ಮಹೀಂದ್ರ XUV5OO ಎಷ್ಟು ಬುಕ್ಕಿಂಗ್ ಆಗಿದೆ?

Mahindra XUV500 bookings in six days
ಮುಂಬೈ, ಅ 08: ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ನೂತನ ಎಕ್ಸ್ ಯುವಿ5ಒಒ ಕಾರು ಎಷ್ಟು ಬುಕ್ಕಿಂಗ್ ಆಗಿದೆ? ಈ ಹಿಂದೆ ಒಂದು ವರದಿಯಲ್ಲಿ ಡೀಲರ್ ಮಾತುಕೇಳಿ 6 ಸಾವಿರ ಯುನಿಟ್ ಎಂದು ವರದಿ ಮಾಡಲಾಗಿತ್ತು. ಇದೀಗ ಕಂಪನಿಯು ಪಕ್ಕಾ ಮಾಹಿತಿ ನೀಡಿದೆ.

ನೂತನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಮಹೀಂದ್ರ ಎಕ್ಸ್ ಯುವಿ5ಒಒ ಕಾರು 5 ಸಾವಿರ ಯುನಿಟ್ ಬುಕ್ಕಿಂಗ್ ಆಗಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕರಾದ ರಾಜೇಶ್ ಜೆಜುರಿಕರ್ ಹೇಳಿದ್ದಾರೆ. ಆರು ದಿನಗಳ ಬುಕ್ಕಿಂಗ್ ದಾಖಲೆಯಿಂದ ಕಂಪನಿ ಖುಷಿಗೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಜನರನ್ನು ಸೆಳೆಯುವ ನಿರೀಕ್ಷೆ ವ್ಯಕ್ತಪಡಿಸಿದೆ.

ಅಕ್ಟೋಬರ್ ಒಂದರಂದು ಮುಂಬೈ, ಪುಣೆ, ದೆಹಲಿ, ಬೆಂಗಳೂರು ಮತ್ತು ಚೆನ್ನೈನಲ್ಲಿ ನೂತನ ಎಸ್ ಯುವಿ ಬುಕ್ಕಿಂಗ್ ಆರಂಭವಾಗಿತ್ತು. ಈ ಕಾರು ಸೆಪ್ಟಂಬರ್ 29ರಂದು ಬಿಡುಗಡೆಗೊಂಡಿತ್ತು. ಇದರ ದೆಹಲಿ ಎಕ್ಸ್ ಶೋರೂಂ ದರ 10.8 ಲಕ್ಷ ರು.ನಿಂದ 12.88 ಲಕ್ಷ ರು.ವರೆಗಿದೆ.

ನೂತನ ಎಕ್ಸ್ ಯುವಿ ಕಾರು 2.2 ಲೀಟರಿನ ಸಿಆರ್ ಡಿಐ ಡೀಸೆಲ್ ಎಂಜಿನ್ ಹೊಂದಿದೆ. ಇದು 140 ಹಾರ್ಸ್ ಪವರ್ ಮತ್ತು 330 ಎನ್ ಎಂ ಟಾರ್ಕ್ ನೀಡುತ್ತದೆ. ಈ ಕಾರು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಲ್ಲೇ ಅತ್ಯುತ್ತಮವಾದ ಮೈಲೇಜ್ ನೀಡುತ್ತದೆ. ಕಂಪನಿಯ ಪ್ರಕಾರ ಇದರಲ್ಲಿ ಪ್ರತಿಲೀಟರ್ ಗೆ 15 ಕಿ.ಮೀ. ಮೈಲೇಜ್ ಪಡೆಯಬಹುದು.

More from DriveSpark

Article Published On: Saturday, October 8, 2011, 11:30 [IST]
English summary
Mahindra and Mahindra received more than 5,000 bookings for XUV500 SUV in six days since official bookings opened. The new XUV 500 will be available in three variants and the entry level model will be priced at RS.10.80 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+