿಲ್ಲ.


Click it and Unblock the Notifications








