ಹೊಸ ಟಾಟಾ ಮಾಂಝಾ ರಸ್ತೆಗೆ, ಹಬ್ಬದ ಕೊಡುಗೆ

Tata Launches Manza Celebration Edition At Rs 7.94L
ಟಾಟಾ ಮೋಟರ್ಸ್ ನೂತನ ಮಾಂಝಾ ಸೆಲೆಬ್ರೆಷನ್ ಅಡಿಷನ್ ಎಕ್ಸ್ ಕ್ಯೂಟಿವ್ ಸೆಡಾನ್ ಕಾರನ್ನು ಅನಾವರಣ ಮಾಡಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ 7.94 ಲಕ್ಷ ರುಪಾಯಿ ಆಗಿದೆ. ನೂತನ ಸೆಲೆಬ್ರೆಷನ್ ಅಡಿಷನ್ ಕಾರು ಹಲವು ಆಕರ್ಷಕ ಫೀಚರುಗಳೊಂದಿಗೆ ರಸ್ತೆಗಿಳಿದೆ.

ಹಬ್ಬದ ಸೀಸನ್ ಗೆ ಹಲವು ಕಂಪನಿಗಳು ತಮ್ಮ ಹಳೆಯ ಆವೃತ್ತಿಗಳನ್ನು ಅಪ್ ಗ್ರೇಡ್ ಮಾಡಿ ರಸ್ತೆಗಿಳಿಸುತ್ತಿವೆ. ನೂತನ ಮಾಂಝಾ ಕೂಡ ಹಬ್ಬದ ಸೆಲೆಬ್ರೆಷನ್ ಅಡಿಷನ್ ಕಾರು.

ಅತ್ಯುತ್ತಮ ದರ್ಜೆಯ ಸವಾರಿಗೆ ಸೂಕ್ತವಾಗಂತೆ ಹೊಸ ಕಾರು ರಸ್ತೆಗಿಳಿದೆ. ವಿನ್ಯಾಸ, ಇಂಟಿರಿಯರ್ ಫಿಟ್ಟಿಂಗ್ಸ್ ಮತ್ತು ಕಾರ್ಯಕ್ಷಮತೆ ವಿಷಯದಲ್ಲಿ ಟಾಟಾ ಮಾಂಝಾ ಹೆಚ್ಚು ಜನಪ್ರಿಯವಾಗಿದೆ. ನೂತನ ಕಾರಿನ ಇಂಟಿರಿಯರ್ ಹಲವು ಬಣ್ಣಗಳಿಂದ ಇಷ್ಟವಾಗುತ್ತದೆ.

ಹೊಸ ಸೆಲೆಬ್ರೆಷನ್ ಅಡಿಷನ್ ಫೀಚರುಗಳು. ರಿವರ್ಸ್ ಸೆನ್ಸಾರ್, ಮೃದು ಸೀಟುಗಳು ಮತ್ತು ಇಂಟಿರಿಯರ್ ಕಲರ್ ಸ್ಕೀಮ್ ಮುಂತಾದ ಹೊಸ ಫೀಚರುಗಳಿವೆ. ಇದು ಕಂಪನಿಯ ಟಾಪ್ ಎಂಡ್ ಕಾರು ಎಲನ್ ನಂತೆಯೂ ಕಾಣುತ್ತದೆ. ಆದರೆ ಸೆಲೆಬ್ರೆಷನ್ ಅಡಿಷನ್ ಕಾರಿನ ಡೀಸೆಲ್ ಆವೃತ್ತಿಯು ಟಾಟಾ ಎಲನ್ ಗಿಂತ ಸುಮಾರು 27 ಸಾವಿರ ರು. ದುಬಾರಿ. ಪೆಟ್ರೋಲ್ ಸೆಲೆಬ್ರೆಷನ್ ಆವೃತ್ತಿಯು ಎಲನ್ ಗಿಂತ 17 ಸಾವಿರ ರು. ದುಬಾರಿಯಾಗಿದೆ.

ಟಾಟಾ ಮಾಂಝಾ ಸೆಲೆಬ್ರೆಷನ್ ಎಡಿಷನ್ ಕಾರಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಯಿಲ್ಲ. ಅಂದರೆ 1.4 ಲೀಟರಿನ, 90 ಹಾರ್ಸ್ ಪವರಿನ ಪೆಟ್ರೋಲ್ ಎಂಜಿನ್ ಮತ್ತು 1.3 ಲೀಟರ್, 90 ಹಾರ್ಸ್ ಪವರಿನ ಮಲ್ಟಿಜೆಟ್ ಡೀಸೆಲ್ ಎಂಜಿನ್ ಹೊಂದಿದೆ.

ಇದರೊಂದಿಗೆ ಟಾಟಾ ಮೋಟರ್ಸ್ ಮಾಂಝಾದ ಆಯ್ದ ಆವೃತ್ತಿಗಳಿಗೆ ಹಬ್ಬದ ವಿನಾಯಿತಿಗಳನ್ನು ಪ್ರಕಟಿಸಿದೆ. ಅಕ್ಟೋಬರ್ ಅಂತ್ಯದವರೆಗೆ ಮಾಂಝಾ ಕಾರುಗಳಿಗೆ ಸುಮಾರು 45 ಸಾವಿರ ರು. ಡಿಸ್ಕೌಂಟ್ ಇದೆಯಂತೆ. ಆದರೆ ನೂತನ ಸೆಲೆಬ್ರೆಷನ್ ಅಡಿಷನ್ ಕಾರಿಗೆ ಯಾವುದೇ ಡಿಸ್ಕೌಂಟ್ ಇಲ್ಲ.

More from DriveSpark

Article Published On: Tuesday, October 11, 2011, 10:33 [IST]
English summary
Tata Motors today launched the Manza Celebration Edition executive sedan at a mouth watering price of Rs.7.94 Lakhs9 ex showroom, Delhi). The Manza Celebration Edition is a sedan that is loaded with several features that you will only get as options in the regular Manza. Tata Motors has aptly launched the Manza Celebration Edition during the festival celebrations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+